ಬೊಕಾರೋ: ಮನೀಶ್ ಪಾಂಡೆ ಶತಕ ಹಾಗೂ ಶ್ರೇಯಸ್ ಗೋಪಾಲ್ ಅದ್ಭುತ ಬೌಲಿಂಗ್ ನೆರವಿನಿಂದ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಸರ್ವೀಸ್ ವಿರುದ್ಧ 80 ರನ್ಗಳ ಜಯ ದಾಖಲಿಸಿದೆ.
ಲೀಗ್ನ ತನ್ನ ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕರ್ನಾಟಕ ತಂಡ ನಾಯಕ ಮನೀಶ್ ಪಾಂಡೆ 54 ಎಸೆತಗಳಲ್ಲಿ 129 ರನ್ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 10 ಸಿಕ್ಸರ್ ಹಾಗೂ 12 ಬೌಂಡರಿ ಕೂಡಿತ್ತು. ದೇವದತ್ ಪಡಿಕ್ಕಲ್ 43 ಎಸೆತಗಳಲ್ಲಿ 4 ಸಿಕ್ಸರ್, 8 ಬೌಂಡರಿ ಸಹಿತ 75 ರನ್ಗಳಿಸಿ 250 ರನ್ಗಳ ಬೃಹತ್ ಮೊತ್ತಕ್ಕೆ ನೆರವಾದರು.