ದುಬೈ: ಮನೀಶ್ ಪಾಂಡೆ(83*) ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಸನ್ರೈಸರ್ಸ್ ಹೈದರಾಬಾದ್ ತಂಡ 8 ವಿಕೆಟ್ಗಳ ಅಂತರದಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
155 ರನ್ಗಳ ಗುರಿಯನ್ನು ಬೆನ್ನತ್ತಿದ ಸನ್ರೈಸರ್ಸ್ ಹೈದರಾಬಾದ್ ತಂಡ ಆರಂಭಿಕರಾದ ಡೇವಿಡ್ ವಾರ್ನರ್(4) ಹಾಗೂ ಜಾನಿ ಬೈರ್ಸ್ಟೋವ್(10) ವಿಕೆಟ್ ಅನ್ನು ಕೇವಲ 16 ರನ್ಗಳಾಗುವಷ್ಟರಲ್ಲಿ ಕಳೆದುಕೊಂಡು ಆಘಾತ ಅನುಭವಿಸಿತು.
ಆದರೆ ಮನೀಶ್ ಪಾಂಡೆ(83) ಹಾಗೂ ವಿಜಯ್ ಶಂಕರ್(52) ಸಿಡಿಸಿದ ಭರ್ಜರಿ ಅರ್ಧಶತಕದ ನೆರವಿನಿಂದ ಇನ್ನು 11 ಎಸೆತಗಳಿರುವಂತೆ ಹೈದರಾಬಾದ್ ತಂಡ ಗೆಲುವಿನ ನಗೆ ಬೀರಿತು. ಈ ಜೋಡಿ ಮುರಿಯದ ಮೂರನೇ ವಿಕೆಟ್ಗೆ 140 ರನ್ಗಳ ಬೃಹತ್ ಜೊತೆಯಾಟ ನಡೆಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಅದರಲ್ಲಿ ವಿಕೆಟ್ ಕಳೆದುಕೊಂಡ ಭಯವಿಲ್ಲದೆ ಆರ್ಭಟಿಸಿದ ಪಾಂಡೆ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರಲ್ಲದೆ, ಒಟ್ಟಾರೆ 47 ಎಸೆತಗಳಲ್ಲಿ 8 ಭರ್ಜರಿ ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸಿದರು. ಮನೀಶ್ ತಮ್ಮ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 8 ಸಿಕ್ಸರ್ ಸಿಡಿಸಿದ್ದು ವಿಶೇಷವಾಗಿತ್ತು. ಇವರಿಗೆ ಸೂಕ್ತ ಬೆಂಬಲ ನೀಡಿದ ವಿಜಯ್ ಶಂಕರ್ 51 ಎಸೆತಗಳಲ್ಲಿ 6 ಬೌಂಡರಿ ಸಹಿತ 52 ರನ್ಗಳಿಸಿ ಔಟಾಗದೆ ಉಳಿದರು.
ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್ ಮಾತ್ರ 2 ವಿಕೆಟ್ ಪಡೆದರು. ಉಳಿದ ಬ್ಯಾಟ್ಸ್ಮನ್ಗಳು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದು, ರಾಯಲ್ಸ್ ಸೋಲಿಗೆ ಕಾರಣವಾಯಿತು.
ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ಜೇಸನ್ ಹೋಲ್ಡರ್ ದಾಳಿಗೆ ಸಿಲುಕಿ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 154 ರನ್ಗಳಿಸಿತ್ತು. ಹೈದರಾಬಾದ್ ಪರ ಇಂದೇ ಮೊದಲ ಪಂದ್ಯವಾಡಿದ ಹೋಲ್ಡರ್ 3 ವಿಕೆಟ್ ಪಡೆದು ಮಿಂಚಿದರು.