ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ ಬ್ಯಾಟ್ಸ್‌ಮನ್ ಮನ್‌ದೀಪ್ ಸಿಂಗ್ ಅವರ ತಂದೆ ಹರ್ದೇವ್ ಸಿಂಗ್ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೆಂದು ತಿಳಿದುಬಂದಿದೆ.
ಪಂಜಾಬ್ ಕೇಸರಿ ಸ್ಪೋರ್ಟ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಕಳೆದ ತಿಂಗಳು ಹರ್ದೇವ್ ಸಿಂಗ್ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು ಅವರನ್ನು ಚಂಡೀಗಢದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದುಬಂದಿತ್ತು.
ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ ಸಲುವಾಗಿ ಮನ್‌ದೀಪ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಬಯೋ ಬಬಲ್ ನಲ್ಲಿದ್ದಾರೆ. ತಂದೆಯ ಅಂತಿಮ ಸಂಸ್ಕಾರಕ್ಕೆ ಭಾರತಕ್ಕೆ ವಾಪಸ್ ಬಾರದಿರಲು ನಿರ್ಧರಿಸಿರುವ ಅವರು ತಂದೆಯ ಆಸೆಯಂತೆ ಕ್ರಿಕೆಟ್ ಆಡುವುದಕ್ಕೆ ಹೊತ್ತು ನೀಡಿದ್ದರು. ಇಂದಿನ ಪಂದ್ಯವನ್ನು ಅವರಿಗೆ ಅರ್ಪಿಸಲು ಇನ್ನಿಂಗ್ಸ್ ಆರಂಭಿಸಿದ್ದ ಅವರು 14 ಎಸೆತಗಳಲ್ಲಿ 17 ರನ್ಗಳಿಸಿ ಔಟಾದರು.
ಈ ಕುರಿತು ಟ್ವೀಟ್ ಮಾಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ " ಕಳೆದ ರಾತ್ರಿ ತಂದೆಯನ್ನು ಕಳೆದುಕೊಂಡಿರುವ ಮಂದೀಪ್ ಸಿಂಗ್ ಇಂದು ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ " ಎಂದು ಮಾಹಿತಿ ನೀಡಿದೆ.