ದುಬೈ:ಲಸಿತ್ ಮಾಲಿಂಗ 13ನೇ ಆವೃತ್ತಿಯಲ್ಲಿ 27 ವಿಕೆಟ್ ಪಡೆದು ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು. ಆದರೆ ಮುಂಬೈ ತಂಡದ ಲಸಿತ್ ಮಾಲಿಂಗ ಈ ಆವೃತ್ತಿಯಲ್ಲಿ ಬುಮ್ರಾ ಪರ್ಪಲ್ ಕ್ಯಾಪ್ ಗೆಲ್ಲುತ್ತಾರೆಂದು ಬಯಸಿದ್ದರೆಂದು ಕೋಚ್ ಜಯನೆವರ್ದ ಹೇಳಿದ್ದಾರೆ.
ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ತಂಡವನ್ನು 5 ವಿಕೆಟ್ಗಳಿಂದ ಮಣಿಸಿ 5ನೇ ಬಾರಿ ಟ್ರೋಫಿ ಎತ್ತಿ ಹಿಡಿದಿತ್ತು. ಕೌಟುಂಬಿಕ ಕಾರಣದಿಂದ ಟೂರ್ನಿಯಿಂದ ಹಿಂದಿ ಸರಿದಿರುವ ಮಾಲಿಂಗ, ಈ ವರ್ಷದ ಐಪಿಎಲ್ನಲ್ಲಿ ಬುಮ್ರಾರಿಂದ ಶ್ರೇಷ್ಠ ಪ್ರದರ್ಶನ ಹೊರಬರುತ್ತದೆ, ಅವರೇ ಪರ್ಪಲ್ ಕ್ಯಾಪ್ ಪಡೆಯುತ್ತಾರೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಒಂದು ಪಂದ್ಯ ಮಿಸ್ ಮಾಡಿಕೊಂಡ ಹಾಗೂ ಕೊನೆಯ ಪಂದ್ಯದಲ್ಲಿ ವಿಕೆಟ್ ಪಡೆಯದ ಕಾರಣ ಪರ್ಪಲ್ ಕ್ಯಾಪ್ ಕೈತಪ್ಪಿತು.