ಕೊಲಂಬೊ :2011ರ ವಿಶ್ವಕಪ್ ಫೈನಲ್ ಪಂದ್ಯದ ಫಿಕ್ಸಿಂಗ್‌ನಲ್ಲಿ ಯಾವುದೇ ಆಟಗಾರರು ಭಾಗಿಯಾಗಿಲ್ಲ ಎಂದಿರುವ ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್‌ಗಮಾ ಹೇಳಿಕೆಗೆ ಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಲ ಜಯವರ್ಧನೆ ತಿರುಗೇಟು ನೀಡಿದ್ದಾರೆ.
ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು. ಇದರಲ್ಲಿ ಯಾವುದೇ ಕ್ರಿಕೆಟರ್ಸ್ ಭಾಗಿಯಾಗಿರಲಿಲ್ಲ. ಬದಲಾಗಿ ಬೇರೆ ಪಕ್ಷಗಳು ಶಾಮೀಲಾಗಿದ್ದವು ಎಂದು ಅಲುತ್‌ಗಮಾಗೆ ಹೇಳಿಕೆ ನೀಡಿದ ಬೆನ್ನಲ್ಲೆ ಶ್ರೀಲಂಕಾ ಸರ್ಕಾರ ತನಿಖೆ ನಡೆಸಲು ಆದೇಶ ನೀಡಿದೆ.
ಸಚಿವರ ಹೇಳಿಕೆ ಬಗ್ಗೆ ಟ್ವೀಟ್ ಮಾಡಿರುವ ಜಯವರ್ಧನೆ, 'ನಾವು 2011ರ ವಿಶ್ವಕಪ್ ಮಾರಾಟ ಮಾಡಿದ್ದೇವೆ. ಅದು ಒಂದು ದೊಡ್ಡ ವ್ಯವಹಾರವಾಗಿದೆ ಎಂದು ಕೆಲವರು ಆರೋಪಿಸಿದ್ದಾರೆ. ಪ್ಲೇಯಿಂಗ್ ಇಲೆವೆನ್ನಲ್ಲಿ ಇರುವ ಒಬ್ಬ ಆಟಗಾರರು ಕೂಡ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ. ಇದು ಹೇಗೆ ಸಾಧ್ಯ? 9 ವರ್ಷಗಳ ನಂತರ ನಾವು ಪ್ರಬುದ್ಧರಾಗುತ್ತಿದ್ದೇವೆ ಎಂದು ಭಾವಿಸುತ್ತೇನೆ' ಎಂದಿದ್ದಾರೆ.
2011ರ ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿ ಭಾರತೀಯ ಆಟಗಾರರು
'ಸರ್ಕಸ್ ಪ್ರಾರಂಭವಾಗಿದೆ ಎಂದು ಮಹೇಲಾ ಹೇಳಿದ್ದಾರೆ. ಸಂಗಕ್ಕಾರ ಮತ್ತು ಮಹೇಲಾ ಜಯವರ್ಧನೆ ಈ ಬಗ್ಗೆ ಏಕೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಮ್ಮ ಯಾವುದೇ ಆಟಗಾರರನ್ನು ನಾನು ಉಲ್ಲೇಖಿಸುತ್ತಿಲ್ಲ' ಎಂದು ಮಹಿಂದಾನಂದ ಅಲುತ್‌ಗಮಾಗೆ ಹೇಳಿದ್ದಾರೆ.