ಶಾರ್ಜಾ:ವುಮೆನ್ಸ್ ಟಿ20 ಚಾಲೆಂಜ್ನ ಮೊದಲ ಪಂದ್ಯ ರೋಚಕವಾಗಿ ಅಂತ್ಯಗೊಂಡಿದ್ದು, ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ತಂಡ 5 ವಿಕೆಟ್ಗಳ ಅಂತರದಿಂದ ಹಾಲಿ ಚಾಂಪಿಯನ್ಸ್ ಸೂಪರ್ ನೋವಾಸ್ ಗೆದ್ದು ಬೀಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸೂಪರ್ ನೋವಾಸ್ ವೆಲಾಸಿಟಿ ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 126 ರನ್ಗಳಿಸಿತ್ತು. 127 ರನ್ಗಳ ಗುರಿ ಪಡೆದ ಮಿಥಾಲಿ ಪಡೆ 19.5 ಓವರ್ಗಳಲ್ಲಿ ತಲುಪಿ ಉದ್ಘಾಟನಾ ಪಂದ್ಯದಲ್ಲಿ ಜಯ ಸಾಧಿಸಿದೆ.
127 ರನ್ಗಳ ಗುರಿ ಪಡೆದ ವೆಲಾಸಿಟಿ ಮೊದಲ ಓವರ್ನಲ್ಲೇ ಸ್ಫೋಟಕ ಬ್ಯಾಟರ್ ಡೇನಿಯಲ್ ವ್ಯಾಟ್ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಇದಾದ ಬೆನ್ನಲ್ಲೇ ಸತತ 3 ಬೌಂಡರಿ ಸಿಡಿಸಿದ ಶೆಫಾಲಿ ವರ್ಮಾ ಅದೇ ಓವರ್ನಲ್ಲಿ ಔಟಾದರು. ನಾಯಕಿ ಮಿಥಾಲಿ ರಾಜ್ ಕೂಡ 19 ಎಸೆತಗಳಲ್ಲಿ ಕೇವಲ 7 ರನ್ಗಳಿಸಿ ಔಟಾಗಿ ನಿರಾಶೆ ಮೂಡಿಸಿದರು. ಕರ್ನಾಟಕದ ವೇದಾ ಕೃಷ್ಣಮೂರ್ತಿ 28 ರನ್ಗಳಿಸಿ ಚೇತರಿಕೆ ನೀಡಿದರಾದರೂ ರಾಧ ಯಾದವ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.