ಕರ್ನಾಟಕ

karnataka

ETV Bharat / sports

ಇಶಾನ್​ ಕಿಶನ್​​​ ಆಟ ಮೆಚ್ಚಿಕೊಂಡ ಸೆಹ್ವಾಗ್​​​: ಧೋನಿಗೆ ಹೋಲಿಸಿದ್ದೇಕೆ? - india vs england t-20 series

'ಜಾರ್ಖಂಡ್​​ನ ಯುವ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​​, ಅದ್ಬುತ್​ ಬ್ಯಾಟಿಂಗ್​ ಮಾಡಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಇಶಾನ್​ ಅವರ ಭಯವಿಲ್ಲದ ಹಾಗೂ ಆಕ್ರಮಣಕಾರಿ ಬ್ಯಾಟಿಂಗ್ ಇಷ್ಟವಾಯಿತು' ಎಂದು ಸೆಹ್ವಾಗ್ ಹೇಳಿದ್ದಾರೆ.

Loved the fearlessness and attacking batting of Ishan Kishan: Virender Sehwag
ಇಶಾನ್​ ಕಿಶನ್​​​ ಆಟ ಮೆಚ್ಚಿಕೊಂಡ ಸೆಹ್ವಾಗ್

By

Published : Mar 15, 2021, 8:52 AM IST

ನವದೆಹಲಿ:ಅಂದು ವೈಜಾಗ್​ನಲ್ಲಿ ಕೇವಲ 123 ಎಸೆತಗಳಲ್ಲಿ 148 ರನ್​ಗಳನ್ನ ಗಳಿಸಿ ಗಮನ ಸೆಳೆದಿದ್ದ ಧೋನಿ ಮುಂದೆ ಭಾರತ ತಂಡದ ನಾಯಕನಾಗಿ ವಿಜೃಂಭಿಸಿದ್ದರು. ಇದೀಗ ಅಂತಹುದ್ದೇ ಆಟ ಆಡಿದ ಯುವ ಆಟಗಾರ ಇಶಾನ್​ ಕಿಶನ್​​​​​​ 32 ಎಸೆತಗಳಲ್ಲಿ 56 ರನ್​ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಟ್ವೀಟ್​ ಮಾಡಿರುವ ದಿಲ್ಲಿ ಸರದಾರ ವಿರೇಂದ್ರ ಸೆಹ್ವಾಗ್​, ಜಾರ್ಖಂಡ್​​ನ ಯುವ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​​, ಅದ್ಬುತ್​ ಬ್ಯಾಟಿಂಗ್​ ಮಾಡಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಇಶಾನ್​ ಅವರ ಭಯವಿಲ್ಲದ ಹಾಗೂ ಆಕ್ರಮಣಕಾರಿ ಬ್ಯಾಟಿಂಗ್ ಇಷ್ಟವಾಯಿತು ಎಂದಿದ್ದಾರೆ.

ಅಷ್ಟೇ ಅಲ್ಲ ಈ ಹಿಂದೆಯೂ ಇಂತಹುದ್ದೇ ಘಟನೆ ನಡೆದಿತ್ತು ಎಂದು ಹೇಳುವ ಮೂಲಕ ಧೋನಿ ಅವರ ಆರಂಭಿಕ ದಿನಗಳಿಗೆ ಹೋಲಿಕೆ ಮಾಡಿದ್ದಾರೆ. ಏಪ್ರಿಲ್ 2005ರಲ್ಲಿ ವಿಶಾಖಪಟ್ಟಣಂನಲ್ಲಿ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಅಂದಿನ ಭಾರತೀಯ ನಾಯಕ ಸೌರವ್ ಗಂಗೂಲಿ ಧೋನಿ ಅವರನ್ನು ಮೂರನೇ ಸ್ಥಾನಕ್ಕೆ ಬಡ್ತಿ ನೀಡಿ ಬ್ಯಾಟಿಂಗ್​ಗೆ ಇಳಿಸಿದ್ದರು.

ಇದನ್ನೂ ಓದಿ:ಕೊಹ್ಲಿ-ಇಶಾನ್ ಕಿಶನ್ ಅಬ್ಬರದ ಅರ್ಧಶತಕ.. ಆಂಗ್ಲರ ವಿರುದ್ಧ ಟೀಂ ಇಂಡಿಯಾ ಜಯಭೇರಿ..

ವೃತ್ತಿಜೀವನದಲ್ಲಿ ಆವರೆಗೂ ಧೋನಿ ಕೆಳ ಕ್ರಮಾಂಕದಲ್ಲೇ ಬ್ಯಾಟಿಂಗ್ ಮಾಡಿದ್ದರು. ಆದರೆ ಸೌರವ್​, ಧೋನಿ ಅವರನ್ನ ಮೇಲಿನ​ ಕ್ರಮಾಂಕದಲ್ಲಿ ಆಡಿಸುವ ನಿರ್ಧಾರ ಕೈಗೊಂಡಿದ್ದರು. ಪರಿಣಾಮ ಅವತ್ತು ಧೋನಿ ಸೆಂಚುರಿ ಬಾರಿಸಿದ್ದರು. ವೈಜಾಗ್‌ನಲ್ಲಿ ನಡೆದ ಆ ಪಂದ್ಯದಲ್ಲಿ ಧೋನಿ 123 ಎಸೆತಗಳಲ್ಲಿ 15 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳೊಂದಿಗೆ 148 ರನ್ ಗಳಿಸುವ ಮೂಲಕ ತಮ್ಮ ಸುವರ್ಣಾವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದರು.

ABOUT THE AUTHOR

...view details