ನವದೆಹಲಿ:ರಾಯಲ್ ಚಾಲೆಂಜರ್ಸ್ ತಂಡ ಸೇರಿಕೊಂಡಿರುವ ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್ ನಾಯಕ ವಿರಾಟ್ ಕೊಹ್ಲಿ ಜೊತೆ ಆಡುವುದಕ್ಕೆ ಹಾಗೂ ಅವರನ್ನು ಕ್ರಿಕೆಟ್ನಲ್ಲಿ ಚುರುಕಾಗಿರುವುದಕ್ಕೆ ಕಾರಣವಾದ ಅಂಶಗಳನ್ನು ತಿಳಿದುಕೊಳ್ಳಲು ಎದುರ ನೋಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
2020ಕ್ಕೆ ಐಪಿಲ್ ಯುಎಇನಲ್ಲಿ ಸೆಪ್ಟಂಬರ್ 19ರಿಂದ ಆರಂಭವಾಗಲಿದೆ. ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಪಾಲ್ಗೊಳ್ಳುವುದಕ್ಕೆ ದೇಶ ವಿದೇಶ ಕ್ರಿಕೆಟಿಗರು ತುದಿಗಾಲಲ್ಲಿ ನಿಂತಿದ್ದಾರೆ. 2019ರ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ಸೇರಿಕೊಂಡಿರುವ ಆಸೀಸ್ ವೇಗಿ ಕೇನ್ ರಿಚರ್ಡ್ಸನ್ ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್ ಅಂತಹ ಲೆಜೆಂಡ್ ಆಟಗಾರರ ಜೊತೆ ಒಂದೇ ತಂಡದಲ್ಲಿಆಡುವುದಕ್ಕೆ ತಾವೂ ಉತ್ಸುಕರಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಎಬಿಡಿ, ವಿರಾಟ್ ಹಾಗೂ ಡೇಲ್ ಸ್ಟೈನ್ ನಂತಹ ಲೆಜೆಂಡ್ಗಳೊಂದಿಗೆ ಆಡುವುದಕ್ಕೆ ಹೆಮ್ಮೆಯನ್ನಿಸುತ್ತಿದೆ. ಅವರಿಗೆ ಏನನ್ನೆ ಕಲಿತರು ನನಗೆ ಅದು ಬೋನಸ್ ಆಗಲಿದೆ. ನಾನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡುವುದಕ್ಕೆ ಎದುರು ನೋಡಿತ್ತಿದ್ದೇವೆ. ವಿಶ್ವದಲ್ಲಿನ ಸ್ಪರ್ಧಾತ್ಮಕ ಕ್ರಿಕೆಟಿಗರಲ್ಲಿ ವಿರಾಟ್ ಕೂಡ ಒಬ್ಬರು ಎಂದು ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅವರು ಅನುಭವಿ ಡೇಲ್ ಸ್ಟೇನ್‌ರಿಂದ ದೀರ್ಘಕಾಲದವರೆಗೆ ಕ್ರಿಕೆಟ್ನ ಎಲ್ಲಾ ಸ್ವರೂಪಗಳಲ್ಲಿ ಹೇಗೆ ಸ್ಥಿರವಾಗಿರಬೇಕು ಎಂಬುದನ್ನು ಬಗ್ಗೆ ಕಲಿಯಲು ಬಯಸುತ್ತೇನೆ ಎಂದು ಆಸೀಸ್ ಪರ 25 ಪಂದ್ಯಗಳಲ್ಲಿ 39 ವಿಕೆಟ್ ಪಡೆದಿರುವ ರಿಚರ್ಡ್ಸನ್ ಹೇಳಿದ್ದಾರೆ.
ರಿಚರ್ಡ್ಸನ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 14 ಪಂದ್ಯಗಳನ್ನು ಆಡಿದ್ದು, 18 ವಿಕೆಟ್ ಪಡೆದಿದ್ದಾರೆ. ಆಸೀಸ್ ಬೌಲರ್ 2013 ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ, 2014 ರಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು 2016 ರಲ್ಲಿ ಆರ್‌ಸಿಬಿ ಪರ ಆಡಿದ್ದರು.