ಕರ್ನಾಟಕ

karnataka

ETV Bharat / sports

ಬಿಸಿಸಿಐ ನಿರ್ಧಾರ ಸ್ವಾಗತಾರ್ಹ: ಮಹಿಳಾ ಟಿ-20  ಆಡಲು ಕಾತರಳಾಗಿದ್ದೇನೆ ಎಂದ ಆಟಗಾರ್ತಿ - Smriti Mandhana

ಈಗಾಗಲೇ ಪುರುಷರ ಐಪಿಎಲ್​ ಟೂರ್ನಿಯನ್ನು ಯುಎಇನಲ್ಲಿ ಸೆಪ್ಟೆಂಬರ್​ 19ರಿಂದ ನವೆಂಬರ್​ 10ರ ವರೆಗೆ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಇನ್ನು ಪ್ರತಿ ವರ್ಷದಂತೆ ಪುರುಷರ ಪ್ಲೇ ಆಫ್​ ಸಂದರ್ಭದಲ್ಲಿ ಮಹಿಳಾ ಐಪಿಎಲ್ ಟೂರ್ನಿ ನಡೆಸಲಾಗುವುದು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಸ್ಮೃತಿ ಮಂಧಾನ
ಸ್ಮೃತಿ ಮಂಧಾನ

By

Published : Aug 4, 2020, 1:45 PM IST

ನವದೆಹಲಿ:ಮಹಿಳಾ ಟಿ -20 ಚಾಲೆಂಜ್​ ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ದವಿದೆ ಎಂದು ಸೌರವ್​ ಗಂಗೂಲಿ ಹೇಳಿರುವುದಕ್ಕೆ ಭಾರತ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಸ್ವಾಗತಿಸಿದ್ದು, ಈ ಟೂರ್ನಮೆಂಟ್​ನಲ್ಲಿ ಆಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

ಈಗಾಗಲೇ ಪುರುಷರ ಐಪಿಎಲ್​ ಟೂರ್ನಿಯನ್ನು ಯುಎಇನಲ್ಲಿ ಸೆಪ್ಟೆಂಬರ್​ 19 ರಿಂದ ನವೆಂಬರ್​ 10ರ ವರೆಗೆ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಇನ್ನು ಪ್ರತಿವರ್ಷದಂತೆ ಪುರುಷರ ಪ್ಲೇ ಆಫ್​ ಸಂದರ್ಭದಲ್ಲಿ ಮಹಿಳಾ ಐಪಿಎಲ್ ಟೂರ್ನಿ ನಡೆಸಲಾಗುವುದು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

"ಸ್ವಾಗತಾರ್ಹವಾದ ಬೆಳವಣಿಗೆ, ಮಹಿಳಾ ಟಿ -20 ಚಾಲೆಂಜ್​ನಲ್ಲಿ ಆಡುವುದಕ್ಕೆ ಎದುರು ನೋಡುತ್ತಿದ್ದೇನೆ" ಎಂದು ಸ್ಮೃತಿ ಮಂಧಾನ ಟ್ವೀಟ್ ಮಾಡಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ಫ್ಲೇ ಆಫ್ ಸಂದರ್ಭದಲ್ಲಿ ಮೂರು ತಂಡಗಳ 4 ಪಂದ್ಯಗಳನ್ನಾಡಲಿದೆ ಎಂದು ಬಿಸಿಸಿಐ ಭಾನುವಾರ ಸ್ಪಷ್ಟಪಡಿಸಿತ್ತು.

ಇನ್ನು ಈ ನಿರ್ಧಾರವನ್ನು ಸ್ವಾಗತಿಸಿದ್ದ ಮಿಥಾಲಿ ರಾಜ್ ಮುಂದಿನ ವರ್ಷ ನ್ಯೂಜಿಲ್ಯಾಂಡ್​ನಲ್ಲಿ ನಡೆಯಲಿರುವ 50 ಓವರ್​ಗಳ ವಿಶ್ವಕಪ್​ ಅಭಿಯಾನಕ್ಕೆ ಉತ್ತಮ ಆರಂಭ ಎಂದಿದ್ದರು. ಹಿರಿಯ ವೇಗಿ ಜೂಲನ್ ಗೋಸ್ವಾಮಿ, ಪೂನಂ ಯಾದವ್, ವೇದಕೃಷ್ಣಮೂರ್ತಿ ಸೇರಿದಂತೆ ಹಲವು ಭಾರತೀಯ ಆಟಗಾರ್ತಿಯರು ಕೂಡ ಸಂತಸ ವ್ಯಕ್ತಪಡಿಸಿದ್ದರು.

ಆದರೆ, ಬಿಸಿಸಿಐ ನಿರ್ಧಾರಕ್ಕೆ ಆಸ್ಟ್ರೇಲಿಯಾದ ಆಟಗಾರ್ತಿಯರಾದ ಅಲಿಸಾ ಹೀಲಿ ಮತ್ತು ರಾಚೆಲ್ ಹೇನ್ಸ್ ಈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 29ರ ವರೆಗೆ ಮಹಿಳಾ ಬಿಗ್ ಬಾಸ್ ಲೀಗ್ ನಡೆಯಲಿರುವುದರಿಂದ ಐಪಿಎಲ್​ ಟೂರ್ನಿಗೆ ಪಾಲ್ಗೊಳ್ಳುವ ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಯಾವ ಟೂರ್ನಮೆಂಟ್​ಗೆ ಪಾಲ್ಗೊಳ್ಳಬೇಕೆಂದು ಗೊಂದಲ ಉಂಟಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ABOUT THE AUTHOR

...view details