ಕೋಲ್ಕತ್ತಾ: ಇಂದು ಮಧ್ಯಾಹ್ನದಿಂದ ಅರಂಭವಾಗುವ ಭಾರತ ಮತ್ತು ಬಾಂಗ್ಲಾ ನಡುವಿನ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಕೋಲ್ಕತ್ತಾ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಗರವೆಲ್ಲ ಪಿಂಕ್ ಬಣ್ಣಕ್ಕೆ ತಿರುಗಿದೆ.
ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯವನ್ನ ಪ್ರೋತ್ಸಾಹಿಸುವ ಸಲುವಾಗಿ ನಗರದ ಪ್ರಮುಖ ಕಟ್ಟಡ, ಮಾಲ್ ಮತ್ತು ಪ್ರಮುಖ ಸರ್ಕಲ್ಗಳನ್ನ ಗುಲಾಬಿ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಇಷ್ಟೇ ಅಲ್ಲದೆ, ಗ್ರಾಹಕರನ್ನ ಸೆಳೆಯಲು ಪ್ರಮುಖ ಸ್ವೀಟ್ ತಯಾರಕರು ಕೂಡಾ ಪಿಂಕ್ ಬಣ್ಣದ ಸಿಹಿ ತಿನಿಸುಗಳನ್ನ ತಯಾರಿಸುತ್ತಿದ್ದಾರೆ. ಈ ಎಲ್ಲಾ ಫೋಟೋಗಳನ್ನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮುಂದಿನ 5 ದಿನಗಳಿಗಾಗಿ ಬಿಸಿಸಿಐ ಮತ್ತು ಕೋಲ್ಕತ್ತಾ ಕ್ರಿಕೆಟ್ ಬೋರ್ಡ್ ಎದುರು ನೋಡುತ್ತಿದೆ ಎಂದಿದ್ದಾರೆ.
ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ:
ಭಾರತ ಮತ್ತು ಭಾಂಗ್ಲಾ ನಡುವಿನ ಅಹರ್ನಿಶಿ ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಚಾಲನೆ ನೀಡಲಿದ್ದು, ಈಗಾಗಲೇ ಕೋಲ್ಕತ್ತಾಗೆ ಆಗಮಿಸಿದ್ದಾರೆ. ಸುಭಾಶ್ ಚಂದ್ರ ಭೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶೇಖ್ ಹಸೀನಾ ಅವರನ್ನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ವಾಗತಿಸಿದ್ದಾರೆ.