ಕರ್ನಾಟಕ

karnataka

ETV Bharat / sports

ಬ್ಯಾಟ್​​ ಹಿಡಿದು ಫೀಲ್ಡ್​​ಗೆ ಎಂಟ್ರಿ ಕೊಟ್ರು ಮಾಸ್ಟರ್​​ ಸಚಿನ್​: ಕ್ರಿಕೆಟ್​ ದೇವರು ಭಾವುಕ! - ಸಚಿನ್​ ತೆಂಡುಲ್ಕರ್​​

ಆನಂದ್​ ಮೆಹ್ತಾ ಎಂಬುವವರು ತಮ್ಮ ಮಗನಿಗೆ ಟೀಂ ಇಂಡಿಯಾದ ಜೆರ್ಸಿ ತೊಡಿಸಿ, ಕೈಗೆ ಬ್ಯಾಟ್​ ಕೊಟ್ಟು ಹೈದಾರಾಬಾದ್​​ನ ಎಲ್​​ ಬಿ ಸ್ಟೇಡಿಯಂನಲ್ಲಿ ಫೋಟೋ ತೆಗೆದಿದ್ದಾರೆ. ಅಲ್ಲದೇ ಈ ಫೋಟೋಗಳನ್ನು ತಮ್ಮ ಟ್ವಿಟ್ಟರ್​​ನಲ್ಲಿ ಹಾಕಿ ಸಚಿನ್​​ಗೆ ಟ್ಯಾಗ್​ ಮಾಡಿದ್ದಾರೆ.

little sachin in lb stadium
ಬ್ಯಾಟ್​​ ಹಿಡಿದು ಫಿಲ್ಡ್​​ಗೆ ಎಂಟ್ರಿ ಕೊಟ್ರು ಮಾಸ್ಟರ್​​ ಸಚಿನ್​ : ಕ್ರಿಕೆಟ್​ ದೇವರು ಭಾವುಕ!

By

Published : Feb 29, 2020, 8:10 PM IST

ಕ್ರಿಕೆಟ್​ ದೇವರು, ಕ್ರಿಕೆಟ್​ ದಂತಕಥೆ ಅಂತೆಲ್ಲ ಕರೆಸಿಕೊಳ್ಳುವ ಮಾಸ್ಟರ್​, ಬ್ಲಾಸ್ಟರ್​​ ಸಚಿನ್​ ತೆಂಡೂಲ್ಕರ್​ ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಿಸಿ ಬರೋಬ್ಬರಿ ಆರು ವರ್ಷಗಳೇ ಕಳೆದು ಹೋಗಿದೆ. ಆದ್ರೆ ಇವರ ಅಭಿಮಾನಿಗಳ ಅಭಿಮಾನ ಮಾತ್ರ ಇಂದಿಗೂ ಕೂಡ ಹಾಗೆಯೇ ಇದೆ. ಇದಕ್ಕೆ ಸಾಕ್ಷಿಯಾಗಿದೆ ಅಭಿಮಾನಿಯೊಬ್ಬ ಶೇರ್​ ಮಾಡಿರುವ ಆ ಪೋಸ್ಟ್​​.

ಆನಂದ್​ ಮೆಹ್ತಾ ಎಂಬುವವರು ತಮ್ಮ ಮಗನಿಗೆ ಟೀಂ ಇಂಡಿಯಾದ ಜೆರ್ಸಿ ತೊಡಿಸಿ, ಕೈಗೆ ಬ್ಯಾಟ್​ ಕೊಟ್ಟು ಹೈದರಾಬಾದ್​​ನ ಎಲ್​​ ಬಿ ಸ್ಟೇಡಿಯಂನಲ್ಲಿ ಫೋಟೋ ತೆಗೆದಿದ್ದಾರೆ. ಅಲ್ಲದೇ ಈ ಫೋಟೋಗಳನ್ನು ತಮ್ಮ ಟ್ವಿಟ್ಟರ್​​ನಲ್ಲಿ ಹಾಕಿ ಸಚಿನ್​​ಗೆ ಟ್ಯಾಗ್​ ಮಾಡಿದ್ದಾರೆ.

ಆನಂದ್​ ಮೆಹ್ತಾ ತಮ್ಮ ಮಗ ಶೇಷ್ಠ ಮೆಹ್ತಾ ಫೋಟೋ ಹಾಕಿ, ನೀವು ಕ್ರಿಕೆಟ್​ ಬದುಕಿಗೆ ನಿವೃತ್ತಿ ಪಡೆದಿರಬಹುದು ಆದ್ರೆ ನಮ್ಮ ಮನಸ್ಸಿಂದ ಅಲ್ಲ. ನಮ್ಮ ಲಿಟ್ಟಲ್​ ಮಾಸ್ಟರ್​ ಶ್ರೇಷ್ಠ ಮೆಹ್ತಾನಿಂದ ನಿಮಗೆ ಗೌರವ ಎಂದು ಬರೆದುಕೊಂಡಿದ್ದಾರೆ.

ಈ ಟ್ವೀಟ್​​ಗೆ ಪ್ರತಿಕ್ರಿಯೆ ನೀಡಿರುವ ಸಚಿನ್​, ಫೋಟೋ ಶೇರ್​ ಮಾಡಿದ್ದಕ್ಕೆ ಧನ್ಯವಾದಗಳು. ಶ್ರೇಷ್ಠ ಮೆಹ್ತಾ ಮತ್ತು ಕುಟುಂಬಕ್ಕೆ ಆಲ್​ ದಿ ಬೆಸ್ಟ್​ ಎಂದಿದ್ದಾರೆ.

ABOUT THE AUTHOR

...view details