ಸೈಲೆಟ್(ಬಾಂಗ್ಲಾದೇಶ): ಲಿಟ್ಟನ್ ದಾಸ್ ಅವರ ಭರ್ಜರಿ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಜಿಂಬಾಂಬ್ವೆಯನ್ನು 169 ರನ್ಗಳ ಅಂತರದಿಂದ ಬಗ್ಗುಬಡಿದಿದೆ.
ಸೈಲೆಟ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ, ಲಿಟ್ಟನ್ ದಾಸ್(126) ಅವರ ಭರ್ಜರಿ ಶತಕ, ಮೊಹಮ್ಮದ್ ಮಿಥುನ್(50) ಅವರ ಅರ್ಧಶತಕದ ನೆರವಿನಿಂದ 321 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಜಿಂಬಾಬ್ವೆ ಪರ ಕ್ರಿಸ್ ಎಂಪೋಫು 2 ವಿಕೆಟ್ ಪಡೆದರೆ, ಕಾರ್ಲ್ ಮಂಬಾ, ವೆಸ್ಲೆ ಮ್ಯಾಧೆವರ್, ಟ್ರಿಪಾನೋ ಹಾಗೂ ಮುಟೊಂಬೊಡ್ಜಿ ತಲಾ ಒಂದು ವಿಕೆಟ್ ಪಡೆದರು.