ಕರ್ನಾಟಕ

karnataka

ETV Bharat / sports

ಕುಲ್​ದೀಪ್ ಯಾದವ್​​​​​ರನ್ನು ಹಾಡಿ ಹೊಗಳಿದ ಪಾಕ್​ ಮಾಜಿ ಸ್ಪಿನ್ನರ್ ಮುಷ್ತಾಕ್​​​

ಪಾಕ್​​ ಮಾಜಿ ಕ್ರಿಕೆಟರ್​​ ಸಕ್ಲೇನ್​ ಮುಷ್ತಾಕ್​ ಭಾರತೀಯ ಆಟಗಾರರ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸ್ಪಿನ್ನರ್ ಕುಲ್​ದೀಪ್​​ ಯಾದವ್​​ ಒಬ್ಬ ವಿಶಾಲ ಹೃದಯದ ವ್ಯಕ್ತಿ ಹಾಗೂ ಉತ್ತಮ ಆಟಗಾರ ಎಂದಿರುವ ಮುಷ್ತಾಕ್​​, ರವಿಚಂದ್ರನ್​ ಅಶ್ವಿನ್​ ಜಗತ್ತಿನ ಅತ್ಯುತ್ತಮ ಸ್ಪಿನ್ನರ್ ಎಂದು ಅಭಿಪ್ರಾಯಪಟ್ಟಿದ್ದಾರೆ.

Like Kuldeep Yadav a lot, he has got a big heart: Saqlain Mushtaq
ಕುಲ್​ದೀಪ್ ಯಾದವ್​​​​​ರನ್ನು ಹಾಡಿ ಹೊಗಳಿದ ಪಾಕ್​ ಮಾಜಿ ಸ್ಪಿನ್ನರ್ ಮುಷ್ತಾಕ್​​​

By

Published : Jun 16, 2020, 6:55 PM IST

ಲಾಹೋರ್(ಪಾಕಿಸ್ತಾನ)​​:ಭಾರತ ಕ್ರಿಕೆಟ್​ ತಂಡದ ಪ್ರತಿಭಾನ್ವಿತ ಸ್ಪಿನ್ನರ್ ಕುಲದೀಪ್ ಯಾದವ್​​ರನ್ನು ಪಾಕಿಸ್ತಾನ ಮಾಜಿ ಕ್ರಿಕೆಟರ್​​ ಸಕ್ಲೇನ್​ ಮುಷ್ತಾಕ್​​​ ಹಾಡಿ ಹೊಗಳಿದ್ದಾರೆ. ಕುಲ್​​ದೀಪ್​ ಚುಟುಕು ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ ಎಂದಿದ್ದಾರೆ. ​

ಪಾಕ್​​ ಮಾಜಿ ಸ್ಪಿನ್ನರ್ ಮುಷ್ತಾಕ್​ ಪ್ರಕಾರ ಕೊರೊನಾದಿಂದ ಪಂದ್ಯಾವಳಿಗಳು ರದ್ದಾಗುವ ಮೊದಲು ಕುಲ್​ದೀಪ್​​ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದರಂತೆ. ಆದರೆ ಕುಲದೀಪ್​​ ವಿಶಾಲ ಹೃದಯದ ಸಮರ್ಥ ಸ್ಪಿನ್ನರ್ ಎಂದು ಗುಣಗಾನ ಮಾಡಿದ್ದಾರೆ.

ಚುಟುಕು ಫಾರ್ಮೆಟ್​​​​​ಗಳಲ್ಲಿ ಕುಲ್​​ದೀಪ್​​ ನಿಜಯಾವಗಿಯೂ ಒಬ್ಬ ಉತ್ತಮ ಸ್ಪಿನ್ನರ್. ಅವರ ಬಳಿ ನಾನು ಕೆಲವು ಬಾರಿ ಮಾತನಾಡಿದ್ದೇನೆ. ಈ ವೇಳೆ ನನಗೆ ಅವರು ತುಂಬಾ ಸುಶಿಕ್ಷಿತ ಕ್ರಿಕೆಟರ್​​ನಂತೆ ಕಂಡಿದ್ದಾರೆ. ಅಲ್ಲದೆ ಅವರ ವಿಶಾಲ ಮನೋಭಾವ ನನಗೆ ಹೆಚ್ಚು ಇಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

ಕುಲ್​​ದೀಪ್ ಈವರೆಗೆ 6 ಟೆಸ್ಟ್, 60 ಏಕದಿನ ಮತ್ತು 21 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಕ್ರಮವಾಗಿ 24, 104 ಹಾಗೂ 39 ವಿಕೆಟ್​ಗಳನ್ನು ಪಡೆದಿದ್ದಾರೆ.

ಇದಲ್ಲದೆ ಟೆಸ್ಟ್ ಕ್ರಿಕೆಟ್​ನಲ್ಲಿ ತವರಿನ ಅಂಗಳದಲ್ಲಿ ಆಸ್ಟ್ರೇಲಿಯಾದ ನಾಥನ್​​ ಲಿಯಾನ್​​ ಅತ್ಯುತಮ ಸ್ಪಿನ್ನರ್ ಆಗಿದ್ದಾರೆ. ಆದರೆ ರವಿಚಂದ್ರನ್​ ಅಶ್ವಿನ್​​ಗಿಂತಲೂ ಉತ್ತಮವಾದ ಸ್ವಿನ್ನರ್ ಈ ಜಗತ್ತಿನಲ್ಲಿಯೇ ಬೇರಾರು ಇಲ್ಲವೆಂದು ಮುಷ್ತಾಕ್​​ ಅಭಿಪ್ರಾಯಪಟ್ಟಿದ್ದಾರೆ. ತವರು ನೆಲದಲ್ಲಿ ಅಶ್ವಿನ್​ ಒಬ್ಬ ಉತ್ತಮ ಆಟಗಾರ ಹಾಗೂ ರವೀಂದ್ರ ಜಡೇಜಾ ಕೂಡ ಟ್ರ್ಯಾಕ್​ ರೆಕಾರ್ಡ್ ಹೊಂದಿದ್ದಾರೆ ಎಂದಿದ್ದಾರೆ.

ಇದಲ್ಲದೆ ಪಾಕಿಸ್ತಾನ ಟೆಸ್ಟ್ ಟೀಮ್​ ನಾಯಕ ಬಾಬರ್ ಅಜಾಮ್​ ಹಾಗೂ ವಿರಾಟ್​ ಕೊಹ್ಲಿ ನಡುವೆ ಹೋಲಿಕೆ ಅಸಾಧ್ಯ ಎಂದಿದ್ದಾರೆ. ಬಾಬರ್ ಹೆಚ್ಚು ಶಾಂತ ಸ್ವಭಾವದ ವ್ಯಕ್ತಿ. ಅಲ್ಲದೆ ಇಬ್ಬರೂ ಉತ್ತಮ ಆಟಗಾರರೇ, ಪ್ರಬಲ ಎದುರಾಳಿಗಳು. ಇಬ್ಬರಲ್ಲೂ ಹೆಚ್ಚು ರನ್​​​​ ಗಳಿಸುವ ಉತ್ಸಾಹವಿದೆ ಎಂದಿದ್ದಾರೆ.

ABOUT THE AUTHOR

...view details