ಹೈದರಾಬಾದ್: ಟೀಂ ಇಂಡಿಯಾವನ್ನು ವಿಶ್ವಕ್ರಿಕೆಟ್ನಲ್ಲಿ ಉನ್ನತ ಸ್ಥಾನಕ್ಕೇರಿಸಿದ ಹಿರಿಯ ಆಟಗಾರ ಎಂ.ಎಸ್.ಧೋನಿ ಇಚ್ಛೆಯಂತೆ ಸೇನೆಯಲ್ಲಿ ಸೇರುವ ದಿನಾಂಕ ಅಂತಿಮವಾಗಿದೆ.
ಧೋನಿಗೆ ಈಗಾಗಲೇ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿದ್ದು ಇದೇ ವಿಚಾರಕ್ಕೆ ಕೆಲ ದಿನಗಳ ತರಬೇತಿಯನ್ನೂ ಪಡೆದಿದ್ದರು. ವಿಂಡೀಸ್ ಪ್ರವಾಸದಿಂದ ಹೊರಗುಳಿದಿರುವ ಮಾಹಿ, ಜುಲೈ 31ರಂದು ಪ್ಯಾರಾಚೂಟ್ ರೆಜಿಮೆಂಟ್ ಕೂಡಿಕೊಳ್ಳಲಿದ್ದಾರೆ.
ಕಾಶ್ಮೀರದಲ್ಲಿರುವ ವಿಕ್ಟರ್ ಫೋರ್ಸ್ ಅನ್ನು ಧೋನಿ ಇದೇ 31ರಂದು ಸೇರಲಿದ್ದು ಆಗಸ್ಟ್ 15ರವರೆಗೆ ವಿವಿಧ ರೀತಿಯ ತರಬೇತಿ ಪಡೆಯಲಿದ್ದಾರೆ. ಈ ಅವಧಿಯಲ್ಲಿ ಗಸ್ತು ತಿರುಗುವುದು, ಕಾವಲುಗಾರಿಕೆ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಮಾಹಿ ಪಾಲ್ಗೊಳ್ಳಲಿದ್ದಾರೆ.
ಧೋನಿ ಮಹತ್ಕಾರ್ಯಕ್ಕೆ ಸಿಕ್ತು ಗ್ರೀನ್ ಸಿಗ್ನಲ್... ಸೇನಾ ಸಮವಸ್ತ್ರದಲ್ಲಿ ಮಿಂಚಲಿರುವ ಮಾಹಿ..!
ಸುಮಾರು ಎರಡು ವಾರಗಳ ತರಬೇತಿಯಲ್ಲಿ ಧೋನಿ ಸೇನೆಯ ಜೊತೆಯಲ್ಲಿಯೇ ಸಂಪೂರ್ಣವಾಗಿ ಸಮಯ ಕಳೆಯಲಿದ್ದಾರೆ. ಪ್ಯಾರಾಚೂಟ್ ರೆಜಿಮೆಂಟ್ನಲ್ಲಿ ಧೋನಿ ತರಬೇತಿಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕೆಲ ದಿನಗಳ ಹಿಂದೆ ಅನುಮತಿ ನೀಡಿದ್ದರು. ಆದರೆ ಸೇನಾ ಕಾರ್ಯಾಚರಣೆಯಲ್ಲಿ ಧೋನಿಗೆ ಪಾಲ್ಗೊಳಲು ಅವಕಾಶ ನೀಡಿಲ್ಲ.