ಕರ್ನಾಟಕ

karnataka

ETV Bharat / sports

ತಂಡದಿಂದ ರಿಲೀಸ್​ ಮಾಡ್ತಿದ್ದಂತೆ ಐಪಿಎಲ್​ಗೆ ಗುಡ್​ಬೈ ಹೇಳಿದ ಇಂಗ್ಲೆಂಡ್​ ಆಲ್​ರೌಂಡರ್ - ಇಂಗ್ಲೆಂಡ್​ ಆಲ್​ರೌಂಡರ್​ ಲೈಮ್ ಲಿವಿಂಗ್​ಸ್ಟನ್​

ಕಳೆದ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಪರ ಆಡಿದ್ದ ಇಂಗ್ಲೆಂಡ್​ನ ಆಲ್​ರೌಂಡರ್​ ಲೈಮ್​ ಲಿವಿಂಗ್​ಸ್ಟನ್​ ಈ ಬಾರಿ ಹರಾಜಿಗೂ ಮುನ್ನವೇ ತಂಡ ಅವರನ್ನು ರಿಲೀಸ್​ ಮಾಡಿತ್ತು. ಡಿಸೆಂಬರ್​ 19 ರಂದು 2020ರ ಆವೃತ್ತಿಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಆದ್ರೆ ಲೈಮ್​ 2020ರ ಐಪಿಎಲ್​ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

Liam Livingstone IPL

By

Published : Nov 19, 2019, 1:43 PM IST

ಲಂಡನ್​:ಐಪಿಎಲ್​ ಅಂದ್ರೆ ಟಿ20 ಜಗತ್ತಿನ ಹಬ್ಬವಾಗಿದ್ದು, ಈ ಟೂರ್ನಿ ನಡೆಯುವ ಎರಡು ತಿಂಗಳು ವಿಶ್ವದಾದ್ಯಂತ ಎಲ್ಲಾ ಮಾದರಿಯ ಕ್ರಿಕೆಟ್​ಗಳು ನಿಶಬ್ಧವಾಗಿರುತ್ತವೆ. ಆದರೆ ಅಂತಹ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಇಂಗ್ಲೆಂಡ್​ನ ಲೈಮ್​ ಲೆವಿಂಗ್​ಸ್ಟನ್​ ತಾವಾಗಿಯೇ ಕಳೆದುಕೊಳ್ಳುತ್ತಿದ್ದಾರೆ.

ಕಳೆದ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್​ ತಂಡದ ಪರ ಆಡಿದ್ದ ಇಂಗ್ಲೆಂಡ್​ನ ಆಲ್​ರೌಂಡರ್​ ಲೈಮ್​ ಲಿವಿಂಗ್​ಸ್ಟನ್​ ಈ ಬಾರಿ ಹರಾಜಿಗೂ ಮುನ್ನವೇ ತಂಡ ಅವರನ್ನು ರಿಲೀಸ್​ ಮಾಡಿತ್ತು. ಡಿಸೆಂಬರ್​ 19 ರಂದು 2020ರ ಆವೃತ್ತಿಗೆ ಹರಾಜು ಪ್ರಕ್ರಿಯೆ ನಡೆಯಲಿದೆ. ಆದರೆ ಲೈಮ್​ ತಾನು ಈ ಬಾರಿ ಐಪಿಎಲ್​ಗೆ ಲಭ್ಯವಿರುವುದಿಲ್ಲ ಎಂದು ಅವರೇ ತಿಳಿಸಿದ್ದಾರೆ.

ಈಗಷ್ಟೇ ಇಂಗ್ಲೆಂಡ್​ ಟೆಸ್ಟ್​ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಲಿವಿಂಗ್​ಸ್ಟನ್ ಟೆಸ್ಟ್​ ಕ್ರಿಕೆಟ್​ನಲ್ಲಿ ನೆಲೆಯೂರಲು ನಿರ್ಧರಿಸಿದ್ದು, ಐಪಿಎಲ್​ ಬದಲು ಕೌಂಟಿ ಕ್ರಿಕೆಟ್​ ಆಡಲು ನಿರ್ಧರಿಸಿದ್ದಾರೆ.

ನಾನು ರಾಜಸ್ಥಾನ ರಾಯಲ್ಸ್ ​ಪರ ಕಳೆದ ಸೀಸನ್​ನಲ್ಲಿ ಐಪಿಎಲ್​ನಲ್ಲಿ ಆಡಿರುವುದು ಅದ್ಭುತ ಅನುಭವ. ಈ ಸಮಯದ ಎಲ್ಲಾ ಸೆಕೆಂಡ್​ಗಳನ್ನು ನಾನು ಎಂಜಾಯ್​ ಮಾಡಿದ್ದೇನೆ. ಎಲ್ಲಾ ಆಟಗಾರರು ನನ್ನ ಜೀವನದಲ್ಲಿ ಒಂದು ಭಾಗವಾಗಿದ್ದಾರೆ. ಆದರೆ ನನಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಹೆಚ್ಚಿನ ಗಮನ ನೀಡಲು ಐಪಿಎಲ್​ನಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದು ಲಿವಿಂಗ್​ಸ್ಟನ್​ ಸಂದರ್ಶನವೊಂದರಲ್ಲಿ ಖಚಿತಪಡಿಸಿದ್ದಾರೆ.

ABOUT THE AUTHOR

...view details