ಕರ್ನಾಟಕ

karnataka

ETV Bharat / sports

ಬರೋಡಾ ವಿರುದ್ಧ ಸುಲಭ ಜಯ ಸಾಧಿಸಲು ಕರಣ್​ ನಾಯರ್​ಗೆ ನೆರವಾದ ’ದಿ ವಾಲ್’​ - ಕರ್ನಾಟಕಕ್ಕೆ ಬರೋಡದ ವಿರುದ್ದ ಜಯ

ಕರ್ನಾಟಕ ತಂಡ 149 ರನ್​ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 14ಕ್ಕೆ ಒಂದು ವಿಕೆಟ್​ ಕಳೆದುಕೊಂಡು ನಿರಾಸೆಯನುಭವಿಸಿತ್ತು. ಈ ಸಂದರ್ಭದಲ್ಲಿ ಕಣಕ್ಕಿಳಿದ ನಾಯಕ ಕರುಣ್​ ನಾಯರ್​ ಔಟಾಗದೇ 71 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

Dravid advice helps to Karun Nair
ಕರುಣ್​ ನಾಯರ್​-ರಾಹುಲ್​ ದ್ರಾವಿಡ್​

By

Published : Feb 15, 2020, 1:17 PM IST

ಬೆಂಗಳೂರು: 2019-20ರ ಆವೃತ್ತಿಯಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಕರ್ನಾಟಕ ತಂಡ ಬರೋಡಾ ವಿರುದ್ಧ 8 ವಿಕೆಟ್​ಗಳ ಜಯ ಸಾಧಿಸಿದೆ.

ಟೂರ್ನಿಯುದ್ದಕ್ಕೂ ರನ್​ಗಳಿಸಲು ಪರದಾಡಿದ್ದ ಕರ್ನಾಟಕ ತಂಡದ ನಾಯಕ ಕರುಣ್​ ನಾಯರ್​ ಬರೋಡಾ ವಿರುದ್ಧ ಎರಡು ಇನ್ನಿಂಗ್ಸ್​ನಲ್ಲಿ ಕ್ರೀಸ್​ನಲ್ಲಿ ಭದ್ರವಾಗಿ ನೆಲೆನಿಂತು ತಂಡವನ್ನು ಗೆಲುವಿನ ಗಡಿ ದಾಟಿಸಿದ್ದರು. ಆದರೆ, ಈ ಗೆಲುವಿನ ಹಿಂದೆ ಭಾರತ ತಂಡದ ಲೆಜೆಂಡ್​ ರಾಹುಲ್​ ದ್ರಾವಿಡ್​ ಇದ್ದಾರೆ ಎಂಬು ಗಮನಾರ್ಹ ಸಂಗತಿ.

149 ರನ್​ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 14ಕ್ಕೆ ಒಂದು ವಿಕೆಟ್​ ಕಳೆದುಕೊಂಡು ನಿರಾಶೆಯನುಭವಿಸಿತ್ತು. ಈ ಸಂದರ್ಭದಲ್ಲಿ ಕಣಕ್ಕಿಳಿದ ನಾಯಕ ಕರುಣ್​ ನಾಯರ್​ ಔಟಾಗದೇ 71 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಪಂದ್ಯದ ನಂತರ ಮಾತನಾಡಿದ ಕರ್ನಾಟಕ ತಂಡದ ನಾಯಕ ಕರುಣ್​ನಾಯರ್​ , ಸ್ಪಿನ್ನರ್​ಗಳ ಎದುರು ಆಡುವಾಗ ನಾನು ಸ್ಟಂಪ್​ಗಳನ್ನು ಹೆಚ್ಚು ಬಿಟ್ಟು ಆಡುತ್ತಿದ್ದರಿಂದ ವಿಕೆಟ್​ ಕಳೆದುಕೊಳ್ಳುತ್ತಿದ್ದೆ. ಪಂದ್ಯದ ಮೂರನೇ ದಿನ ದ್ರಾವಿಡ್​ ಸರ್​ ಭೇಟಿ ನೀಡಿದ್ದ ಸಂದರ್ಭದಲ್ಲಿ, ಸ್ಟಂಪ್​ ಕವರ್​ ಮಾಡಿಕೊಂಡು ಬ್ಯಾಟಿಂಗ್​ ಮಾಡು ಎಂದು ಸಲಹೆ ನೀಡಿದರು. ಮೂರನೇ ದಿನ ನಾನು ಅವರ ಸಲಹೆ ಪಾಲಿಸಿದ್ದರಿಂದ ಸರಾಗವಾಗಿ ರನ್​ಗಳಿಸಿದೆ. ಹಿಂದಿನ ಇನ್ನಿಂಗ್ಸ್​ನಲ್ಲಿ ನಾನು ಮಾಡಿದ ತಪ್ಪು ಏನು ಎಂಬುದನ್ನು ಸಹಾ ಅರಿತುಕೊಂಡೆ ಎಂದು ಕರುಣ್​ ನಾಯರ್​ ತಿಳಿಸಿದ್ದರು.

ಶುಕ್ರವಾರ ಮುಕ್ತಾಯವಾದ ರಣಜಿ ಪಂದ್ಯದಲ್ಲಿ ಬರೋಡಾವನ್ನು ಮೊದಲ ಇನ್ನಿಂಗ್ಸ್​ನಲ್ಲಿ 85ಕ್ಕೆ ಆಲೌಟ್​ ಮಾಡಿದ್ದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 233 ರನ್​ಗಳಿಸಿ 148 ರನ್​ಗಳ ಮುನ್ನಡೆ ಸಾಧಿಸಿತ್ತು. ಬರೋಡಾ ಎರಡನೇ ಇನ್ನಿಂಗ್ಸ್​ನಲ್ಲಿ 296ಕ್ಕೆ ಆಲೌಟ್ ಆಗಿ 149 ರನ್​ಗಳ ಟಾರ್ಗೆಟ್​ ನೀಡಿತ್ತು. ಈ ಮೊತ್ತವನ್ನು ರಾಜ್ಯ ತಂಡ ಕೇವಲ 2 ವಿಕೆಟ್​ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಅಂಕಪಟ್ಟಿಯಲ್ಲಿ ಮೂರು ಅಥವಾ ನಾಲ್ಕನೇ ಸ್ಥಾನವನ್ನು ಖಚಿತಪಡಿಸಿಕೊಂಡಿತು.

ABOUT THE AUTHOR

...view details