ಹೈದರಾಬಾದ್:ಕಿವೀಸ್ ವಿರುದ್ಧದ ಏಕದಿನ ಸರಣಿಯ ಉಳಿದೆರಡು ಪಂದ್ಯದಲ್ಲಿ ಕೇದಾರ್ ಜಾಧವ್ ಬದಲು ಯಜುವೇಂದ್ರ ಚಹಾಲ್ಗೆ ಅವಕಾಶ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ಆಟಗಾರರ ವೀಕ್ನೆಸ್ ಬಗ್ಗೆ ಮಾತನಾಡಿರುವ ಬಜ್ಜಿ, ಕಿವೀಸ್ ಆಟಗಾರರು ವೇಗದ ಬೌಲಿಂಗ್ಗೆ ಉತ್ತಮವಾಗಿ ಆಡಬಲ್ಲರು. ಆದರೆ ಸ್ಪಿನ್ ಬೌಲರ್ಗಳನ್ನ ಎದುರಿಸುವುದು ಕೊಂಚ ಕಷ್ಟ. ಹೀಗಾಗಿ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಯಜುವೇಂದ್ರ ಚಹಾಲ್ಗೆ ಮುಂದಿನ ಪಂದ್ಯಗಳಲ್ಲಿ ಅವಕಾಶ ನೀಡಬೇಕು ಎಂದಿದ್ದಾರೆ.