ಕರ್ನಾಟಕ

karnataka

ETV Bharat / sports

ಕಳೆದೆರಡು ವರ್ಷ ಭುವಿಗೆ ಕಠಿಣವಾಗಿತ್ತು, ಆತನ ಕಮ್​ಬ್ಯಾಕ್ ಭಾರತ ತಂಡಕ್ಕೆ ಬಲ ತಂದಿದೆ: ಲಕ್ಷ್ಮಣ್​

ಭುವನೇಶ್ವರ್ ಕುಮಾರ್ ಫಾರ್ಮ್‌ಗೆ ಮರಳಿರುವುದು ಭಾರತಕ್ಕೆ ದೊಡ್ಡ ಧನಾತ್ಮಕ ಅಂಶವಾಗಿದೆ. ಅದರಲ್ಲೂ ಈ ವರ್ಷ ಭಾರತದಲ್ಲಿ ಆಯೋಜನೆಯಾಗಲಿರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಅವರ ಲಭ್ಯತೆ ಕೊಹ್ಲಿ ಬಳಗಕ್ಕೆ ಪ್ರಮುಖವಾಗಲಿದೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

ಭುವನೇಶ್ವರ್ ಕುಮಾರ್
ಭುವನೇಶ್ವರ್ ಕುಮಾರ್

By

Published : Mar 30, 2021, 9:32 PM IST

ಮುಂಬೈ: ಕಳೆದ ಎರಡು ವರ್ಷಗಳಿಂದ ಗಾಯದಿಂದ ನಲುಗಿದ್ದ ಭುವನೇಶ್ವರ್​ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್​ ಕಮ್​ಬ್ಯಾಕ್ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ಸ್ವಿಂಗ್​ ಕಿಂಗ್​ ಟೀಮ್​ ಇಂಡಿಯಾಕ್ಕೆ ದೊಡ್ಡ ಬಲ ತಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗಾಯದ ಕಾರಣ ಐಪಿಎಲ್​ನಿಂದ ಹೊರಬಿದ್ದಿದ್ದ ಭುವನೇಶ್ವರ್​ ಕುಮಾರ್​ರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೂ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೆ ಕಡೆಗಣಿಸಲಾಗಿತ್ತು. ಸೀಮಿತ ಓವರ್​ಗಳ ಸರಣಿಯಲ್ಲಿ ಅವಕಾಶ ಪಡೆದಿದ್ದ ಭುವಿ, ಬುಮ್ರಾ ಅನುಪಸ್ಥಿತಿಯಲ್ಲಿ ತಂಡದ ಬೌಲಿಂಗ್ ನೇತೃತ್ವವಹಿಸಿ ಯಶಸ್ವಿಯಾಗಿದ್ದಾರೆ. ಟಿ20ಯಲ್ಲಿ ಉತ್ತಮ ಎಕಾನಮಿಯೊಂದಿಗೆ 4 ವಿಕೆಟ್ ಪಡೆದಿದ್ದ ಯುಪಿ ಬೌಲರ್,​ ಏಕದಿನ ಸರಣಿಯಲ್ಲಿ 6 ವಿಕೆಟ್​ ಪಡೆದು ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭುವಿಯ ಪ್ರದರ್ಶನವನ್ನು ಕಂಡು ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಸ್​​ಆರ್​ಹೆಚ್​ ತಂಡದ ಮೆಂಟರ್ ಆಗಿರುವ ಲಕ್ಷ್ಮಣ್​ ಸ್ಟಾರ್ ಸ್ಪೋರ್ಟ್ಸ್​ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, "ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಅವರ ಜೊತೆ ತುಂಬಾ ಹತ್ತಿರದಿಂದ ಕೆಲಸ ನಿರ್ವಹಿಸಿದ್ದೇನೆ. ಹಾಗಾಗಿ ಭಾರತ ತಂಡಕ್ಕೆ ಪುನರಾಗಮನ ಮಾಡುವುದು ಭುವಿಗೆ ಎಷ್ಟು ಪ್ರಮುಖವಾಗಿತ್ತು ಎಂಬುದು ನನಗೆ ತಿಳಿದಿದೆ. ತಂಡದಲ್ಲಿ ಅವಕಾಶ ಪಡೆದಾಗಲೆಲ್ಲಾ, ಅವರು ಅದ್ಭುತ ಪ್ರದರ್ಶನ ತೋರಿದ್ದಾರೆ. ವೇಗದ ಬೌಲರ್​ಗಳು ಗಾಯಗಳಿಂದ ಚೇತರಿಸಿಕೊಳ್ಳುವುದು ಸುಲಭವಲ್ಲ. ಅದರಲ್ಲೂ ಭುವಿ ಒಂದೆರಡು ದೊಡ್ಡ ಪ್ರಮಾಣದ ಗಾಯಗಳಿಗೆ ಒಳಗಾಗಿದ್ದರು" ಎಂದಿದ್ದಾರೆ

"ಭುವನೇಶ್ವರ್​ ಕುಮಾರ್​ ಎನ್​ಸಿಎನಲ್ಲಿ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಇದೀಗ ಅದಕ್ಕೆ ಪ್ರತಿಫಲ ದೊರೆತಿದೆ. ಟಿ20 ಸರಣಿಯಿಂದಲೂ ಸಾಬೀತಾಗಿರುವ ಒಂದು ಅಂಶವೆಂದರೆ, ಅವರು ಹೊಸ ಚೆಂಡಿನಲ್ಲೂ ಸ್ವಿಂಗ್​ ಮಾಡಲು ಸಮರ್ಥರಾಗಿದ್ದಾರೆ. ಅವರು ಯಾವಾಗ ಅದನ್ನು ಮಾಡುತ್ತಾರೋ ಅಂದು ಭಾರತ ತಂಡ ಉತ್ತಮ ಸ್ಥಿತಿಯಲ್ಲಿರುತ್ತದೆ. ಏಕೆಂದರೆ ಹೊಸ ಚೆಂಡಿನಲ್ಲಿ ವಿಕೆಟ್​ ಪಡೆಯುವುದು ನಿರ್ಣಾಯಕವಾಗಿರುತ್ತದೆ" ಎಂದು ಹೇಳಿದ್ದಾರೆ

ನನ್ನ ಪ್ರಕಾರ ಭುವನೇಶ್ವರ್ ಕುಮಾರ್ ಫಾರ್ಮ್‌ಗೆ ಮರಳಿರುವುದು ಭಾರತಕ್ಕೆ ದೊಡ್ಡ ಧನಾತ್ಮಕ ಅಂಶವಾಗಿದೆ. ಅದರಲ್ಲೂ ಈ ವರ್ಷ ಭಾರತದಲ್ಲಿ ಆಯೋಜನೆಯಾಗಲಿರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಅವರ ಲಭ್ಯತೆ ಪ್ರಮುಖವಾಗಲಿದೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

ಇದನ್ನೂ ಓದಿ: IPL 2021: ಡೆಲ್ಲಿ ಕ್ಯಾಪಿಟಲ್ಸ್​ ನಾಯಕನಾಗಿ ಬಡ್ತಿ ಪಡೆದ ರಿಷಭ್‌ ಪಂತ್

ABOUT THE AUTHOR

...view details