ಕರ್ನಾಟಕ

karnataka

ETV Bharat / sports

‘ದೇಶವನ್ನು ಭುಜದ ಮೇಲೆ ಹೊತ್ತ ಕ್ಷಣ’: ಪ್ರತಿಷ್ಠಿತ ಪ್ರಶಸ್ತಿ ಸುತ್ತಿಗೆ ವಿಶ್ವಕಪ್ ಗೆಲುವಿನ ಸಂಭ್ರಮ ಆಯ್ಕೆ! - ಪ್ರತಿಷ್ಠಿತ ಲೌರೆಸ್ ಪ್ರಶಸ್ತಿ

ಲೌರೆಸ್ ಪ್ರಶಸ್ತಿಗಾಗಿ ಕಳೆದ 20 ವರ್ಷಗಳಲ್ಲಿ ಕ್ರೀಡಾಲೋಕದ 20 ಸ್ಮರಣೀಯ ಕ್ಷಣಗಳನ್ನು ಪಟ್ಟಿ ಮಾಡಲಾಗಿದ್ದು, ಅದರ ಪೈಕಿ 2011ರಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಗೆದ್ದ ಬಳಿಕ ಸಚಿನ್ ತೆಂಡುಲ್ಕರ್​ ಅವರನ್ನ ತಂಡದ ಸಹ ಆಗಾರರು ಹೊತ್ತು ಸಂಭ್ರಮಿಸಿದ ಕ್ಷಣವೂ ಒಂದಾಗಿದೆ.

Laureus inspiring sporting event,ಪ್ರತಿಷ್ಠಿತ ಲೌರೆಸ್ ಪ್ರಶಸ್ತಿ
2011ರ ಏಕದಿನ ವಿಶ್ವಕಪ್ ಗೆಲುವಿನ ಸಂಭ್ರಮ

By

Published : Jan 12, 2020, 10:43 PM IST

ಲಂಡನ್:ಭಾರತ ಕ್ರಿಕೆಟ್ ತಂಡದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 2011ನೇ ವಿಶ್ವಕಪ್ ಗೆಲುವಿನ ಸಂಭ್ರಮದ ಕ್ಷಣ ಲೌರೆಸ್ ಸ್ಪೂರ್ತಿದಾಯಕ ಕ್ರೀಡಾಕೂಟ ಕ್ಷಣ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ.

ಕಳೆದ 20 ವರ್ಷಗಳಲ್ಲಿ ಕ್ರೀಡಾಲೋಕದ 20 ಸ್ಮರಣೀಯ ಕ್ಷಣಗಳನ್ನು ಪಟ್ಟಿಯಲ್ಲಿ ಮಾಡಲಾಗಿದೆ. 2011ರಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಗೆದ್ದ ಬಳಿಕ ಸಚಿನ್ ತೆಂಡುಲ್ಕರ್​ ಅವರನ್ನ ತಂಡದ ಸಹ ಆಟಗಾರರು ತಮ್ಮ ಭುಜದ ಮೇಲೆ ಹೊತ್ತು ವಾಂಖೆಡೆ ಸ್ಟೇಡಿಯಂನ ಸುತ್ತು ಒಂದು ಸುತ್ತು ಸುತ್ತಿದ್ದರು. ಈ ಕ್ಷಣವನ್ನು ‘ದೇಶವನ್ನು ಭುಜದ ಮೇಲೆ ಹೊತ್ತ ಕ್ಷಣ’ ಎಂದು ಹೆಸರಿಡಲಾಗಿದೆ.

2011ರ ಏಕದಿನ ವಿಶ್ವಕಪ್ ಗೆಲುವಿನ ಸಂಭ್ರಮ

6 ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದರೂ ಸಚಿನ್ ತೆಂಡೂಲ್ಕರ್ ವಿಶ್ವಕಪ್ ಗೆಲುವಿನ ಸಿಹಿ ಅನುಭವಿಸಿರಲಿಲ್ಲ. ಆದರೆ 2011ರಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ, ಏಕದಿನ ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.

ಬ್ರೆಟ್ ಲೀ, ಫ್ಲಿಂಟಾಫ್

ಸಚಿನ್ ಹೊರತುಪಡಿಸಿದರೆ 2005ರ ಆ್ಯಶಸ್ ಟೆಸ್ಟ್​ ಗೆಲುವಿನ ಬಳಿಕ ಇಂಗ್ಲೆಂಡ್​ ತಂಡದ ಆಟಗಾರ ಫ್ಲಿಂಟಾಫ್ ಗೆಲುವಿನ ಸಂಭ್ರಮವನ್ನ ಆಚರಿಸುವ ಬದಲು ಬ್ರೆಟ್ ಲೀಗೆ ಹಸ್ತಲಾಘವ ಮಾಡಿದ ಕ್ಷಣ ಕೂಡ ಪ್ರಶಸ್ತಿಯ ರೇಸ್​ನಲ್ಲಿದೆ.

ಜನವರಿ 10 ರಿಂದ ಫೆ.16ರವರೆಗೆ ಅಭಿಮಾನಿಗಳು ಪ್ರಶಸ್ತಿಗೆ ವೋಟ್ ಮಾಡುವ ಅವಕಾಶ ಹೊಂದಿದ್ದು, ಫೆ. 17 ರಂದು ಬರ್ಲಿನ್​ನಲ್ಲಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಗಲಿದೆ.

ABOUT THE AUTHOR

...view details