ನವದೆಹಲಿ:ಟೀಂ ಇಂಡಿಯಾದ ಗ್ರೇಟ್ ಫಿನಿಷರ್ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ವೃತ್ತಿ ಜೀವನದ ಕೊನೆಯ ಕಾಲಘಟ್ಟದಲ್ಲಿದ್ದು, ಅವರು ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಈ ಮಧ್ಯೆ ಗಾನಕೋಗಿಲೆ ಲತಾ ಮಂಗೇಶ್ಕರ್ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.
ನಮಸ್ಕಾರ ಧೋನಿ ಜೀ, ದೇಶಕ್ಕೆ ನಿಮ್ಮ ಆಟದ ಅವಶ್ಯಕತೆಯಿದೆ: ಲತಾ ಮಂಗೇಶ್ಕರ್ ಮನವಿ - ನಿವೃತ್ತಿ
ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಪಡೆದುಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದಂತೆ ಗಾನಕೋಗಿಲೆ ಲತಾ ಮಂಗೇಶ್ಕರ್ ಟ್ವೀಟ್ ಮಾಡಿದ್ದಾರೆ.
ಧೋನಿ
"ನಮಸ್ಕಾರ ಧೋನಿಜೀ, ನೀವು ಕ್ರಿಕೆಟ್ನಿಂದ ನಿವೃತ್ತಿಯಾಗಲು ಬಯಸಿದ್ದೀರಿ ಎಂಬ ಬಗ್ಗೆ ನಾನು ಕೇಳುತ್ತಿದ್ದೇನೆ. ಆದರೆ, ನೀವು ಆ ಬಗ್ಗೆ ಯೋಚನೆಯನ್ನೂ ಸಹ ಮಾಡಬೇಡಿ. ದೇಶಕ್ಕೆ ನಿಮ್ಮ ಆಟದ ಅಗತ್ಯವಿದೆ. ನಾನೂ ವಿನಂತಿಸುತ್ತಿದ್ದೇನೆ, ನಿವೃತ್ತಿ ವಿಚಾರವನ್ನು ಮನಸ್ಸಿಗೆ ತಂದುಕೊಳ್ಳಬೇಡಿ' ಎಂದು ಬರೆದುಕೊಂಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ 50ರನ್ಗಳಿಕೆ ಮಾಡಿದ್ದ ವೇಳೆ ಧೋನಿ ರನೌಟ್ ಬಲೆಗೆ ಬಿದ್ದು ವಿಕೆಟ್ ಒಪ್ಪಿಸುತ್ತಿದ್ದಂತೆ ಟೀಂ ಇಂಡಿಯಾ ವಿಶ್ವಕಪ್ ಫೈನಲ್ ಲಗ್ಗೆ ಹಾಕುವ ಕನಸು ಕೈಚೆಲ್ಲುವಂತಾಯಿತು.