ಕರ್ನಾಟಕ

karnataka

ETV Bharat / sports

ಬಹುನಿರೀಕ್ಷಿತ ಚೊಚ್ಚಲ ಲಂಕಾ ಪ್ರೀಮಿಯರ್​ ಲೀಗ್​ಗೆ​ ಡೇಟ್​ ಫಿಕ್ಸ್​ - ಶ್ರೀಲಂಕಾ ಕ್ರಿಕೆಟ್ ಮಂಡಳಿ

23 ಪಂದ್ಯಗಳ ಲೀಗ್ ರಂಗೇರಿ ದಂಬುಲ್ಲಾ, ಪಲ್ಲಕೆಲೆ ಮತ್ತು ಪಲ್ಲಕೆಲೆ ಮತ್ತು ಕೊಲಂಬೊದ ಸೂರ್ಯವೇವಾ ಮಹಿಂದಾ ರಾಜಪಕ್ಸೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೊಲಂಬೊ, ಗಾಲೆ, ದಂಬುಲ್ಲಾ, ಕ್ಯಾಂಡಿ ಮತ್ತು ಜಫ್ನಾ ನಗರಗಳ ಹೆಸರಿನ 5 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ..

ಲಂಕಾ ಪ್ರೀಮಿಯರ್​ ಲೀಗ್​
ಲಂಕಾ ಪ್ರೀಮಿಯರ್​ ಲೀಗ್​

By

Published : Sep 2, 2020, 9:49 PM IST

Updated : Sep 2, 2020, 10:14 PM IST

ಕೊಲಂಬೊ:ಅಭಿಮಾನಿಗಳು ಎದುರು ನೋಡುತ್ತಿರುವ ಲಂಕಾ ಪ್ರೀಮಿಯರ್​ ಲೀಗ್​ನ ಚೊಚ್ಚಲ ಆವೃತ್ತಿ ನವೆಂಬರ್​ 14ರಿಂದ ಆರಂಭವಾಗಲಿದೆ ಎಂದು ಬುಧವಾರ ಶ್ರೀಲಂಕಾ ಕ್ರಿಕೆಟ್​ ಬೋರ್ಡ್​ ಬುಧವಾರ ಖಚಿತಪಡಿಸಿದೆ. ಫೈನಲ್​ ಪಂದ್ಯ ಡಿಸೆಂಬರ್​ 6ರಂದು ನಡೆಯಲಿದೆ.

"ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಯೋಜಿಸಲಿರುವ ಫ್ರಾಂಚೈಸಿ ಆಧಾರಿತ ಬಹುನಿರೀಕ್ಷಿತವಾಗಿರುವ ಲಂಕಾ ಪ್ರೀಮಿಯರ್ ಲೀಗ್‌ನ ಈ ವರ್ಷದ ನವೆಂಬರ್ ಆರಂಭದಲ್ಲಿ ಶ್ರೀಲಂಕಾದಲ್ಲಿ ಅಧಿಕೃತವಾಗಿ ಪ್ರಾರಂಭಿಸಲಾಗುವುದು. ಟೂರ್ನಿಯನ್ನು ನವೆಂಬರ್ 14 ರಿಂದ ಡಿಸೆಂಬರ್ 6ರವರೆಗೆ ನಡೆಸಲು ನಿರ್ಧರಿಸಲಾಗಿದೆ" ಎಂದು ಎಸ್‌ಎಲ್‌ಸಿ ತಿಳಿಸಿದೆ.

ಟೂರ್ನಾಮೆಂಟ್​ ನಿರ್ವಹಿಸಲು ಮತ್ತು ಆಯೋಜಿಸಲು ಇನ್ನೋವೇಟಿವ್ ಪ್ರೊಡಕ್ಷನ್ ಗ್ರೂಪ್ (ಐಪಿಜಿ) ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಮಂಡಳಿ ತಿಳಿಸಿದೆ.

23 ಪಂದ್ಯಗಳ ಲೀಗ್ ರಂಗೇರಿ ದಂಬುಲ್ಲಾ, ಪಲ್ಲಕೆಲೆ ಮತ್ತು ಪಲ್ಲಕೆಲೆ ಮತ್ತು ಕೊಲಂಬೊದ ಸೂರ್ಯವೇವಾ ಮಹಿಂದಾ ರಾಜಪಕ್ಸೆ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೊಲಂಬೊ, ಗಾಲೆ, ದಂಬುಲ್ಲಾ, ಕ್ಯಾಂಡಿ ಮತ್ತು ಜಫ್ನಾ ನಗರಗಳ ಹೆಸರಿನ 5 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ.

ಫ್ರಾಂಚೈಸಿಗಳ ಲೈಸೆನ್ಸ್​, ಬ್ರಾಡ್​ಕಾಸ್ಟಿಂಗ್​,ಪ್ರೊಡಕ್ಷನ್​ ಮತ್ತು ಈವೆಂಟ್‌ನ ಗ್ರೌಂಡ್ಸ್​ ರೈಟ್ಸ್​ಗಳನ್ನು ಐಪಿಜಿಗೆ ನೀಡಲಾಗಿದೆ ಎಂದು ಎಸ್‌ಎಲ್‌ಸಿ ತಿಳಿಸಿದೆ. ಟೂರ್ನಿಯಲ್ಲಿ ವೆಸ್ಟ್​ ಇಂಡೀಸ್​, ಪಾಕಿಸ್ತಾನ ಸೇರಿ ಹಲವು ವಿದೇಶಿ ಆಟಗಾರರು ಕೂಡ ಎಲ್​ಪಿಎಲ್​ನಲ್ಲಿ ಭಾಗವಹಿಸಲಿದ್ದಾರೆ ಎಂದು ಎಸ್​ಎಲ್​ಸಿ ತಿಳಿಸಿದೆ.

Last Updated : Sep 2, 2020, 10:14 PM IST

ABOUT THE AUTHOR

...view details