ಅಡಿಲೇಡ್: ಟೀಂ ಇಮಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರನ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದ ಆಸೀಸ್ ಯುವ ಆಟಗಾರ ವಿಲ್ ಪುಕೋವ್ಸ್ಕಿ ಗಾಯ ಚಿಂತೆಗೀಡು ಮಾಡಿದೆ ಎಂದು ಆಸ್ಟ್ರೇಲಿಯಾದ ತರಬೇತುದಾರ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
ಗುರುವಾರದಿಂದ ಅಡಿಲೇಡ್ನಲ್ಲಿ ನಡೆಯಲಿರುವ ಆರಂಭಿಕ ಟೆಸ್ಟ್ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿಯಲು ಸಿದ್ಧರಾಗಿದ್ದ ಪುಕೋವ್ಸ್ಕಿ, ಆಸ್ಟ್ರೇಲಿಯಾ ಎ ಮತ್ತು ಇಂಡಿಯಾ ಎ ನಡುವಿನ ಮೊದಲ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ತಲೆಗೆ ಪೆಟ್ಟು ಬಿದ್ದಿದ್ದ ಕಾರಣ ಮೊದಲ ಟೆಸ್ಟ್ನಿಂದ ಹೊರ ಬಿದ್ದಿದ್ದಾರೆ.