ಕರ್ನಾಟಕ

karnataka

ETV Bharat / sports

ಪಾಂಡ್ಯ ಗೇಮ್​ ಫಿನಿಶಿಂಗ್​ನಲ್ಲಿ ಧೋನಿ ದಾರಿಯಲ್ಲೇ ಸಾಗುತ್ತಿದ್ದಾರೆ: ಆಸ್ಟ್ರೇಲಿಯಾ ಕೋಚ್​

ಇಂದಿನ ಪಂದ್ಯದಲ್ಲಿ ಶಿಖರ್ ಧವನ್ ​(52) ಹಾಗೂ ಕೊಹ್ಲಿ (40) ಉತ್ತಮ ಅಡಿಪಾಯ ಹಾಕಿಕೊಟ್ಟರೆ, ಹಾರ್ದಿಕ್ ಪಾಂಡ್ಯ ಕೇವಲ 22 ಎಸೆತಗಳಲ್ಲಿ 42 ರನ್​ ಚಚ್ಚುವ ಮೂಲಕ ಭಾರತಕ್ಕೆ ಟಿ20 ಸರಣಿ ತಂದುಕೊಟ್ಟರು.

By

Published : Dec 6, 2020, 8:46 PM IST

ಹಾರ್ದಿಕ್ ಪಾಂಡ್ಯ- ಧೋನಿ
ಹಾರ್ದಿಕ್ ಪಾಂಡ್ಯ- ಧೋನಿ

ಸಿಡ್ನಿ: ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್​ ಜಸ್ಟಿನ್ ಲ್ಯಾಂಗರ್​ ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಹಾರ್ದಿಕ್ ಪಾಂಡ್ಯರ ಮ್ಯಾಚ್​ ವಿನ್ನಿಂಗ್ ಪ್ರದರ್ಶನವನ್ನು 'ನಂಬಲಾಗದ ಚಮತ್ಕಾರ' ಎಂದು ಬಣ್ಣಿಸಿದ್ದಾರೆ. ಜೊತೆಗೆ ಅವರನ್ನು ಗೇಮ್ ಫಿನಿಶರ್​ ಆಗಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಹೋಲಿಕೆ ಮಾಡಿದ್ದಾರೆ.

ತಂಡದ ಜೊತೆ ಸಮಾಲೋಚನೆಯಲ್ಲಿ ನಿರತರಾಗಿರುವ ಆಸ್ಟ್ರೇಲಿಯಾ ಕೋಚ್‌ ಜಸ್ಟಿನ್ ಲ್ಯಾಂಗರ್​

"ಇದೊಂದು ಆಟದ ನಂಬಲಾಗದ ಚಮತ್ಕಾರವಾಗಿತ್ತು. (ಪಾಂಡ್ಯ) ಎಷ್ಟು ಅಪಾಯಕಾರಿ ಎಂದು ನಮಗೆ ತಿಳಿದಿದೆ. ಹಿಂದೆ ನಮಗೆ ಈ ರೀತಿ ಎಂ.ಎಸ್.ಧೋನಿ ಇದ್ದರು. ಇದೀಗ ಪಾಂಡ್ಯ ಆಡಿದ ದಾರಿ ಕೂಡ ಅದೇ ಮಾದರಿಯಲ್ಲಿತ್ತು. ಇಡೀ ಪ್ರವಾಸದಲ್ಲಿ ಅವರು ಅದ್ಭುತವಾಗಿ ಆಡಿದ್ದಾರೆ. ಈ ಪೈಕಿ ಇವತ್ತಿನ ಇನ್ನಿಂಗ್ಸ್​ ಶ್ರೇಷ್ಠವಾದದ್ದು" ಎಂದು ಪಂದ್ಯದ ನಂತರ ನಡೆದ ವರ್ಚುವಲ್ ಸುದ್ಧಿಗೋಷ್ಟಿಯಲ್ಲಿ ಅವರು ಹೇಳಿದ್ದಾರೆ.

ಓದಿ: 'ರೋಹಿತ್, ಬುಮ್ರಾರಂಥ ಆಟಗಾರರಿಲ್ಲದೆ ಟಿ20 ಸರಣಿ ಗೆದ್ದಿರುವುದಕ್ಕೆ ಗರ್ವವಿದೆ'

ತಂಡದಲ್ಲಿ ಸಾಕಷ್ಟು ಟಿ20 ಸ್ಪೆಷಲಿಸ್ಟ್​ಗಳನ್ನು ಹೊಂದಿರುವ​ ಭಾರತ ತಂಡವನ್ನು ಚುಟುಕು ಕ್ರಿಕೆಟ್​ನಲ್ಲಿ ಅತ್ಯುತ್ತಮ ತಂಡ ಎಂದು ಲ್ಯಾಂಗರ್​ ಒಪ್ಪಿಕೊಂಡಿದ್ದಾರೆ.

"ಇಡೀ ಪಂದ್ಯ ಎರಡೂ ತಂಡಕ್ಕೂ ತುಂಬಾ ಹತ್ತಿರವಾಗಿತ್ತು ಎಂದು ನಾನು ಭಾವಿಸಿದ್ದೆ. ನಮ್ಮ ತಂಡದ ಫೀಲ್ಡಿಂಗ್ ಅದ್ಭುತವಾಗಿದೆ. ಪಂದ್ಯದಲ್ಲಿ ತಂಡದ ಪ್ರದರ್ಶನ ನೋಡಲು ತುಂಬಾ ರೋಚಕವೆನಿಸಿತು. ಆದರೆ ಅನುಭವಿ ಆಟಗಾರರನ್ನು ಹೊಂದಿರುವ ಭಾರತ ತಂಡ ನಮ್ಮ ತಂಡಕ್ಕಿಂತಲೂ ಉತ್ತಮವಾಗಿತ್ತು" ಎಂದು ಲ್ಯಾಂಗರ್ ವಿಶ್ಲೇಷಿಸಿದರು.

ಕೊಹ್ಲಿ ಶಾಟ್‌ಗಳಿಗೆ ಲ್ಯಾಂಗರ್‌ ಮೆಚ್ಚುಗೆ:

24 ಎಸೆತಗಳಲ್ಲಿ 40 ರನ್​ ಸಿಡಿಸಿದ ಕೊಹ್ಲಿ ಬಗ್ಗೆ ಮಾತನಾಡಿದ ಲ್ಯಾಂಗರ್​, "ಕೊಹ್ಲಿ ನಾನು ನೋಡಿದ ಅತ್ಯಂತ ಶ್ರೇಷ್ಠ ಬ್ಯಾಟ್ಸ್​ಮನ್​. ಇದನ್ನು ನಾನು ಹಲವು ವರ್ಷಗಳಿಂದ ಹೇಳಿಕೊಂಡು ಬರುತ್ತಿದ್ದೇನೆ. ಇಂದು ಆತ ಪ್ರಯೋಗಿಸಿದ ಕೆಲವು ಶಾಟ್​ಗಳ ಅತ್ಯದ್ಭುತವಾಗಿದ್ದವು" ಎಂದು ಶ್ಲಾಘಿಸಿದ್ದಾರೆ.

ABOUT THE AUTHOR

...view details