ಕರ್ನಾಟಕ

karnataka

ETV Bharat / sports

ಐಪಿಎಲ್​ನಲ್ಲಿ 5000 ರನ್​: ಕೊಹ್ಲಿ, ರೈನಾ ಸಾಲಿಗೆ ಸೇರಿದ ರೋಹಿತ್ ಶರ್ಮಾ - ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ

ಈ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ 190 ಪಂದ್ಯಗಳಿಂದ 4,998 ರನ್​ ಗಳಿಸಿದ್ದರು. ಇದೀಗ ತಮ್ಮ 191 ಪಂದ್ಯದಲ್ಲಿ ಮೊಹಮ್ಮದ್​ ಶಮಿಗೆ ಬೌಂಡರಿ ಬಾರಿಸುವ ಮೂಲಕ ಐಪಿಎಲ್​ನಲ್ಲಿ 5,000 ಗಡಿ ದಾಟಿದರು. ರೋಹಿತ್​ ಶರ್ಮಾ ಐಪಿಎಲ್​ನಲ್ಲಿ 37 ಅರ್ಧಶತಕ ಹಾಗೂ 1 ಶತಕ ಕೂಡ ದಾಖಲಿಸಿದ್ದಾರೆ.

ಐಪಿಎಲ್​ನಲ್ಲಿ 5000 ರನ್
ಐಪಿಎಲ್​ನಲ್ಲಿ 5000 ರನ್

By

Published : Oct 1, 2020, 8:28 PM IST

ಅಬುಧಾಬಿ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕಿಂಗ್ಸ್​ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಮಹತ್ವದ ಮೈಲುಗಲ್ಲನ್ನು ತಲುಪಿದ್ದಾರೆ. ಹಿಟ್​ ಮ್ಯಾನ್​ ಐಪಿಎಲ್ ಇತಿಹಾಸದಲ್ಲಿ 5000 ರನ್​ ಗಳಿಸಿದ 3 ನೇ ಬ್ಯಾಟ್ಸ್​ಮನ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಈ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ 190 ಪಂದ್ಯಗಳಿಂದ 4,998 ರನ್​ಗಳಿಸಿದ್ದರು. ಇದೀಗ ತಮ್ಮ 191 ಪಂದ್ಯದಲ್ಲಿ ಮೊಹಮ್ಮದ್​ ಶಮಿಗೆ ಬೌಂಡರಿ ಬಾರಿಸುವ ಮೂಲಕ ಐಪಿಎಲ್​ನಲ್ಲಿ 5,000 ಗಡಿ ದಾಟಿದರು. ರೋಹಿತ್​ ಶರ್ಮಾ ಐಪಿಎಲ್​ನಲ್ಲಿ 37 ಅರ್ಧಶತಕ ಹಾಗೂ 1 ಶತಕ ಕೂಡ ದಾಖಲಿಸಿದ್ದಾರೆ.

ರೋಹಿತ್ ಶರ್ಮಾಗೂ ಮೊದಲು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 178 ಪಂದ್ಯಗಳಿಂದ 5,426 ರನ್​ಗಳಿಸಿ ಗರಿಷ್ಠ ರನ್​ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 193 ಪಂದ್ಯಗಳಲ್ಲಿ 5,368 ರನ್​ಗಳಿಸಿರುವ ಸಿಎಸ್​ಕೆ ತಂಡದ ಸುರೇಶ್ ರೈನಾ 2ನೇ ಸ್ಥಾನದಲ್ಲಿದ್ದಾರೆ.

ಐಪಿಎಲ್​ ಗರಿಷ್ಠ ರನ್​ ಸರದಾರರು

  • ವಿರಾಟ್ ಕೊಹ್ಲಿ 5,430
  • ಸುರೇಶ್ ರೈನಾ- 5,368
  • ರೋಹಿತ್ ಶರ್ಮಾ-5,000+
  • ಡೇವಿಡ್ ವಾರ್ನರ್​- 4,793
  • ಶಿಖರ್ ಧವನ್- 4,648
  • ಎಬಿ ಡಿ ವಿಲಿಯರ್ಸ್​- 4,529

ABOUT THE AUTHOR

...view details