ಕೊಲಂಬೊ:ಬಾಂಗ್ಲಾ ವಿರುದ್ಧದ ಮೂರು ಏಕದಿನ ಕ್ರಿಕೆಟ್ ಸರಣಿ ಗೆದ್ದ ಖುಷಿಯಲ್ಲಿದ್ದ ಶ್ರೀಲಂಕಾ ಪ್ಲೇಯರ್ ಕುಸಾಲ್ ಮೆಂಡಿಸ್ ಮೈದಾನದಲ್ಲೇ ಬೈಕ್ ರೈಡ್ ಮಾಡಲು ಹೋಗಿ ಮುಗ್ಗರಿಸಿ ಬಿದ್ದಿರುವ ಘಟನೆ ನಡೆದಿದೆ.
ಕ್ರಿಕೆಟ್ ಸರಣಿ ಗೆದ್ದ ಖುಷಿಯಲ್ಲಿ ಮೈದಾನದಲ್ಲೇ ಬೈಕ್ ರೈಡ್... ಮುಗ್ಗರಿಸಿ ಬಿದ್ದ ಲಂಕಾ ಆಟಗಾರ! - ಲಂಕಾ ಆಟಗಾರ
ಬಾಂಗ್ಲಾ ವಿರುದ್ಧದ ಏಕದಿನ ಸರಣಿ ಗೆದ್ದ ಖುಷಿಯಲ್ಲಿದ್ದ ಲಂಕಾ ಆಟಗಾರ ಬೈಕ್ ರೈಡ್ ಮಾಡಲು ಹೋಗಿ ಮೈದಾನದಲ್ಲೇ ಮುಗ್ಗರಿಸಿ ಬಿದ್ದಿರುವ ಘಟನೆ ನಡೆದಿದೆ.
ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 122 ರನ್ಗಳ ಅಂತರದ ಗೆಲುವು ಕಾಣುತ್ತಿದ್ದಂತೆ ಶ್ರೀಲಂಕಾ ಪ್ಲೇಯರ್ಸ್ ಮೈದಾನದಲ್ಲೇ ಸಂಭ್ರಮಿಸಿದರು. ಈ ವೇಳೆ ಲಂಕಾ ತಂಡದ ಕುಸಾಲ್ ಮೆಂಡಿಸ್ ಕೊಲಂಬೋದ ಆರ್ ಪ್ರೇಮದಾಸ್ ಮೈದಾನದಲ್ಲಿ ಮ್ಯಾನ್ ಆಫ್ ದಿ ಸೀರಿಸ್ ಆಗಿ ನೀಡಲಾಗಿದ್ದ ಬೈಕ್ ರೈಡ್ ಮಾಡಲು ಮುಂದಾಗಿದ್ದಾರೆ. ಕೆಲ ನಿಮಿಷಗಳ ಕಾಲ ಮೈದಾನದಲ್ಲಿ ರೈಡ್ ಮಾಡಿದ ಅವರ ತದನಂತರ ಏಕಾಏಕಿ ಆಯಾತಪ್ಪಿ ಕೆಳಗೆ ಬಿದ್ದಿದ್ದಾರೆ.
ಪ್ಲೇಯರ್ ಕೆಳಗೆ ಬೀಳುತ್ತಿದ್ದಂತೆ ಮೈದಾನದಲ್ಲಿದ್ದ ಸಿಬ್ಬಂದಿ ಹಾಗೂ ಸಹ ಆಟಗಾರರು ಸ್ಥಳಕ್ಕೆ ಆಗಮಿಸಿ ಅವರಿಗೆ ಸಹಾಯ ಮಾಡಿದ್ದಾರೆ. ಘಟನೆಯಲ್ಲಿ ಅವರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲವಾದರೂ, ವೈರಲ್ ಆಗಿರುವ ವಿಡಿಯೋ ನೋಡಿ ನೆಟಿಜನ್ಸ್ ತರಹೇವಾರಿ ಕಮೆಂಟ್ ಮಾಡ್ತಿದ್ದಾರೆ.