ಕರ್ನಾಟಕ

karnataka

ETV Bharat / sports

ಕುಂಬ್ಳೆಯ ಅಪಾರ ಜ್ಞಾನ,ಅನುಭವ ಪಂಜಾಬ್​ ತಂಡಕ್ಕೆ ನೆರವಾಗಲಿದೆ: ಲೀ - Kumble's knowledge will help KXIP

ಅನಿಲ್ ಕುಂಬ್ಳೆ ಕಳೆದ ವರ್ಷ ಕಿಂಗ್ಸ್​ ಇಲೆವೆನ್ ಪಂಜಾಬ್​​ ಫ್ರಾಂಚೈಸಿಯ ಮುಖ್ಯ ಕೋಚ್​ ಆಗಿ 2 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಸೆಪ್ಟೆಂಬರ್​ 19 ರಿಂದ ಯುಎಇನಲ್ಲಿ ಆರಂಭವಾಗಲಿರುವ 13ನೇ ಆವೃತ್ತಿಯಿಂದ ಅವರು ತಂಡದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.

ಕಿಂಗ್ಸ್​ ಇಲೆವೆನ್ ಪಂಜಾಬ್​​ ಪ್ರಾಂಚೈಸಿ
ಅನಿಲ್​ ಕುಂಬ್ಳೆ

By

Published : Aug 9, 2020, 6:22 PM IST

ಮುಂಬೈ: ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರ ಅಪಾರ ಕ್ರಿಕೆಟ್ ಜ್ಞಾನ ಮತ್ತು ಅನುಭವ ಕಿಂಗ್ಸ್​ ಇಲೆವೆನ್​ಗೆ ನೆರವಾಗಲಿದೆ. ಅವರು ಕೋಚ್​ ಆಗಿ ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿರುವ ಬ್ರೆಟ್​ ಲೀ, ತಮ್ಮ ಚೊಚ್ಚಲ ಪ್ರಶಸ್ತಿಗಾಗಿ ಪ್ರಯತ್ನಿಸುತ್ತಿರುವ ಪಂಜಾಬ್​ ಆಟಗಾರರಿಗೆ ಕುಂಬ್ಳೆಯವರ ಅಪಾರ ಅನುಭವ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.

ಬ್ರೆಟ್​ ಲೀ

'ಕಿಂಗ್ಸ್​​ ಇಲೆವೆನ್​ ಉತ್ತಮ ತಂಡ. ಆ ಫ್ರಾಂಚೈಸಿಗಾಗಿ ಆಡಲು ತುಂಬಾ ಖುಷಿಯಾಗುತ್ತದೆ' ಎಂದು ಅವರು ಹೇಳಿದ್ದಾರೆ.

2017ರ ಚಾಂಪಿಯನ್​ ಟ್ರೋಫಿ ಸೋಲಿನ ಬಳಿಕ ಅನಿಲ್ ಕುಂಬ್ಳೆ ಭಾರತ ತಂಡದ ಕೋಚ್​ ಹುದ್ದೆಗೆ ರಾಜಿನಾಮೆ ನೀಡಿದ್ದರು. ಕಳೆದ ವರ್ಷ ಮೈಕ್ ಹಸ್ಸಿ​ ಕಿಂಗ್ಸ್ ಇಲೆವೆನ್​ ಪಂಜಾಬ್​ ತಂಡದ ಕೋಚ್​ ಹುದ್ದೆಗೆ ರಾಜಿನಾಮೆ ನೀಡಿದ ಬೆನ್ನಲ್ಲಿಯೇ ಕುಂಬ್ಳೆ ಎರಡು ವರ್ಷದ ಮುಖ್ಯ ಕೋಚ್​ ಹುದ್ದೆಗೆ ಸಹಿ ಮಾಡಿದ್ದರು. ಇಲ್ಲಿಯವರೆಗೆ ಅವರು ಯಾವುದೇ ತಂಡದ ಮುಖ್ಯ ಕೋಚ್​ ಆಗಿರಲಿಲ್ಲ. ಆರ್​ಸಿಬಿ ಮತ್ತು ಮುಂಬೈ ತಂಡಗಳಿಗೆ ಮೆಂಟರ್​ ಆಗಿ ಕಾರ್ಯ ನಿರ್ವಹಿಸಿದ್ದರು.

ABOUT THE AUTHOR

...view details