ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅರ್ಹವಾದ ವ್ಯಕ್ತಿ ಎಂದು ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರು ಭಾನುವಾರ ತಿಳಿಸಿದ್ದಾರೆ.
ಸೌರವ್ ಗಂಗೂಲಿ ಖಂಡಿತವಾಗಿಯೂ ಬದಲಾವಣೆ ತರಲಿದ್ದಾರೆ. ದಾದಾ ಅವರ ಬಹುದೊಡ್ಡ ಅಭಿಮಾನಿಯಾಗಿ, ಅವರೊಬ್ಬರ ಕ್ರಿಕೆಟಿಗ ಮಾತ್ರವಲ್ಲದೆ, ಅವರು ಅತ್ಯಂತ ಚುರುಕಾದ ಕ್ರಿಕೆಟ್ ಮೆದುಳನ್ನು ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಸಂಗಕ್ಕಾರ ಹೇಳಿದ್ದಾರೆ.
ಅವರು ಕ್ರಿಕೆಟ್ ಆಟದ ಬಗ್ಗೆ ಅತಿಯಾದ ಆಸಕ್ತಿ ಮತ್ತು ಹೃದಯವಂತಿಕೆ ಹೊಂದಿದ್ದಾರೆ. ಐಸಿಸಿಯಲ್ಲಿರುವಾಗ ನೀವು ಬಿಸಿಸಿಐ ಅಧ್ಯಕ್ಷ, ಇಸಿಬಿ, ಅಥವಾ ಎಸ್ಎಲ್ಸಿ ಯಾವುದೇ ಕ್ರಿಕೆಟ್ ಮಂಡಳಿಯಲ್ಲಿದ್ದರೂ ಬದಲಾಗಬಾರದು. ಮೇರಿಲೆಬೊನ್ ಕ್ರಿಕೆಟ್ ಕ್ಲಬ್(ಎಂಸಿಸಿ)ನ ಮೊದಲ ಬ್ರಿಟೀಷೇತರ ಮುಖ್ಯಸ್ಥನಾಗಿರುವ ಕುಮಾರ್ ಸಂಗಾಕ್ಕರ, ಅಂತಾರಾಷ್ಟ್ರೀಯ ಆಡಳಿತ ಮಂಡಳಿಯ ಅಧ್ಯಕ್ಷತೆ ವಹಿಸುವವರು ಎಲ್ಲಾ ಕ್ರಿಕೆಟ್ ದೇಶಗಳ ಹಿತಾಸಕ್ತಿಗಳನ್ನು ಹೊಂದಿರಬೇಕು. ಅದನ್ನು ಗಂಗೂಲಿ ಹೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
"ಎಲ್ಲಕ್ಕಿಂತ ಮುಖ್ಯವಾಗಿ, ಈ ಆಟದ ಅಡಿಪಾಯವೇ ಪ್ರಪಂಚದಾದ್ಯಂತ ಇರುವ ಮಕ್ಕಳು, ಅಭಿಮಾನಿಗಳು ಮತ್ತು ಪ್ರೇಕ್ಷಕರು. ಸೌರವ್ ಅದನ್ನು ಚೆನ್ನಾಗಿ ನಿರ್ವಹಣೆ ಮಾಡಬಹುದು" ಎಂದು ನಾನು ಭಾವಿಸುತ್ತೇನೆ.
"ಅವರು ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲೇ, ಆಡಳಿತ ಮತ್ತು ಕೋಚಿಂಗ್ ಹುದ್ದೆಯನ್ನು ನಿರ್ವಹಿಸುವ ಮುಂಚೆಯೇ ಅವರು ವಿಶ್ವದಾದ್ಯಂತದ ಆಟಗಾರರೊಂದಿಗೆ ಹೇಗೆ ಸಂಬಂಧವನ್ನು ಬೆಳೆಸಿಕೊಂಡಿದ್ದರು ಎನ್ನುವುದನ್ನು ಎಂಸಿಸಿ ಸಮಿತಿಯಲ್ಲಿದ್ದಾಗ ನಾನು ಗಮನಿಸಿದ್ದೇನೆ. ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ಸೂಕ್ತ ಅಭ್ಯರ್ಥಿ ಎನ್ನುವುದು ನನ್ನ ಅಭಿಪ್ರಾಯ" ಎಂದು ಸಂಗಕ್ಕಾರ ತಿಳಿಸಿದ್ದಾರೆ.