ಕರ್ನಾಟಕ

karnataka

ETV Bharat / sports

ರಾಂಚಿ ಟೆಸ್ಟ್​ ಪಂದ್ಯದಿಂದ ಕುಲ್ದೀಪ್​ ಔಟ್​: ಲೋಕಲ್​ ಬಾಯ್​ಗೆ ಸಿಕ್ತು ಚಾನ್ಸ್​​​! - ಎಡಗೈ ಸ್ಪಿನ್ನರ್​ ಶಹ್ಬಾಜ್ ನದೀಮ್

ಗಾಯದ ಸಮಸ್ಯೆಯಿಂದ ಕುಲ್ದೀಪ್​ ಯಾದವ್,​ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಅಂತಿಮ ಟೆಸ್ಟ್​​ ಪಂದ್ಯಕ್ಕೆ ಅಲಭ್ಯರಾಗಿದ್ದು, ಪ್ರತಿಭಾವಂತ ಸ್ಪಿನ್ನರ್​ ಒಬ್ಬರನ್ನ ಆಯ್ಕೆ ಮಾಡಲಾಗಿದೆ.

ಶಹ್ಬಾಜ್ ನದೀಮ್

By

Published : Oct 18, 2019, 8:56 PM IST

ರಾಂಚಿ: ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾ ಸ್ಪಿನ್ನರ್​ ಕುಲ್ದೀಪ್​ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಿಂದ ಹೊರ ಬಿದ್ದಿದ್ದಾರೆ. ಅವರ ಸ್ಥಾನದಲ್ಲಿ ಸ್ಥಳೀಯ ಯುವ ಬೌಲರ್ ಸ್ಥಾನ ಪಡೆದುಕೊಂಡಿದ್ದಾರೆ.

ಕುಲ್ದೀಪ್​ ಯಾದವ್

ಎಡಗೈ ಸ್ಪಿನ್ನರ್​ ಶಹ್ಬಾಜ್ ನದೀಮ್​ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿರುವ ನದೀಮ್, ಜಾರ್ಖಂಡ್​ ಮತ್ತು ಭಾರತ ಎ ತಂಡದ ಹಲವು ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕುಲ್ದೀಪ್​ ಬದಲು ನದೀಮ್​ ಅವರನ್ನ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಶಹ್ಬಾಜ್ ನದೀಮ್

110 ಪ್ರಥಮ ದರ್ಜೆ ಕ್ರಿಕೆಟ್​ ಪಂದ್ಯಗಳನ್ನ ಆಡಿರುವ ಶಹ್ಬಾಜ್ ನದೀಮ್ 424 ವಿಕೆಟ್ ಪಡೆದುಕೊಂಡಿದ್ದಾರೆ. 19 ಬಾರಿ 5 ವಿಕೆಟ್​ಗಳ ಗುಚ್ಚ ಪಡೆದಿದ್ದರೆ 5 ಬಾರಿ 10 ವಿಕೆಟ್​ಗಳ ಗುಚ್ಚ ಕಬಳಿಸಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 2018ರಲ್ಲಿ ವೆಸ್ಟ್​​ ಇಂಡೀಸ್​ ವಿರುದ್ಧ ಟಿ-20 ಟೂರ್ನಿಯಲ್ಲಿ ಸ್ಥಾನ ಪಡೆದಿದ್ದ ನದೀಮ್​ 11 ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ.

ABOUT THE AUTHOR

...view details