ಬೆಂಗಳೂರು :ರಾಜ್ಯದಲ್ಲಿ ಕೋವಿಡ್-19 ಕೇಸ್‌ಗಳ ಏರಿಕೆಯ ಕಾರಣ ಕೆಲ ನೂತನ ಮಾರ್ಗಸೂಚಿಗಳನ್ನು ಸರ್ಕಾರ ಹೊರ ತಂದಿದೆ. ಇದಕ್ಕನುಗುಣವಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್(ಕೆಎಸ್ಸಿಎ) ಕೂಡ ತನ್ನ ಎಲ್ಲಾ ಟೂರ್ನಮೆಂಟ್ಗಳನ್ನು ಭಾನುವಾರದ ನಂತರ ರದ್ದುಗೊಳಿಸುವುದಾಗಿ ಆದೇಶಿಸಿದೆ.
ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ಅಬ್ಬರ ಹಿನ್ನೆಲೆ, ಸರ್ಕಾರವು ಕೆಲ ಕಠಿಣ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿಯ ಪ್ರಕಾರ ಪಬ್, ಬಾರ್, ರೆಸ್ಟೋರೆಂಟ್ಗಳಿಗೆ ಶೇ.50ರಷ್ಟು ಮೀಸಲಾತಿ ನೀಡಿದ್ರೆ, ವಿದ್ಯಾಗಮ, ಜಿಮ್, ಸ್ವಿಮ್ಮಿಂಗ್ ಫೂಲ್ಗಳಿಗೆ 18 ದಿನಗಳ ಕಾಲ ಸಂಪೂರ್ಣ ಸ್ಥಗಿತಗೊಳಿಸಲು ಆದೇಶಿಸಿದೆ. ಜೊತೆಗೆ ಯಾವುದೇ ಕ್ರೀಡೆಗಳನ್ನು ಮುನ್ನೆಚ್ಚರಿಕೆಯಿಂದ ಪ್ರೇಕ್ಷಕರಿಲ್ಲದೆ ನಡೆಸಲು ಅವಕಾಶ ನೀಡಿದೆ.
"ಕೆಎಸ್ಸಿಎ(ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್) ಕರ್ನಾಟಕ ರಾಜ್ಯ ಸರ್ಕಾರ ಏಪ್ರಿಲ್ 2ರಂದು ಹೊಸ ಕೋವಿಡ್ ಮಾರ್ಗಸೂಚಿಗಳನ್ನು ಪರಿಶೀಲಿಸಿದೆ. ಇದರ ಪ್ರಕಾರ ಕ್ರಿಕೆಟ್ ಪಂದ್ಯಗಳನ್ನಾಡಲು ಯಾವುದೇ ನಿರ್ಬಂಧವಿಲ್ಲ. ಆದರೆ, ಮುನ್ನಡೆಚ್ಚರಿಕೆ ಕ್ರಮವಾಗಿ ಅಂಡರ್-16 ಝೋನಲ್ ಪಂದ್ಯವನ್ನು ಸೋಮವಾರದಿಂದ ರದ್ದುಗೊಳಿಸಲು ಬೋರ್ಡ್ ತೀರ್ಮಾನಿಸಿದೆ.