ಕರ್ನಾಟಕ

karnataka

ETV Bharat / sports

ಕೃನಾಲ್​ ಪಾಂಡ್ಯಗೆ 30ರ ಸಂಭ್ರಮ.. ಹಾಲಿ ಮಾಜಿ ಕ್ರಿಕೆಟಿಗರಿಂದ ಶುಭಾಶಯ - ಹಾರ್ದಿಕ್ ಪಾಂಡ್ಯ

ಮಂಗಳವಾರವಷ್ಟೇ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಕೃನಾಲ್ ಪಾಂಡ್ಯ, ಕೇವಲ 31 ಎಸೆತಗಳಲ್ಲಿ 58 ರನ್​ ಸಿಡಿಸಿ ಭಾರತದ ಗೆಲುವಿನ ಭಾಗವಾಗಿದ್ದರು. ಅಲ್ಲದೆ ಬೌಲಿಂಗ್​ನಲ್ಲಿ 59 ರನ್​ ನೀಡಿ 1 ವಿಕೆಟ್ ಪಡೆದಿದ್ದರು.

ಕೃನಾಲ್ ಪಾಂಡ್ಯ ಜನ್ಮದಿನಾಚರಣೆ
ಕೃನಾಲ್ ಪಾಂಡ್ಯ ಜನ್ಮದಿನಾಚರಣೆ

By

Published : Mar 24, 2021, 5:04 PM IST

ಹೈದರಾಬಾದ್​:ಭಾರತ ತಂಡದ ಸ್ಟಾರ್​ ಆಲ್​ರೌಂಡರ್​ ಕೃನಾಲ್ ಪಾಂಡ್ಯ ಬುಧವಾರ 30ನೇ ವಸಂತಕ್ಕೆ ಕಾಲಿಟ್ಟಿದ್ದು, ಯುವರಾಜ್ ಸಿಂಗ್​, ದಿನೇಶ್ ಕಾರ್ತಿಕ್ ಸೇರಿದಂತೆ ಹಾಲಿ- ಮಾಜಿ ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.

ಮಂಗಳವಾರವಷ್ಟೇ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಕೃನಾಲ್ ಪಾಂಡ್ಯ, ಕೇವಲ 31 ಎಸೆತಗಳಲ್ಲಿ 58 ರನ್​ ಸಿಡಿಸಿ ಭಾರತದ ಗೆಲುವಿನ ಭಾಗವಾಗಿದ್ದರು. ಅಲ್ಲದೆ ಬೌಲಿಂಗ್​ನಲ್ಲಿ 59 ರನ್​ ನೀಡಿ 1 ವಿಕೆಟ್ ಪಡೆದಿದ್ದರು.

ಆಲ್​ರೌಂಡರ್​ ಆಗಿದ್ದ ಕೃನಾಲ್ ಪಾಂಡ್ಯ ಈಗಾಗಲೆ ಟಿ20 ಕ್ರಿಕೆಟ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇದೀಗ ಸಹೋದರ ಹಾರ್ದಿಕ್ ಪಾಂಡ್ಯರಂತೆ ಸೀಮಿತ ಓವರ್​ಗಳ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ಅವರು ಇಂದು ತಮ್ಮ 30ನೇ ಜನ್ಮದಿನವನ್ನಾಚರಿಸಿಕೊಳ್ಳುತ್ತಿದ್ದು, ಅವರಿಗೆ ಶುಭಾಶಯಗಳ ಮಹಾಪೂರ ಹರಿದುಬಂದಿದೆ.

"ನಾವಿಬ್ಬರು ಆರಂಭದಿಂದಲೂ ಒಟ್ಟಿಗೆ ಪಯಣ ಆರಂಭಿಸಿದ್ದೇವೆ. ಹಲವು ಏಳು ಬೀಳುಗಳನ್ನು ಕಂಡಿದ್ದೇವೆ. ನಾನು ನಿನ್ನನ್ನು ಸಹೋದರನಾಗಿ ಪಡೆದಿರುವುದಕ್ಕೆ ಅದೃಷ್ಟಶಾಲಿ. ಜನ್ಮದಿನದ ಶುಭಾಶಯಗಳು ಬಿಗ್ ಬ್ರದರ್" ಎಂದು ಟ್ವೀಟ್​ ಮೂಲಕ ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.

ಭಾರತ ಮಾಜಿ ಆಲ್​ರೌಂಡರ್​ ಯುವರಾಜ್ ಸಿಂಗ್, "ಜನ್ಮದಿನದ ಶುಭಾಶಯಗಳು ಕೃನಾಲ್ ಪಾಂಡ್ಯ, ನಿಮ್ಮ ಕನಸಿನ ಪಾದಾರ್ಪಣೆಗೆ ಅಭಿನಂದನೆಗಳು. ಕಠಿಣ ಶ್ರಮವಹಿಸುವುದನ್ನು ಮುಂದುವರಿಸಿ, ನಿಮ್ಮ ಮುಂದಿನ ದಿನಗಳು ಉತ್ತಮವಾಗಿರಲಿ" ಎಂದು ಬರೆದುಕೊಂಡಿದ್ದಾರೆ.

18 ಟಿ20 ಪಂದ್ಯಗಳನ್ನಾಡಿ 14 ವಿಕೆಟ್​ ಪಡೆದಿರುವ ಕೃನಾಲ್ ಪಾಂಡ್ಯಗೆ ದಿನೇಶ್ ಕಾರ್ತಿಕ್​, ಬಿಸಿಸಿಐ ಸೇರಿದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಶುಭಕೋರಿದ್ದಾರೆ.

ABOUT THE AUTHOR

...view details