ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಮನೆಯಲ್ಲೇ ಇರುವಂತೆ ಪಾಂಡ್ಯ ಸಹೋದರರಾದ ಹಾರ್ದಿಕ್ ಮತ್ತು ಕ್ರುನಾಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮನೆಯೊಳಗೇ ಕ್ರಿಕೆಟ್ ಆಡಿ ಜನರಿಗೆ ಸಂದೇಶ ಕೊಟ್ಟ ಪಾಂಡ್ಯ ಸಹೋದರರು - ಹಾರ್ದಿಕ್ ಮತ್ತು ಕ್ರುನಾಲ್
ಎಲ್ಲರೂ ಸುರಕ್ಷಿತವಾಗಿರಿ. ಹೊರಗೆ ಹೋಗುವುದನ್ನು ತಪ್ಪಿಸಿ. ನಮ್ಮ ಕುಟುಂಬದವರಂತೆ ನೀವು ಮನೆಯೊಳಗೆ ಮೋಜು ಮಾಡಬಹುದು. ಲಾಕ್‌ಡೌನ್ ಗಮನಿಸಿ ಕೊರೊನಾ ವೈರಸ್ ಹರಡುವುದನ್ನು ನಿಲ್ಲಿಸುವಂತೆ ನಾವು ಎಲ್ಲರನ್ನು ಕೋರುತ್ತೇವೆ" ಎಂದು ಪಾಂಡ್ಯ ಸಹೋದರರು ಜನರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಕ್ರುನಾಲ್ ಮತ್ತು ಹಾರ್ದಿಕ್ ಲಾಕ್ ಡೌನ್ ಹಿನ್ನೆಲೆ ಮನೆಯಲ್ಲೇ ಕ್ರಿಕೆಟ್ ಆಡುವುದನ್ನು ಕಾಣಬಹುದು. "ಎಲ್ಲರೂ ಸುರಕ್ಷಿತವಾಗಿರಿ. ಹೊರಗೆ ಹೋಗುವುದನ್ನು ತಪ್ಪಿಸಿ. ನಮ್ಮ ಮತ್ತು ನಮ್ಮ ಕುಟುಂಬದವರಂತೆ ನೀವು ಮನೆಯೊಳಗೆ ಮೋಜು ಮಾಡಬಹುದು. ಲಾಕ್‌ಡೌನ್ ಗಮನಿಸಿ ಕೊರೊನಾ ವೈರಸ್ ಹರಡುವುದನ್ನು ನಿಲ್ಲಿಸುವಂತೆ ನಾವು ಎಲ್ಲರನ್ನು ಕೋರುತ್ತೇವೆ" ಎಂದು ಪಾಂಡ್ಯ ಸಹೋದರರು ಹೇಳಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ವಿಶ್ವದಾದ್ಯಂತ ಎಲ್ಲಾ ಕ್ರೀಡಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಐಪಿಎಲ್‌ನ 13 ನೇ ಆವೃತ್ತಿಯನ್ನೂ ಎಪ್ರಿಲ್ 15 ರವರೆಗೆ ಸ್ಥಗಿತಗೊಳಿಸಲಾಗಿದೆ.