ಕರ್ನಾಟಕ

karnataka

ETV Bharat / sports

ಕೆ.ಶ್ರೀಕಾಂತ್​, ಅಂಜುಮ್​ ಚೊಪ್ರಾಗೆ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ - ಅಂಜುಮ್​ ಚೊಪ್ರಾಗೆ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ

ಜನವರಿ 12ರಂದು ಮುಂಬೈನಲ್ಲಿ ನಡೆಯುವ ಬಿಸಿಸಿಐ ವಾರ್ಷಿಕ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಕೆ. ಶ್ರೀಕಾಂತ್​ ಹಾಗೂ ಅಂಜುಮ್​ ಚೊಪ್ರಾಗೆ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತದೆ.

CK Nayudu Lifetime Achievement Award in January
Kris Srikkanth, Anjum Chopra

By

Published : Dec 28, 2019, 12:46 PM IST

ನವದೆಹಲಿ: 1983ರಲ್ಲಿ ವಿಶ್ವಕಪ್​ ಗೆದ್ದ ತಂಡದಲ್ಲಿದ್ದ ಕೃಷ್ಣಮಾಚಾರಿ ಶ್ರೀಕಾಂತ್​ ಹಾಗೂ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಅಂಜುಮ್​ ಚೊಪ್ರಾ ಅವರಿಗೆ ಬಿಸಿಸಿಐ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಜನವರಿ 12ರಂದು ಮುಂಬೈನಲ್ಲಿ ನಡೆಯುವ ಬಿಸಿಸಿಐ ವಾರ್ಷಿಕ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಕೆ. ಶ್ರೀ ಕಾಂತ್​ ಹಾಗೂ ಅಂಜುಮ್​ ಚೊಪ್ರಾಗೆ ಪ್ರಶಸ್ತಿ ನೀಡಲಿದೆ.

"ಭಾರತದ ಕ್ರಿಕೆಟ್​ಗೆ ಶ್ರೀಕಾಂತ್ ಹಾಗೂ ಅಂಜುಮ್​ ಅವರು ನೀಡಿರುವ ಸೇವೆಯನ್ನು ಮನದಲ್ಲಿಟ್ಟುಕೊಂಡು ಅವರಿಗೆ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತಿದೆ. ಅವರಿಬ್ಬರೂ ಈ ಪ್ರಶಸ್ತಿಗೆ ಅರ್ಹ ವ್ಯಕ್ತಿಗಳು" ಎಂದು ಬಿಸಿಸಿಐ ತಿಳಿಸಿದೆ.

ಕೆ.ಶ್ರೀಕಾಂತ್

ತಮಿಳುನಾಡಿನಲ್ಲಿ ಕ್ರಿಕೆಟ್ ಕಂಡ ಪ್ರಮುಖ ಆಟಗಾರರಲ್ಲಿ ಮಾಜಿ ನಾಯಕ ಎಸ್.​ ವೆಂಕಟರಾಘವನ್​ ಹಾಗೂ ರವಿಚಂದ್ರನ್​ ಅಶ್ವಿನ್ ಜೊತೆ ಶ್ರೀಕಾಂತ್​ ಹೆಸರು ಕೂಡಾ ಪ್ರಮುಖವಾಗಿದೆ.​ ಅವರು 1981 ರಿಂದ 1992 ರವರೆಗೆ ಭಾರತ ಕ್ರಿಕೆಟ್‌ ತಂಡ ಪ್ರತಿನಿಧಿಸಿದ್ದರು.

62 ವರ್ಷ ಶ್ರೀಕಾಂತ್​ ಭಾರತದ ಪರ 43 ಟೆಸ್ಟ್​, 2062 ರನ್​ಗಳಿಸಿದ್ದಾರೆ. ಶ್ರೀಕಾಂತ್​ ವೇಗದ ಬೌಲರ್​ಗಳಿಗೆ ಹೆಲ್ಮೆಟ್​ ಇಲ್ಲದೆ ಬ್ಯಾಟಿಂಗ್ ನಡೆಸುತ್ತಿದ್ದದ್ದು ಅವರ ಬ್ಯಾಟಿಂಗ್​ ವಿಶೇಷತೆಯಾಗಿದೆ. 1983ರ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ 38 ರನ್​ಗಳಿಸಿ ಭಾರತಕ್ಕೆ ವಿಶ್ವಕಪ್​ ತಂದುಕೊಡುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು.

ಅಂಜುಮ್​ ಚೊಪ್ರಾ

1989ರಲ್ಲಿ ಭಾರತ ತಂಡದ ನಾಯಕರಾಗಿದ್ದ ಶ್ರೀಕಾಂತ್​, 1992 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. 2009-12ರಲ್ಲಿ ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇವರು ಆಯ್ಕೆ ಮಾಡಿದ ತಂಡವೇ 2011ರಲ್ಲಿ ವಿಶ್ವಕಪ್​ ಎತ್ತಿ ಹಿಡಿದಿತ್ತು.

ಮತ್ತೊಬ್ಬ ಪ್ರಶಸ್ತಿ ವಿಜೇತರಾದ 42 ವರ್ಷದ ಅಂಜುಮ್​ ಚೊಪ್ರಾ ಭಾರತದ ಪರ 12 ಪಂದ್ಯಗಳಿಂದ 548 ರನ್​ಗಳಿಸಿದ್ದಾರೆ. 127 ಏಕದಿನ ಪಂದ್ಯವಾಡಿರುವ ಅವರು 18 ಅರ್ಧಶತಕ ಹಾಗೂ 1 ಶತಕದ ನೆರವಿನಿಂದ 2,856 ರನ್​ಗಳಿಸಿದ್ದಾರೆ.

ABOUT THE AUTHOR

...view details