ಬೆಂಗಳೂರು:ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ನೆಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ಮತ್ತಷ್ಟು ಮಹತ್ವದ ವಿಚಾರಗಳು ದೊರೆತಿವೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು ವಿಚಾರಣೆ ನಡೆಸಿದಾಗ ಕೆಪಿಎಲ್ ಆಟಗಾರರನ್ನು ಹಾಗೂ ತಂಡದ ಮಾಲೀಕರನ್ನ ಹನಿಟ್ರ್ಯಾಪ್ ಮೂಲಕ ಬೆದರಿಸಿ ಮ್ಯಾಚ್ ಫಿಕ್ಸಿಂಗ್ ಮಾಡಿಸಿದ ವಿಚಾರ ಬಹಿರಂಗವಾಗಿದೆ.
ಕೆಪಿಎಲ್ ಆಟಗಾರರು ಹಾಗೂ ತಂಡದ ಮಾಲೀಕರನ್ನ ಗುರಿಯಾಗಿಸಿಕೊಂಡು ಬುಕ್ಕಿಗಳು ಮೊದಲು ಒಬ್ಬ ಮಹಿಳೆಯನ್ನು ಕಳುಹಿಸುತ್ತಿದ್ದರು. ಆ ಮಹಿಳೆ ಪ್ರತಿಷ್ಟಿತ ಆಟಗಾರರು ಹಾಗು ಮಾಲೀಕರ ಜೊತೆ ಸೆಕ್ಸ್ ಅಥವಾ ಅಸಭ್ಯವಾಗಿ ವರ್ತಿಸುತ್ತಿದ್ದರು. ಅವರಿಗೆ ಗೊತ್ತಾಗದ ರೀತಿ ವಿಡಿಯೋ ಮಾಡಿ ಬೆದರಿಸಿ, ಬುಕ್ಕಿಗಳು ಮ್ಯಾಚ್ ಫಿಕ್ಸಿಂಗ್‌ನಲ್ಲಿ ತೊಡಗಿಸಿರುವ ವಿಚಾರ ತನಿಖೆಯಲ್ಲಿ ಬಯಲಾಗಿದೆ.