ಕರ್ನಾಟಕ

karnataka

ETV Bharat / sports

ಕೆಪಿಎಲ್..  ಶಿವಮೊಗ್ಗ ತಂಡಕ್ಕೆ ಸೋಲುಣಿಸಿ 2ನೇ ಕ್ವಾಲಿಫೈಯರ್ ಪ್ರವೇಶಿಸಿದ ಹುಬ್ಬಳ್ಳಿ ಟೈಗರ್ಸ್​.. - ಶಿವಮೊಗ್ಗ ಲಯನ್ಸ್

ಕರ್ನಾಟಕ ಪ್ರೀಮಿಯರ್​ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹುಬ್ಬಳ್ಳಿ ಶಿವಮೊಗ್ಗ ಲಯನ್ಸ್ ತಂಡಕ್ಕೆ ಸೋಲುಣಿಸಿದ ಹುಬ್ಬಳ್ಳಿ ಟೈಗರ್ಸ್ ತಂಡ ಎರಡನೇ ಕ್ವಾಲಿಫೈಯರ್ ಹಂತ ಪ್ರವೇಶಿಸಿದೆ.

ಹುಬ್ಬಳ್ಳಿ ಟೈಗರ್ಸ್​

By

Published : Aug 30, 2019, 9:10 AM IST

ಮೈಸೂರು:ನಾಯಕ ವಿನಯ್‍ಕುಮಾರ್ ಹಾಗೂ ಕೆ ಬಿ ಪವನ್ ಅವರ 111ರನ್‍ಗಳ ಜೊತೆಯಾಟದಿಂದ ಶಿವಮೊಗ್ಗ ಲಯನ್ಸ್ ತಂಡವನ್ನು 20 ರನ್‍ಗಳಿಂದ ಬಗ್ಗು ಬಡಿದ ಹುಬ್ಬಳ್ಳಿ ಟೈಗರ್ಸ್ ಕರ್ನಾಟಕ ಪ್ರೀಮಿಯರ್​ ಲೀಗ್​ನಲ್ಲಿ 2ನೇ ಕ್ವಾಲಿಫೈಯರ್ ಹಂತ ಪ್ರವೇಶಿಸಿದೆ.

ಮಾನಸ ಗಂಗೋತ್ರಿಯಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಹುಬ್ಬಳ್ಳಿ ಟೈಗರ್ಸ್ ತಂಡ ಉತ್ತಮ ಪ್ರದರ್ಶನ ತೋರಿತು. ಶಿವಮೊಗ್ಗ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್​ ನಡೆಸಿದ ಹುಬ್ಬಳ್ಳಿ ಹುಡುಗರು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 190 ರನ್​ ಪೇರಿಸಿದ್ರು. ಹುಬ್ಬಳ್ಳಿ ಟೈಗರ್ಸ್​ ಪರ ಕೆ ಬಿ ಪವನ್ ಔಟಾಗದೆ 56 ರನ್​, ವಿನಯ್ ಕುಮಾರ್ 55, ಮೊಹ್ಮದ್ ತಹ 41, ಪ್ರವೀಣ್ ದುಬೆ 23 ರನ್​ಗಳಿಸಿದರು.

190 ರನ್​ಗಳ ಬೃಹತ್ ಮೊತ್ತ ಬೆನ್ನತ್ತಿದ ಶಿವಮೊಗ್ಗ ಲಯನ್ಸ್ ತಂಡ ಆರಂಭಿಕ ಆಘಾತ ಅನುಭವಿಸಿತು. ಟಾಪ್​ ಆರ್ಡರ್ ಬ್ಯಾಟ್ಸ್​ಮನ್​ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿ ನಿರಾಸೆ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಪವನ್ ದೇಶಪಾಂಡೆ 38, ಎಂ ನದೀಶ್ 26, ನಾಯಕ ಅಭಿಮನ್ಯು ಮಿಥುನ್ 40, ಹೆಚ್ ಎಸ್ ಶರತ್ 25ರನ್​ ಗಳಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ, ಕರಾರುವಾಕ್‌ ಬೌಲಿಂಗ್ ದಾಳಿ ನಡೆಸಿದ ಹುಬ್ಬಳ್ಳಿ ಟೈಗರ್ಸ್​ ತಂಡದ ಆಟಗಾರರು ಶಿವಮೊಗ್ಗ ತಂಡವನ್ನ ಕಟ್ಟಿಹಾಕಿದರು. ಅಂತಿಮವಾಗಿ 19.3 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 170 ರನ್‍ಗಳಿಸಿದ ಶಿವಮೊಗ್ಗ ತಂಡ 20 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಈ ಮೂಲಕ ಎರಡನೇ ಕ್ವಾಲಿಫೈಯರ್ ಸುತ್ತಿಗೆ ಪ್ರವೇಶ ಪಡೆದ ಹುಬ್ಬಳ್ಳಿ ಟೈಗರ್ಸ್​ ತಂಡ ಇಂದು ಬೆಳಗಾವಿ ಪ್ಯಾಂಥರ್ಸ್​ ತಂಡವನ್ನ ಎದುರಿಸಲಿದೆ.

ABOUT THE AUTHOR

...view details