ಕರಾಚಿ: ವಿರಾಟ್ ಕೊಹ್ಲಿ ಅವರ ದಾಖಲೆಗಳೇ ಅವರ ಸಾಮರ್ಥ್ಯವನ್ನು ಸಾಬೀತು ಪಡಿಸುತ್ತವೆ ಎಂದು ಹಿರಿಯ ಪಾಕ್ ಕ್ರಿಕೆಟ್ ಪಟು ಜಾವೇದ ಮಿಯಾಂದಾದ್ ಹೇಳಿದ್ದಾರೆ. ಕೊಹ್ಲಿ ಬ್ಯಾಂಟಿಂಗ್ 'ಕ್ಲಾಸಿ' ಎಂದು ಮಿಯಾಂದಾದ್ ಬಾಯ್ತುಂಬ ಹೊಗಳಿದ್ದಾರೆ.
ವಿರಾಟ್ ಕೊಹ್ಲಿ ನನ್ನ ಮೆಚ್ಚಿನ ಬ್ಯಾಟ್ಸ್ಮನ್; ಮಿಯಾಂದಾದ್ - javed miandad
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ, ಹಿರಿಯ ಕ್ರಿಕೆಟ್ ಪಟು ಜಾವೇದ್ ಮಿಯಾಂದಾದ್ ಅವರು ವಿರಾಟ್ ಕೊಹ್ಲಿ ಆಟದ ಶೈಲಿಯನ್ನು 'ಕ್ಲಾಸಿ' ಎಂದು ಬಾಯ್ತುಂಬ ಹೊಗಳಿದ್ದಾರೆ. ವೇಗದ ಬೌಲಿಂಗ್, ಬೌನ್ಸ್ ಪಿಚ್ಗಳು, ಸ್ಪಿನ್ ಬೌಲಿಂಗ್ ಹೀಗೆ ಯಾವುದಕ್ಕೂ ಹೆದರದೇ ಆಟವಾಡುವ ಕೊಹ್ಲಿ ನನ್ನ ಮೆಚ್ಚಿನ ಭಾರತೀಯ ಕ್ರಿಕೆಟ್ ಆಟಗಾರ ಎಂದು ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೊಂಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ಮಿಯಾಂದಾದ್, ಪ್ರಸ್ತುತ ಭಾರತ ಕ್ರಿಕೆಟ್ ತಂಡದ ಪ್ರತಿಭಾ ಸಾಮರ್ಥ್ಯದ ಬಗ್ಗೆ ಸಾಕಷ್ಟು ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ಈಗ ಭಾರತೀಯ ಕ್ರಿಕೆಟ್ ತಂಡದಲ್ಲಿರುವವರಲ್ಲಿ ನಿಮಗೆ ಫೇವರಿಟ್ ಯಾರು ಎಂದು ಕೇಳಿದರೆ ನಾನು ಕೊಹ್ಲಿ ಅವರ ಬೆಂಬಲಕ್ಕೆ ನಿಲ್ಲುತ್ತೇನೆ. ಅವರ ಸಾಮರ್ಥ್ಯದ ಬಗ್ಗೆ ನಾನೇನೂ ಹೇಳಬೇಕಿಲ್ಲ. ಅವರ ದಾಖಲೆಗಳು, ಅದರಲ್ಲಿನ ಅಂಕಿ-ಅಂಶಗಳೇ ಎಲ್ಲವನ್ನೂ ಹೇಳುತ್ತವೆ. ಸೌತ್ ಆಫ್ರಿಕಾ ಪ್ರಯಾಣದಲ್ಲಿ ವಿರಾಟ್ ತುಂಬಾ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಅಲ್ಲಿಯೂ ಶತಕ ಬಾರಿಸಿರುವ ವಿರಾಟ್ ವೇಗದ ಬೌಲಿಂಗ್, ಪುಟಿಯುವ ಪಿಚ್ ಅಥವಾ ಸ್ಪಿನ್ನರ್ಗಳು ಯಾವುದಕ್ಕೂ ಹೆದರಲಾರರು.' ಎಂದು ಮಿಯಾಂದಾದ್ ತಿಳಿಸಿದ್ದಾರೆ.