ಕರ್ನಾಟಕ

karnataka

ETV Bharat / sports

ಕೊಹ್ಲಿ ಗೈರು ಭಾರತ ತಂಡದ ಬ್ಯಾಟಿಂಗ್​ ಕ್ರಮಾಂಕದಲ್ಲಿ ದೊಡ್ಡ ಅಂತರ ಸೃಷ್ಟಿಸಲಿದೆ: ಇಯಾನ್ ಚಾಪೆಲ್ - Ian Chappell

ಡಿಸೆಂಬರ್​ 17ರಿಂದ ಆರಂಭವಾಗಲಿರುವ ಅಡಿಲೇಡ್​ನಲ್ಲಿ ನಡೆಯುವ ಮೊದಲ ಟೆಸ್ಟ್​ ನಂತರ ಕೊಹ್ಲಿ ಪಿತೃತ್ವ ರಜೆಯ ಮೇಲೆ ಭಾರತಕ್ಕೆ ಹಿಂತಿರುಗಲಿದ್ದಾರೆ. ಹಾಗಾಗಿ ಕೊನೆಯ ಮೂರು ಟೆಸ್ಟ್​ನ ಪಂದ್ಯಗಳಲ್ಲಿ ಕೊಹ್ಲಿ ಆಡುತ್ತಿಲ್ಲ. ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಕೆಲವು ಮಾಜಿ ಆಟಗಾರರು ಕೊಹ್ಲಿ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ನಷ್ಟ ಎಂದು ಈಗಾಗಲೇ ಹೇಳಿದ್ದಾರೆ. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಕೂಡ ವಿರಾಟ್ ಅಲಭ್ಯತೆ ಟೀಮ್ ಇಂಡಿಯಾ ಬ್ಯಾಟಿಂಗ್​ನಲ್ಲಿ ಬಹುದೊಡ್ಡ ಅಂತರ ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

By

Published : Nov 22, 2020, 4:24 PM IST

Updated : Nov 22, 2020, 4:51 PM IST

ಅಡಿಲೇಡ್​: ಮುಂಬರುವ ಬಾರ್ಡರ್ ಗವಾಸ್ಕರ್​ ಟ್ರೋಫಿಯ ಕೊನೆಯ ಮೂರು ಟೆಸ್ಟ್​ ಪಂದ್ಯಗಳಲ್ಲಿ ಕೊಹ್ಲಿ ಗೈರಾಗುತ್ತಿರುವುದು ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಹಿದೊಡ್ಡ ಅಂತರವನ್ನು ಸೃಷ್ಟಿಸಲಿದ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್​ ಅಭಿಪ್ರಾಯ ಪಟ್ಟಿದ್ದಾರೆ.

ಡಿಸೆಂಬರ್​ 17ರಿಂದ ಆರಂಭವಾಗಲಿರುವ ಅಡಿಲೇಡ್​ನಲ್ಲಿ ನಡೆಯುವ ಮೊದಲ ಟೆಸ್ಟ್​ ನಂತರ ಕೊಹ್ಲಿ ಪಿತೃತ್ವ ರಜೆಯ ಮೇಲೆ ಭಾರತಕ್ಕೆ ಹಿಂತಿರುಗಲಿದ್ದಾರೆ. ಹಾಗಾಗಿ ಕೊನೆಯ ಮೂರು ಟೆಸ್ಟ್​ನ ಪಂದ್ಯಗಳಲ್ಲಿ ಕೊಹ್ಲಿ ಆಡುತ್ತಿಲ್ಲ. ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಕೆಲವು ಮಾಜಿ ಆಟಗಾರರು ಕೊಹ್ಲಿ ಅನುಪಸ್ಥಿತಿ ಭಾರತ ತಂಡಕ್ಕೆ ದೊಡ್ಡ ನಷ್ಟ ಎಂದು ಈಗಾಗಲೇ ಹೇಳಿದ್ದಾರೆ. ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಕೂಡ ವಿರಾಟ್ ಅಲಭ್ಯತೆ ಟೀಮ್ ಇಂಡಿಯಾ ಬ್ಯಾಟಿಂಗ್​ನಲ್ಲಿ ಬಹುದೊಡ್ಡ ಅಂತರ ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.

ಇಯಾನ್​ ಚಾಪೆಲ್​

" ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲರುವ ಕೊಹ್ಲಿ ಮೊದಲ ಟೆಸ್ಟ್‌ನ ನಂತರ ತವರಿಗೆ ಮರಳಿದ ನಂತರ ಟೀಮ್ ಇಂಡಿಯಾದಲ್ಲಿ ಆಯ್ಕೆಯ ಸಂದಿಗ್ಧತೆಯನ್ನು ಎದುರಿಸಲಿದೆ. ಅಲ್ಲದೆ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ದೊಡ್ಡ ರಂಧ್ರವನ್ನುಂಟುಮಾಡಲಿದೆ. ಜೊತೆಗೆ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಹಾಗೂ ಹೆಸರುಗಳಿಸಿಕೊಳ್ಳಲು ಅವಕಾಶ ದೊರೆಯಲಿದೆ" ಎಂದು ಚಾಪೆಲ್ ತಿಳಿಸಿದ್ದಾರೆ.

ಟೀಮ್ ಇಂಡಿಯಾದಲ್ಲಿ ಈಗಾಗಲೆ ಕೊಹ್ಲಿ ಜಾಗವನ್ನು ತುಂಬುವ ವಿಚಾರದಲ್ಲಿ ರೋಮಾಂಚನಕಾರಿ ಚರ್ಚೆಗಳು ನಡೆಯುತ್ತಿದೆ. ಈ ಚರ್ಚೆ ತಂಡದ ಆಯ್ಕೆಯ ಸಂದರ್ಭದಲ್ಲಿ ನಿರ್ಣಾಯಕವಾಗಿರಲಿದೆ ಎಂದು ಚಾಪೆಲ್ ತಿಳಿಸಿದ್ದಾರೆ.

Last Updated : Nov 22, 2020, 4:51 PM IST

ABOUT THE AUTHOR

...view details