ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ಕ್ರಿಕೆಟರ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಡುವಿನ ಹೋಲಿಕೆಗಳು ಹೆಚ್ಚುತ್ತಲೇ ಇವೆ. ಪ್ರಸ್ತುತ ಸಚಿನ್ರ ಎಲ್ಲಾ ದಾಖಲೆಗಳನ್ನು ವಿರಾಟ್ ಮುರಿಯಬಹುದೆಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ.
ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12 ವರ್ಷ ಪೂರೈಸಿದ್ದು, ಸಚಿನ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 12 ವರ್ಷ ಪೂರೈಸಿದ ದಿನಗಳಲ್ಲಿ ಮಾಡಿದ ಸಾಧನೆಗಳನ್ನ ಹೋಲಿಸಲಾಗುತ್ತಿದೆ.
ಸಚಿನ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಅವರು ಬ್ಯಾಟ್‌ನಿಂದ ಎಲ್ಲವನ್ನೂ ಸಾಧಿಸಿದ್ದಾರೆ. 463 ಏಕದಿನ ಪಂದ್ಯಗಳಿಂದ 44.83 ಸರಾಸರಿಯಲ್ಲಿ 18,426 ರನ್ ಗಳಿಸಿದ್ದಾರೆ. ಸಚಿನ್ 50 ಓವರ್ ಫಾರ್ಮೆಟ್ನಲ್ಲಿ ಶತಕಗಳ ಅರ್ಧಶತಕ ಸಿಡಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳಲ್ಲಿ 'ಮಾಸ್ಟರ್ ಬ್ಲಾಸ್ಟರ್' ಎಂದು ಜನಪ್ರಿಯವಾಗಿರುವ ಸಚಿನ್ 200 ಟೆಸ್ಟ್ ಪಂದ್ಯಗಳಲ್ಲಿ 15,921 ರನ್ ಗಳಿಸಿದ್ದಾರೆ. ಟೆಸ್ಟ್ನಲ್ಲಿ 51 ಶತಕ ಸಿಡಿಸಿದ್ದಾರೆ.
'ಗೇಮ್ ಆಫ್ ಫೇಮ್' ಇತಿಹಾಸದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಮುಟ್ಟಿದ ಏಕೈಕ ಆಟಗಾರ ಸಚಿನ್ ಮತ್ತು ಹಾಲಿ ಭಾರತ ತಂಡದ ನಾಯಕ ವಿರಾಟ್ ಆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಈಗಾಗಲೇ 70 ಶತಕ ಸಿಡಿಸಿದ್ದಾರೆ.