ಮುಂಬೈ: ಭಾರತ ಕ್ರಿಕೆಟ್ ತಂಡದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 2011ನೇ ವಿಶ್ವಕಪ್ ಗೆಲುವಿನ ಸಂಭ್ರಮದ ಕ್ಷಣ ಲೌರೆಸ್ ಸ್ಪೂರ್ತಿದಾಯಕ ಕ್ರೀಡಾ ಕ್ಷಣಕ್ಕೆ ಆಯ್ಕೆಯಾಗಿದ್ದು ಸಚಿನ್ಗೆ ಮತ ಹಾಕುವಂತೆ ಟೀಂ ಇಂಡಿಯಾ ನಾಯಕ ಕೊಹ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
2000ರಿಂದ 2020ರ ವರೆಗಿನ 20 ವರ್ಷಗಳಲ್ಲಿ ಕ್ರೀಡಾಲೋಕದ 20 ಸ್ಮರಣೀಯ ಕ್ಷಣಗಳನ್ನು ಪಟ್ಟಿಯಲ್ಲಿ ಮಾಡಲಾಗಿತ್ತು. ಅದರಲ್ಲಿ 2011ರಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಗೆದ್ದ ಬಳಿಕ ಸಚಿನ್ ತೆಂಡೂಲ್ಕರ್ ಅವರನ್ನ ತಂಡದ ಸಹ ಆಟಗಾರರು ತಮ್ಮ ಭುಜದ ಮೇಲೆ ಹೊತ್ತು ವಾಂಖೆಡೆ ಸ್ಟೇಡಿಯಂನ ಸುತ್ತು ಒಂದು ಸುತ್ತು ಸುತ್ತಿದ್ದರು. ಈ ಕ್ಷಣವನ್ನು ‘ದೇಶವನ್ನು ಭುಜದ ಮೇಲೆ ಹೊತ್ತ ಕ್ಷಣ’ ಎಂದು ಹೆಸರಿಡಲಾಗಿದೆ. ಇದು ಆ ಪಟ್ಟಿಯಲ್ಲಿ ಮೊದಲ 5 ಸ್ಥಾನಗಳಲ್ಲಿ ಅವಕಾಶ ಪಡೆದಿದೆ.
"ಗೆಳೆಯ, ತಂಡದ ಸಹ ಆಟಗಾರ, ಮೆಂಟರ್, ಐಕಾನ್ ಆಗಿರುವ ಸಚಿನ್ ಪಾಜಿ ಅವರನ್ನು '2000-2020 ಲೌರೆಸ್ ಸ್ಪೂರ್ತಿದಾಯಕ ಕ್ಷಣ ' ಗೌರವ ದೊರಕುವಂತೆ ಮಾಡಲು ನಾವೆಲ್ಲರೂ ಒಟ್ಟಿಗೆ ಮತ ಹಾಕೋಣ" ಎಂದು ಟ್ವೀಟ್ ಮಾಡಿದ್ದಾರೆ.