ಕರ್ನಾಟಕ

karnataka

ETV Bharat / sports

ವಿಂಡೀಸ್​ ಪ್ರವಾಸಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಲಿರುವ ಕೊಹ್ಲಿ.. ಖಚಿತ ಪಡಿಸಿದ ಬಿಸಿಸಿಐ - kohli-rohit

ವಿಂಡೀಸ್​ ಪ್ರವಾಸಕ್ಕೆ ತೆರಳುವ ಮುನ್ನ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಬಿಸಿಸಿಐ ಖಚಿತ ಪಡಿಸಿದೆ.

press conference ಕೊಹ್ಲಿ

By

Published : Jul 29, 2019, 10:30 AM IST

ಮುಂಬೈ:ವಿಂಡೀಸ್​ ಪ್ರವಾಸಕ್ಕೆ ತೆರಳುವ ಮುನ್ನ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಬಿಸಿಸಿಐ ಖಚಿತ ಪಡಿಸಿದೆ.

ಸೋಮವಾರ ಭಾರತ ತಂಡ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ಅಮರಿಕಾಕ್ಕೆ ತೆರಳುತ್ತಿದ್ದು, ಇದಕ್ಕೂ ಮುನ್ನ ಕೊಹ್ಲಿ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ರೋಹಿತ್​ ಮತ್ತು ಕೊಹ್ಲಿ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಗುಸುಗುಸು ಕೇಳಿಬಂದಿದ್ದ ಹಿನ್ನಲೆ ಕೊಹ್ಲಿ ಸುದ್ದಿಗೋಷ್ಠಿಗೆ ಗೈರಾಗುತ್ತಾರೆಂಬ ಮಾಹಿತಿ ತಿಳಿದು ಬಂದಿತ್ತು. ಆದರೆ, ಅದನ್ನು ಅಲ್ಲಗೆಳೆದಿರುವ ಬಿಸಿಸಿಐ ಕೊಹ್ಲಿ ಸುದ್ದಿಗೋಷ್ಠಿ ನಡೆಸಿಯೇ ಅಮೆರಿಕಾಕ್ಕೆ ಪ್ರಯಾಣ ಮಾಡಲಿದ್ದಾರೆ ಎಂದು ತಿಳಿಸಿದೆ.

ಭಾರತ ತಂಡ ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಸೋಲುನುಭವಿಸಿದ ಮೇಲೆ ತಂಡದಲ್ಲಿ ಬಿರುಕು ಮೂಡಿದೆ. ಎರಡು ಬಣಗಳಾಗಿದೆ ಹಾಗೂ ರೋಹಿತ್​-ಕೊಹ್ಲಿ ನಡುವೆ ಬಣ ಸೃಷ್ಠಿಯಾಗಿದೆ ಎಂಬೆಲ್ಲಾ ವದಂತಿಗಳು ಕೇಳಿಬಂದಿದ್ದವು. ಈ ಕಾರಣದಿಂದ ಕೊಹ್ಲಿ ಮಾಧ್ಯಮದಿಂದ ದೂರ ಉಳಿಯಲಿದ್ದಾರೆ ಎನ್ನಲಾಗಿತ್ತು.

ಅಗಸ್ಟ್​ 3ರಿಂದ ವಿಂಡೀಸ್​ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಕೊಹ್ಲಿ ಪಡೆ 3 ಟಿ20, 3 ಏಕದಿನ ಪಂದ್ಯ ಹಾಗೂ 2 ಟೆಸ್ಟ್​ ಪಂದ್ಯವನ್ನಾಡಲಿದೆ. ಟಿ20 ಅಗಸ್ಟ್​ 3, 4 ಮತ್ತು 6 ರಂದು ನಡೆಯಲಿದೆ. ಏಕದಿನ ಪಂದ್ಯ ಅಗಸ್ಟ್ 8,11 ಹಾಗೂ 14 ರಂದು ನಡೆದರೆ, ಅಗಸ್ಟ್​ 22ರಿಂದ 26ರವರೆಗೆ ಮೊದಲ ಟೆಸ್ಟ್​, ಅಗಸ್ಟ್​ 30 ರಿಂದ ಸೆಪ್ಟೆಂಬರ್​ 3 ರವರೆಗೆ ಎರಡನೇ ಟೆಸ್ಟ್​ ನಡೆಯಲಿದೆ.

ABOUT THE AUTHOR

...view details