ಕರ್ನಾಟಕ

karnataka

ETV Bharat / sports

2 ದಶಕಗಳ ಕಾಲ ಸಚಿನ್‌ ಭಾರತದ ಕ್ರಿಕೆಟ್‌ ಹೊಣೆ ಹೊತ್ತಿದ್ದರು, ಅದಕ್ಕಾಗಿ ಅವರನ್ನು ಹೊತ್ತು ಸಾಗಿದೆವು: ಕೊಹ್ಲಿ - ಎಂಎಸ್​ ಧೋನಿ

ವಿಶ್ವಕಪ್​ ಗೆದ್ದ ಸಂದರ್ಭದಲ್ಲಿ ನಮ್ಮೆಲ್ಲರ ಚಿತ್ತ ಸಚಿನ್​ ಪಾಜಿ ಅವರತ್ತ ಇತ್ತು. ಏಕೆಂದರೆ, ಅವರಿಗೆ ವಿಶ್ವಕಪ್​ ಎತ್ತಿ ಹಿಡಿಯಲು ಅದೊಂದೇ ಕೊನೆಯ ಅವಕಾಶವಾಗಿತ್ತು. ಅವರು ಭಾರತದ ಕ್ರಿಕೆಟ್​ ಅನ್ನು 21 ವರ್ಷಗಳ ಕಾಲ ಹೊತ್ತು ಸಾಗಿದ್ದರು. ಅದಕ್ಕಾಗಿ ನಾವೆಲ್ಲರೂ ಅವರನ್ನು ಹೊತ್ತು ಸಂಭ್ರಮಿಸಿದೆವು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

2011 world cup
2011 world cup

By

Published : Jul 29, 2020, 2:38 PM IST

ಮುಂಬೈ: ಭಾರತ ಕ್ರಿಕೆಟ್​ ತಂಡ 2011ರ ವಿಶ್ವಕಪ್​ನಲ್ಲಿ ಚಾಂಪಿಯನ್​ ಆಗಿತ್ತು. 28 ವರ್ಷಗಳ ವಿಶ್ವಕಪ್​ ದಾಹ ಹಾಗು 21 ವರ್ಷ ಕ್ರಿಕೆಟ್​ನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದ ಸಚಿನ್ ತೆಂಡೂಲ್ಕರ್‌ ಕನಸು ಎಲ್ಲವೂ ಈ ಸಂದರ್ಭದಲ್ಲಿ ನನಸಾಗಿತ್ತು.

1983ರಲ್ಲಿ ಕಪಿಲ್‌ದೇವ್​ ನೇತೃತ್ವದ ತಂಡ ವಿಶ್ವಕಪ್​ ಗೆದ್ದಿದ್ದು ಬಿಟ್ಟರೆ 2003ರಲ್ಲಿ ಭಾರತ ಫೈನಲ್​ ಪ್ರವೇಶಿಸಿದ ಸಾಧನೆ ಮಾಡಿತ್ತು. ಆದರೆ 5 ವಿಶ್ವಕಪ್​ ಆಡಿದ್ದ ಸಚಿನ್​ಗೆ ವಿಶ್ವಕಪ್ ಕೈಗೆಟುಕದ ದ್ರಾಕ್ಷಿಯಾಗಿತ್ತು. 2011ರ ವಿಶ್ವಕಪ್​ ಅವರಿಗೆ ಕೊನೆಯ ಅವಕಾಶವೂ ಆಗಿತ್ತು. ಅಂತೂ ಕೊನೆಗೂ ಭಾರತೀಯ ಕ್ರಿಕೆಟ್ ತಂಡ​ 'ಕ್ರಿಕೆಟ್‌ ದೇವರ' ಆಸೆ ಈಡೇರಿಸಿತ್ತು. ಗೆದ್ದು ಬೀಗಿದ ಸಂಭ್ರಮದಲ್ಲಿ ಇಡೀ ತಂಡ ಅವರನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಹೆಗಲ ಮೇಲೆ ಹೊತ್ತು ಖುಷಿ ಪಟ್ಟಿತ್ತು.

ಓಪನ್​ ನೆಟ್ಸ್ ವಿತ್​ ಮಯಾಂಕ್​ ಕಾರ್ಯಕ್ರಮದಲ್ಲಿ ಈ ಸ್ಮರಣೀಯ ಸಂದರ್ಭದ ಬಗ್ಗೆ ಕೊಹ್ಲಿಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕುತ್ತರಿಸಿದ ಕೊಹ್ಲಿ, ವಿಶ್ವಕಪ್​ ಗೆದ್ದ ಸಂದರ್ಭದಲ್ಲಿ ನಮ್ಮೆಲ್ಲರ ಚಿತ್ತ ಸಚಿನ್​ ಪಾಜಿ ಅವರತ್ತ ಇತ್ತು. ಏಕೆಂದರೆ, ಅವರಿಗೆ ಕಪ್​ ಎತ್ತಿ ಹಿಡಿಯಲು ಅದೊಂದೇ ಕೊನೆಯ ಅವಕಾಶವಾಗಿತ್ತು. ಅವರು ಭಾರತದ ಕ್ರಿಕೆಟ್​ ಅನ್ನು 21 ವರ್ಷಗಳ ಕಾಲ ಹೊತ್ತು ನಡೆದಿದ್ದರು. ಅದಕ್ಕಾಗಿ ನಾವೆಲ್ಲರೂ ಅವರನ್ನು ಹೊತ್ತುಕೊಳ್ಳುವ ಸಮಯ ಒದಗಿಬಂದಿತ್ತು ಎಂದು ವಿವರಿಸಿದರು.

ಸಚಿನ್​ ನಮಗೆ ಸಾಕಷ್ಟು ಪ್ರೇರಣೆಯಾಗಿದ್ದರು. ಭಾರತದ ಬಹುತೇಕ ಮಕ್ಕಳಿಗೆ ಅವರು ಇಂದಿಗೂ ಸ್ಫೂರ್ತಿಯ ಸೆಲೆ. ಎರಡು ದಶಕಗಳಿಗೂ ಹೆಚ್ಚು ಕಾಲ ಭಾರತ ಕ್ರೀಡಾಲೋಕಕ್ಕೆ ವಿಶಿಷ್ಠ ಕೊಡುಗೆ ನೀಡಿದ್ದಾರೆ ಎಂದು ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿನ್​ ತಂಡೂಲ್ಕರ್​ 1992 , 1996, 1999, 2003, 2007 ಹಾಗೂ 2011ರ ವಿಶ್ವಕಪ್​ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 2003ರ ವಿಶ್ವಕಪ್​ನಲ್ಲಿ ಭಾರತ ತಂಡ ಅದ್ದೂರಿ ಪ್ರದರ್ಶನದೊಂದಿಗೆ ಫೈನಲ್​ ತಲುಪಿತ್ತಾದ್ರೂ ಆಸ್ಟ್ರೇಲಿಯಾ ವಿರುದ್ಧ ಸೋಲುಕಂಡು ನಿರಾಶೆ ಅನುಭವಿಸಿತ್ತು. ಆದರೆ 2011ರಲ್ಲಿ ಅವರ ಕನಸನ್ನು ಭಾರತ ಯುವ ತಂಡ ನೆರವೇರಿಸಿತ್ತು. ಈ ಸಂಭ್ರಮದಲ್ಲಿ ವಿರಾಟ್​ ಕೊಹ್ಲಿ, ಸುರೇಶ್​ ರೈನಾ, ಯೂಸುಫ್ ಪಠಾಣ್​ ಹಾಗೂ ಹರ್ಭಜನ್​ ಸಿಂಗ್​ ಸಚಿನ್​ರನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಹೆಗಲ ಹೊತ್ತು ಮೆರವಣಿಗೆ ಮಾಡಿದ್ದರು. ಈ ವಿಶ್ವಕಪ್‌ನಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ್ದ ಸಚಿನ್​ 2 ಶತಕಗಳ ಸಹಿತ 482 ರನ್​ ಬಾರಿಸಿದ್ದರು.

ABOUT THE AUTHOR

...view details