ಕರ್ನಾಟಕ

karnataka

ETV Bharat / sports

ಅಂಗಳದಲ್ಲಿ ಕೊಹ್ಲಿ ಕೋಪತಾಪ; ಅಶಿಸ್ತು ಮರುಕಳಿಸಿದ್ರೆ ನಿಷೇಧದ ಎಚ್ಚರಿಕೆ!

2018 ಜನವರಿಯಿಂದ 3 ಡಿಮೆರಿಟ್​ ಪಾಯಿಂಟ್​ ಪಡೆದಿರುವ ವಿರಾಟ್​ ಕೊಹ್ಲಿ ಮುಂದಿನ ಮೂರು ತಿಂಗಳಲ್ಲಿ ಐಸಿಸಿ ನಿಯಮ ಮೀರಿದ್ರೆ ಕ್ರಿಕೆಟ್​ನಿಂದ ನಿಷೇಧಕ್ಕೊಳಗಾಗುವ ಅಪಾಯ ಎದುರಿಸುತ್ತಿದ್ದಾರೆ.

Kohli

By

Published : Sep 24, 2019, 8:42 AM IST

ಬೆಂಗಳೂರು:ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿಗೆ ಕೋಪ ಹೆಚ್ಚು ಎಂಬುದು ಕ್ರಿಕೆಟ್​ ಜಗತ್ತಿಗೆ ಗೊತ್ತಿರುವ ವಿಚಾರ. ಆದರೆ ಅದೇ ಕೋಪ ಮತ್ತೆ ಮುಂದುವರಿದರೆ ಕ್ರಿಕೆಟ್​ನಿಂದ ಅವರು ನಿಷೇಧಕ್ಕೊಳಗಾಗುವ ಸಾಧ್ಯತೆಯಿದೆ.

ಮೈದಾನದಲ್ಲಿ ಭಾವೋದ್ವೇಗಕ್ಕೊಳಗಾಗುವ ಕೊಹ್ಲಿ ಕೋಪವನ್ನು ನಿಯಂತ್ರಣ​ ಮಾಡಿಕೊಳ್ಳುವುದಿಲ್ಲ. ಬದಲಾಗಿ ಕೋಪಕ್ಕೆ ಕಾರಣವಾದವರ ಮೇಲೆ ರೇಗಾಡುತ್ತಾರೆ. ಈ ಬೆಳವಣಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟಿ-20 ಪಂದ್ಯದ ವೇಳೆಯೂ ನಡೆಯಿತು.

ಬೆಂಗಳೂರಿನಲ್ಲಿ ನಡೆದ ಟಿ-20 ಪಂದ್ಯದಲ್ಲಿ ಎದುರಾಳಿ ತಂಡದ ಬ್ಯೂರಾನ್​ ಹೆಂಡ್ರಿಕ್ಸ್​, 5 ನೇ ಓವರ್​ ಬೌಲಿಂಗ್​ ಮಾಡುತ್ತಿದ್ದರು. ಈ ಸಂದರ್ಭ ಕೊಹ್ಲಿ ರನ್‌ಗಾಗಿ ಓಡುತ್ತಿರುವಾಗ ಹೆಂಡ್ರಿಕ್ಸ್​ ಭುಜಕ್ಕೆ ತಾಗಿಸಿದ್ದಾರೆ. ಹೀಗಾಗಿ ಐಸಿಸಿಯ 2.12 ನಿಯಮ ಉಲ್ಲಂಘಿಸಿದ ಕೊಹ್ಲಿ ಎಚ್ಚರಿಕೆಯ ಜೊತೆಗೆ ಒಂದು ಋಣಾತ್ಮಕ ಅಂಕ ಪಡೆದಿದ್ದಾರೆ.

ಆಟದ ಸಮಯದಲ್ಲಿ ಆಟಗಾರರಿಗಾಗಲಿ, ಬೆಂಬಲ ಸಿಬ್ಬಂದಿ, ಮ್ಯಾಚ್​ ರೆಫ್ರಿ ಅಥವಾ ಅಂಪೈರ್​ಗಳ ವಿರುದ್ಧ ಅನುಚಿತ ವರ್ತನೆ ತೋರಿದರೆ ಐಸಿಸಿ ಕಠಿಣ ಕ್ರಮ ತೆಗೆದುಕೊಳ್ಳುತ್ತೆ. ಆಟಗಾರರಿಗೆ ಒಂದು ಋಣಾತ್ಮಕ ಅಂಕದ ಜೊತೆಗೆ ದಂಡವನ್ನೂ ವಿಧಿಸುತ್ತದೆ.

ಒಂದ್ವೇಳೆ ಇದೇ ರೀತಿ 24 ತಿಂಗಳಲ್ಲಿ ಒಬ್ಬ ಆಟಗಾರ 4 ಅಥವಾ ಅದಕ್ಕಿಂತ ಹೆಚ್ಚು ಬಾರಿ ಋಣಾತ್ಮಕ ಅಂಕ ಪಡೆದರೆ ಅವರನ್ನು ಕ್ರಿಕೆಟ್‌ ಅಂಗಳಕ್ಕಿಳಿಯದಂತೆ ನಿಷೇಧಿಸುವ ಸಾಧ್ಯತೆಯಿದೆ. ಕೊಹ್ಲಿ ಈಗಾಗಲೇ 2018 ಜನವರಿಯಿಂದ 3 ಬಾರಿ ಐಸಿಸಿಯಿಂದ ಎಚ್ಚರಿಕೆ ಜೊತೆಗೆ ಋಣಾತ್ಮಕ ಅಂಕ ಪಡೆದಿದ್ದಾರೆ. ಕೊಹ್ಲಿ ವರ್ತನೆ ಮರುಕಳಿಸಿದ್ರೆ ಅವರು ತಮ್ಮ ಕ್ರಿಕೆಟ್ ಭವಿಷ್ಯವನ್ನು ತಮ್ಮ ಕೈಯ್ಯಾರೆ ತಾವೇ ಅಂತ್ಯಗೊಳಿಸಿಕೊಳ್ಳಲಿದ್ದಾರೆ ಎನ್ನು ಆತಂಕ ಕ್ರಿಕೆಟ್ ಅಭಿಮಾನಿಗಳದ್ದು.

ABOUT THE AUTHOR

...view details