ನವದೆಹಲಿ:ಕಾಶ್ಮೀರಕಣಿವೆಯಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿರುವ ಭಾರತೀಯ ಯೋಧರಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.
ಯಾವುದೇ ಸಂದರ್ಭದಲ್ಲೂ ಕರ್ತವ್ಯ ಮರೆಯದವರು ನಿಜವಾದ ಹೀರೋಗಳು. ಅವರ ತ್ಯಾಗ ಮರೆಯಲು ಅಸಾಧ್ಯ. ಹಂದ್ವಾರ ಗುಂಡಿನ ಕಾಳಗದಲ್ಲಿ ಪ್ರಾಣ ಕಳೆದುಕೊಂಡ ಯೋಧರು ಮತ್ತು ಪೊಲೀಸರಿಗೆ ನಾನು ತಲೆ ಬಾಗುತ್ತೇನೆ. ವೀರಯೋಧರ ಕುಟುಂಬಕ್ಕೆ ಸಾವಿನ ಶಕ್ತಿಯನ್ನು ಭರಿಸುವ ಧೈರ್ಯ ದೇವರು ನೀಡಲಿ. ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.