ಕರ್ನಾಟಕ

karnataka

ಐಸಿಸಿ ವರ್ಷದ ಏಕದಿನ - ಟೆಸ್ಟ್​ ತಂಡಕ್ಕೆ ಕೊಹ್ಲಿ ಕ್ಯಾಪ್ಟನ್​... ರೋಹಿತ್​ ಶರ್ಮಾ ಒಂಡೇ ಹೀರೋ

By

Published : Jan 15, 2020, 1:14 PM IST

ಐಸಿಸಿ ಬುಧವಾರ ವಾರ್ಷಿಕ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತದ ರೋಹಿತ್​ ಶರ್ಮಾ ವರ್ಷದ ಏಕದಿನ ಬ್ಯಾಟ್ಸ್​ಮನ್​, ಇಂಗ್ಲೆಂಡ್​ನ ಬೆನ್​ಸ್ಟೋಕ್ಸ್​ ವರ್ಷದ ಕ್ರಿಕೆಟಿಗ, ಪ್ಯಾಟ್​ ಕಮ್ಮಿನ್ಸ್​ ವರ್ಷದ ಟೆಸ್ಟ್​ ಬೌಲರ್​ ಪ್ರಶಸ್ತಿಯನ್ನು ಪಡೆದಿದ್ದಾರೆ.

ICC Awards
ICC Awards

ಮುಂಬೈ:ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಐಸಿಸಿ ಟೆಸ್ಟ್​ ತಂಡದ ನಾಯಕನಾಗಿ, ವಿಶ್ವಕಪ್​ನಲ್ಲಿ ರನ್​ ಹೊಳೆ ಹರಿಸಿದ ರೋಹಿತ್​ ಶರ್ಮಾ ವರ್ಷದ ಏಕದಿನ ಕ್ರಿಕೆಟಿಗನಾಗಿ ಆಯ್ಕೆಯಾಗಿದ್ದಾರೆ.

ಐಸಿಸಿ ಬುಧವಾರ ವಾರ್ಷಿಕ ಪ್ರಶಸ್ತಿ ವಿಜೇತರ ಹೆಸರನ್ನು ಬಿಡುಗಡೆಗೊಳಿಸಿದ್ದು ಭಾರತದ ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್​ಶರ್ಮಾ 2019ರ ಐಸಿಸಿ ಏಕದಿನ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಹಿಟ್​ಮ್ಯಾನ್​ 2019ರಲ್ಲಿ ವಿಶ್ವಕಪ್​ ಸೇರಿದಂತೆ 7 ಏಕದಿನ ಶತಕ ಸಿಡಿಸಿದ್ದರು. ಅಲ್ಲದೇ ವರ್ಷದಲ್ಲಿ ಅತಿ ಹೆಚ್ಚು ರನ್​ಸಿಡಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದರು.

ರನ್​ ಮಷಿನ್​ ವಿರಾಟ್ ಟೆಸ್ಟ್​ ಕೊಹ್ಲಿ ಐಸಿಸಿ ವರ್ಷದ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಟೆಸ್ಟ್​ ಹಾಗೂ ಏಕದಿನ ಕ್ರಿಕೆಟ್​ನ ಐಸಿಸಿ ಶ್ರೇಯಾಂಕದಲ್ಲಿ ನಂಬರ್​ ಒನ್​ ಆಗಿರುವ ಕೊಹ್ಲಿ ಎರಡು ತಂಡದ ಕ್ಯಾಪ್ಟನ್​ ಪಟ್ಟ ಪಡೆದಿರುವುದು ವಿಶೇಷವಾಗಿದೆ. ಅಲ್ಲದೇ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನುಗ್ಗುತ್ತಿರುವುದೇ ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

ಮಾರ್ನಸ್​ ಲಾಬುಶೇನ್​

ಐಸಿಸಿ ಟೆಸ್ಟ್​ ತಂಡದಲ್ಲಿ ಕೊಹ್ಲಿ ಜೊತೆಗೆ ಕನ್ನಡಿಗ ಮಯಾಂಕ್​ ಅಗರ್​ವಾಲ್​ ಅವಕಾಶ ಪಡೆದಿದ್ದಾರೆ. ರೋಹಿತ್​ ಶರ್ಮಾ, 2019ರಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್​ ಪಡೆದಿರುವ ಮೊಹಮ್ಮದ್​ ಶಮಿ ಹಾಗೂ ಸ್ಪಿನ್ನರ್​ ಕುಲ್ದೀಪ್​ ಯಾದವ್​ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಬೆನ್​ಸ್ಟೋಕ್ಸ್​

2019ರಲ್ಲಿ ಅತಿ ಹೆಚ್ಚು ಟೆಸ್ಟ್​ ರನ್​ ಬಾರಿಸಿರುವ ಮಾರ್ನಸ್​ ಲಾಬುಶೇನ್​ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿ, 2019ರ ಟೆಸ್ಟ್​ ಆವೃತ್ತಿಯಲ್ಲಿ 59 ವಿಕೆಟ್​ ಪಡೆದಿರುವ ಆಸ್ಟ್ರೇಲಿಯಾದ ಪ್ಯಾಟ್​ ಕಮ್ಮಿನ್ಸ್​ 2019ರ ಟೆಸ್ಟ್​ ಬೌಲರ್​ , ಇಂಗ್ಲೆಂಡ್​ ತಂಡಕ್ಕೆ ವಿಶ್ವಕಪ್​ ತಂದುಕೊಟ್ಟ ಇಂಗ್ಲೆಂಡ್​ನ ಆಲ್​ರೌಂಡರ್​ ಬೆನ್​ಸ್ಟೋಕ್ಸ್​ಗೆ ಐಸಿಸಿ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಗ್ಯಾರಿ ಸೋಬರ್ಸ್ ಅವಾರ್ಡ್​ ಪಡೆದಿದ್ದಾರೆ. ವರ್ಷದಲ್ಲಿ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕ್ರಿಕೆಟಿಗನಿಗೆ ನೀಡಲಾಗುತ್ತದೆ. ಬೆನ್​ಸ್ಟೋಕ್ಸ್​ ಅವರು ಆಸ್ಟ್ರೇಲಿಯಾ ವಿರುದ್ಧ ಏಕಾಂಗಿ ಹೋರಾಟ ನಡೆಸಿ ಗೆಲ್ಲಿಸಿಕೊಟ್ಟ ಪಂದ್ಯ ಕ್ರಿಕೆಟ್​ನ ಅತ್ಯುತ್ತಮ ಇನ್ನಿಂಗ್ಸ್​ ಎಂಬ ಖ್ಯಾತಿ ಪಡೆದಿತ್ತು. ​

ABOUT THE AUTHOR

...view details