ಕರ್ನಾಟಕ

karnataka

ETV Bharat / sports

ಈ ದಶಕದಲ್ಲಿ ಕೊಹ್ಲಿ ಅತ್ಯಂತ ಪ್ರಭಾವಶಾಲಿ ಆಟಗಾರ: ಗವಾಸ್ಕರ್

ಈ ದಶಕದಲ್ಲಿ ಟೀಂ ಇಂಡಿಯಾ ಗೆದ್ದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಪ್ರಭಾವ ಬೀರಿದ ಆಟಗಾರನಾಗಿದ್ದಾರೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್ ಹೇಳಿದ್ದಾರೆ.

Virat Kohli
ವಿರಾಟ್ ಕೊಹ್ಲಿ

By

Published : Dec 10, 2020, 3:10 PM IST

ಹೈದರಾಬಾದ್: ಈ ದಶಕದಲ್ಲಿ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಭಾರತ ಪರ ಹೆಚ್ಚು ಪ್ರಭಾವಶಾಲಿ ಆಟಗಾರ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2008 ರಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ ಕೊಹ್ಲಿ ಇದುವರೆಗೆ ಟೀಂ ಇಂಡಿಯಾ ಪರ 251 ಏಕದಿನ ಪಂದ್ಯಗಳನ್ನು ಆಡಿದ್ದು, 43 ಶತಕಗಳ ನೆರವಿನಿಂದ 12,040 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ

"ನೀವು ಒಬ್ಬ ವ್ಯಕ್ತಿಯಂತೆ ನೋಡಿದ್ರೆ, ವಿರಾಟ್ ಕೊಹ್ಲಿ ಖಂಡಿತವಾಗಿಯೂ ಅತ್ಯಂತ ಪ್ರಭಾವಿಶಾಲಿ ಆಟಗಾರನಾಗಿದ್ದಾರೆ ಎಂದು ಭಾವಿಸುತ್ತೇನೆ. ಏಕೆಂದರೆ ಭಾರತವು ದೊಡ್ಡ ಸ್ಕೋರ್‌ಗಳನ್ನು ಬೆನ್ನಟ್ಟುತ್ತಿರುವಾಗ ಭಾರತಕ್ಕಾಗಿ ಅವರು ಗೆದ್ದ ಪಂದ್ಯಗಳ ಸಂಖ್ಯೆ ಹೆಚ್ಚಿದೆ" ಎಂದು ಗವಾಸ್ಕರ್ ಹೇಳಿದ್ದಾರೆ.

"ಒಬ್ಬ ಆಟಗಾರನು ಗಳಿಸಿದ ರನ್ ಅಥವಾ ವಿಕೆಟ್ ಮಾತ್ರವಲ್ಲ, ಆತನು ಬೀರಿದ ಪರಿಣಾಮವನ್ನು ನಾನು ನೋಡುತ್ತೇನೆ. ಹೀಗಾಗಿ ಈ ದಶಕದಲ್ಲಿ ಟೀಂ ಇಂಡಿಯಾ ಗೆದ್ದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಪ್ರಭಾವ ಬೀರಿದ ಆಟಗಾರನಾಗಿದ್ದಾರೆ" ಅಂತ ಗವಾಸ್ಕರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಓದಿ:ಟಿ20 ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಐಸಿಸಿ ಕೊಡಮಾಡುವ ಪ್ರತಿಷ್ಠಿತ ಪುರುಷರ ಪ್ಲೇಯರ್ ಆಫ್ ದಿ ಡಿಕೇಡ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಕೊಹ್ಲಿ ಮತ್ತು ಅಶ್ವಿನ್ ಸೇರಿದಂತೆ ಒಟ್ಟು ಏಳು ಆಟಗಾರರು ಪುರುಷರ ಪ್ಲೇಯರ್ ಆಫ್ ದಿ ಡಿಕೇಡ್ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜೋ ರೂಟ್ (ಇಂಗ್ಲೆಂಡ್), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಎಬಿ ಡಿವಿಲಿಯರ್ಸ್ (ದಕ್ಷಿಣ ಆಫ್ರಿಕಾ) ಮತ್ತು ಕುಮಾರ್ ಸಂಗಕ್ಕಾರ (ಶ್ರೀಲಂಕಾ) ಕೂಡ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಇದರೊಂದಿಗೆ ಕೊಹ್ಲಿ ಪುರುಷರ ಟೆಸ್ಟ್ ಪ್ಲೇಯರ್ ಆಫ್ ದಿ ಡಿಕೇಡ್ ಪ್ರಶಸ್ತಿ, ಪುರುಷರ ಏಕದಿನ ಪ್ಲೇಯರ್ ಆಫ್ ದಿ ಡಿಕೇಡ್ ಪ್ರಶಸ್ತಿ, ಪುರುಷರ ಟಿ20 ಪ್ಲೇಯರ್ ಆಫ್ ದಿ ಡಿಕೇಡ್ ಪ್ರಶಸ್ತಿ ಮತ್ತು ದಶಕದ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ABOUT THE AUTHOR

...view details