ಬೆಂಗಳೂರು: ಭಾರತ ತಂಡದ ವಿರುದ್ಧ ಸ್ಟಿವ್ ಸ್ಮಿತ್ ಕಳೆದ ಎರಡು ಪಂದ್ಯಗಳಲ್ಲೂ ಶತಕ ಸಿಡಿಸಿದ್ದರು. ಇದಕ್ಕೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಸ್ಮಿತ್ ಬ್ಯಾಟಿಂಗ್ ಪ್ರದರ್ಶನದಲ್ಲಿ ಕೊಹ್ಲಿ ಸರಿಸಮ ಎನಿಸಿಕೊಳ್ಳಲು ಹೆಚ್ಚೇನು ದೂರವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಗಂಭೀರ್ ಹೇಳಿಕೆಗೆ ಭಾರತದ ಮಾಜಿ ಆಟಗಾರ ದೊಡ್ಡ ಗಣೇಶ್ ತಿರುಗೇಟು ನೀಡಿದ್ದಾರೆ.
ಕೊಹ್ಲಿ ಸನಿಹ ಬರಲು ಸ್ಮಿತ್ ಇನ್ನೂ 5 ವರ್ಷ ಇದೇ ರೀತಿ ಆಡಬೇಕು: ಗಂಭೀರ್ಗೆ ಕನ್ನಡಿಗನ ತಿರುಗೇಟು - Dodda Ganesh
ಸ್ಟಿವ್ ಸ್ಮಿತ್ ಮೊದಲ ಪಂದ್ಯದಲ್ಲಿ 105 ಎರಡನೇ ಪಂದ್ಯದಲ್ಲಿ 104 ರನ್ಗಳಿಸಿದ್ದರು. ಎರಡೂ ಪಂದ್ಯಗಳಲ್ಲಿ 62 ಎಸೆತಗಳಲ್ಲೇ ಶತಕ ಸಿಡಿಸಿದ್ದರು. ಈ ಪ್ರದರ್ಶನ ನೋಡಿದ ನಂತರ ಕೆಲವು ಮಾಜಿ ಕ್ರಿಕೆಟಿಗರು ಸ್ಮಿತ್ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಹೊಗಳಿದ್ದರು. ಗಂಭೀರ್ ಕೂಡ ಸೀಮಿತ ಓವರ್ಗಳಲ್ಲಿ ಸ್ಮಿತ್ ಕೊಹ್ಲಿಗಿಂತ ಹೆಚ್ಚೇನು ದೂರವಿಲ್ಲ ಎಂದು ಹೇಳಿದ್ದರು.

ಇದೀಗ ಗೌತಮ್ ಗಂಭೀರ್ ಹೇಳಿಕೆಗೆ ಭಾರತದ ಮಾಜಿ ಬೌಲರ್ ಹಾಗೂ ಕನ್ನಡಿಗ ದೊಡ್ಡ ಗಣೇಶ್ ತಿರುಗೇಟು ನೀಡಿದ್ದು, " ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಪ್ರಸ್ತುರ ಇರುವವಲ್ಲಿಗೆ ಸ್ಟಿವ್ ಸ್ಮಿತ್ ತಲುಪಬೇಕಾದರೆ ಇದೇ ರೀತಿಯ ಪ್ರದರ್ಶನವನ್ನು ಅವರು ಮುಂದಿನ 5 ವರ್ಷಗಳ ಕಾಲ ಆಡಬೇಕಾಗುತ್ತದೆ. ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಎಂದೆಂದಿಗೂ ಬೆಸ್ಟ್ ಬ್ಯಾಟ್ಸ್‌ಮನ್ " ಎಂದು ಗಣೇಶ್ ಇಎಸ್ಪಿನ್ ಗಂಭೀರ್ ಹೇಳಿಕೆ ಟ್ವೀಟ್ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.