ಕರ್ನಾಟಕ

karnataka

ETV Bharat / sports

ವಿರಾಟ್ ಕೊಹ್ಲಿ ಅಸಾಧಾರಣ ಆಟಗಾರ, ಇನ್ನಷ್ಟು ದಾಖಲೆ ಬ್ರೇಕ್ ಮಾಡಬೇಕು: ಸ್ಟೀವ್ ಸ್ಮಿತ್ - ಕೊಹ್ಲಿ ಬಗ್ಗೆ ಸ್ಮಿತ್ ಹೇಳಿಕೆ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗಾಗಲೇ ಸಾಕಷ್ಟು ದಾಖಲೆಗಳನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದಾಖಲೆಗಳನ್ನು ಬ್ರೇಕ್ ಮಾಡಲಿದ್ದಾರೆ ಎಂದು ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಹೇಳಿದ್ದಾರೆ.

Kohli is an incredible player,ಕೊಹ್ಲಿ ಬಗ್ಗೆ ಸ್ಮಿತ್ ಹೇಳಿಕೆ
ಕೊಹ್ಲಿ ಬಗ್ಗೆ ಸ್ಮಿತ್ ಹೇಳಿಕೆ

By

Published : Jan 23, 2020, 9:56 AM IST

ಹೈದರಾಬಾದ್:ಕ್ರಿಕೆಟ್​ನ ಮೂರು ವಿಧಾನಗಳಲ್ಲೂ ವಿರಾಟ್ ಕೊಹ್ಲಿ ಒಬ್ಬ ಅಸಾಧಾರಣ ಆಟಗಾರ. ಅವರು ಮತ್ತಷ್ಟು ದಾಖಲೆಗಳನ್ನು ಬ್ರೇಕ್ ಮಾಡಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಗಳಿಸಿರುವ ರನ್​ಗಳೇ ಅವರೇನು ಎಂಬುದನ್ನು ಹೇಳುತ್ತವೆ. ಅವರಿಗೆ ರನ್​ಗಳಿಸುವ ಹಸಿವಿದೆ. ಅದಕ್ಕಾಗಿಯೇ ಅವರು ಹುಡುಕಾಡುತ್ತಾರೆ. ಆದರೆ ಆಸ್ಟ್ರೇಲಿಯಾ ವಿರುದ್ಧ ಮಾತ್ರ ರನ್​ ಗಳಿಸಬಾರದು ಎಂದು ತಮಾಷೆ ಮಾಡಿದರು.

ನಾಯಕನಾಗಿ ಉತ್ತಮವಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ವಿರಾಟ್, ಟೀಂ ಇಂಡಿಯಾವನ್ನು ಟೆಸ್ಟ್​ನಲ್ಲಿ ಅಗ್ರ ಶ್ರೇಯಾಂಕಕ್ಕೆ ಕೊಂಡೊಯ್ದಿದ್ದಾರೆ. ಫಿಟ್ನೆಸ್​ ಮತ್ತು ಆರೋಗ್ಯದ ವಿಚಾರದಲ್ಲಿಯೂ ಅವರು ಯಾವಾಗಲೂ ಜಾಗರೂಕರಾಗಿರುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

2020ರ ಟಿ-20 ವಿಶ್ವಕಪ್​ ಟೂರ್ನಿ ಕುರಿತು ಸ್ಮಿತ್ ಮಾತನಾಡಿದ್ದು, ತವರಿನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿರುವುದಾಗಿ ತಿಳಿಸಿದರು.

ಕಳೆದ ಕೆಲ ವರ್ಷಗಳಿಂದ ಚುಟುಕು ಕ್ರಿಕೆಟ್​ನಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ತೋರದ ಆಸೀಸ್ ಆಟಗಾರ, ವಿಶ್ವಕಪ್ ಟೂರ್ನಿಗಾಗಿ ಸಿದ್ಧತೆ ನಡೆಸುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details