ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ನಾಯಕ 'ವಿರಾಟ್ ಕೊಹ್ಲಿ ಒಬ್ಬರೇ ಹನ್ನೊಂದು 11 ಆಟಗಾರರಿಗೆ ಸಮ' ಎಂದು ಪಾಕಿಸ್ತಾನ ಮಾಜಿ ಆಟಗಾರ, ಸ್ಪಿನ್ ದಿಗ್ಗಜ ಸಕ್ಲೇನ್ ಮುಷ್ತಾಕ್ ಅವರು ಇಂಗ್ಲೆಂಡ್ನ ಸ್ಪಿನ್ ಜೋಡಿಯಾದ ಆದಿಲ್ ರಶೀದ್ ಹಾಗೂ ಮೋಯಿನ್ ಅಲಿಗೆ ಹೇಳಿದ್ದರಂತೆ...
ಕಳೆದ ವರ್ಷ ನಡೆದ ವಿಶ್ವಕಪ್ನವರೆಗೆ ಮುಷ್ತಾಕ್ ಇಂಗ್ಲೆಂಡ್ ಟೀಂನ ಸ್ಪಿನ್ ಸಲಹೆಗಾರನಾಗಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಕೊಹ್ಲಿ ಬ್ಯಾಟಿಂಗ್ ಸಾಮರ್ಥ್ಯ ಹಾಗೂ ವಿಕೆಟ್ ಪಡೆಯುವ ಬಗ್ಗೆ ಆಂಗ್ಲ ಸ್ಪಿನ್ನರ್ಗಳಿಗೆ ಅಗತ್ಯ ನೀಡಿದ್ದರು. ಇದುವರೆಗೆ ಮೊಯೀನ್ ಮತ್ತು ರಶೀದ್ ಕೊಹ್ಲಿಯನ್ನು ತಲಾ ಆರು ಬಾರಿ ಔಟ್ ಮಾಡಿದ್ದಾರೆ.
ಖ್ಯಾತ ಕ್ರೀಡಾ ವಿಶ್ಲೇಷಕ ನಿಖಿಲ್ ನಾಜ್ ಜೊತೆಗಿನ ಇನ್ಸ್ಟಾಗ್ರಾಂ ಲೈವ್ನಲ್ಲಿ ಮುಷ್ತಾಕ್, ಕೊಹ್ಲಿ ಬಗ್ಗೆ ತಾವು ಸಲಹೆ ನೀಡಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಓರ್ವ ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ಗೆ ಬೌಲಿಂಗ್ ಮಾಡುವಾಗ ಬೌಲರ್ ಮನಸ್ಸಿನಲ್ಲಿ ಸ್ಪಷ್ಟತೆ ಇರಬೇಕು. ಅಂತಹ ಬ್ಯಾಟ್ಸ್ಮನ್ಗೆ ಯಾರೇ ಬೌಲಿಂಗ್ ಮಾಡಿದರೂ ಸಮರ್ಥವಾಗಿ ಎದುರಿಸಬಲ್ಲ. ಎದುರಾಳಿ ಬೌಲರ್ ಎಡಗೈ ಸ್ಪಿನ್ನರ್, ಲೆಗ್ ಅಥವಾ ಆಫ್ ಸ್ಪಿನ್ನರ್ ಎಂಬ ಯಾವುದೇ ಬದಲಾವಣೆ ಆತನಿಗೆ ಅನಿಸೋದಿಲ್ಲ ಎಂಬುದು ಮುಷ್ತಾಕ್ ಮಾತು.