ಕರ್ನಾಟಕ

karnataka

ETV Bharat / sports

ಲಾರಾ ಘೋಷಿಸಿದ ಈ ಯುಗದ ಶ್ರೇಷ್ಠ ಬ್ಯಾಟ್ಸ್​ಮನ್​-ಬೌಲರ್​ಗಳ​​​ ಪಟ್ಟಿಯಲ್ಲಿ ಕೊಹ್ಲಿ-ಬುಮ್ರಾ! - ಜಸ್ಪ್ರೀತ್ ಬುಮ್ರಾ

ವಿರಾಟ್​ ಕೊಹ್ಲಿ, ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್​, ಇಂಗ್ಲೆಂಡ್ ತಂಡದ ಜೋ ರೂಟ್​, ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್​ ಹಾಗೂ ಆಸ್ಟ್ರೇಲಿಯಾದ ಸ್ಟಿವ್​ ಸ್ಮಿತ್​ ಅವರನ್ನು ಈ ಯುಗದ ಶ್ರೇಷ್ಠ ಬ್ಯಾಟ್ಸ್​ಮನ್​ಗಳು ಎಂದು ವೆಸ್ಟ್​ ಇಂಡೀಸ್​ ತಂಡದ ಮಾಜಿ ನಾಯಕ ಬ್ರಿಯಾನ್ ಲಾರಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ಕೊಹ್ಲಿ- ಬುಮ್ರಾ
ಕೊಹ್ಲಿ- ಬುಮ್ರಾ

By

Published : Dec 5, 2020, 7:19 PM IST

ನವದೆಹಲಿ: ಭಾರತ ತಂಡದ ವಿರಾಟ್​ ಕೊಹ್ಲಿ-ಜಸ್ಪ್ರೀತ್​ ಬುಮ್ರಾ ವೆಸ್ಟ್​ ಇಂಡೀಸ್ ಕ್ರಿಕೆಟ್​​ ಲೆಜೆಂಡ್ ಬ್ರಿಯಾನ್ ಲಾರಾ​ ಘೋಷಿಸಿದ ಈ ಯುಗದ ಟಾಪ್ 5 ಶ್ರೇಷ್ಠ ಬ್ಯಾಟ್ಸ್​ಮನ್​-ಬೌಲರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ವಿರಾಟ್​ ಕೊಹ್ಲಿ, ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್​, ಇಂಗ್ಲೆಂಡ್ ತಂಡದ ಜೋ ರೂಟ್​, ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್​ ಹಾಗೂ ಆಸ್ಟ್ರೇಲಿಯಾದ ಸ್ಟಿವ್​ ಸ್ಮಿತ್​ ಅವರನ್ನು ಈ ಯುಗದ ಶ್ರೇಷ್ಠ ಬ್ಯಾಟ್ಸ್​ಮನ್​ಗಳು ಎಂದು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಲಾರಾ ಹೇಳಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್​

ಇನ್ನು ಬೌಲರ್​ಗಳ ಲಿಸ್ಟ್​ನಲ್ಲಿ ಜಸ್ಪ್ರೀತ್ ಬುಮ್ರಾ ಜೊತೆಗೆ ಇಂಗ್ಲೆಂಡ್​ನ ಜೋಫ್ರಾ ಆರ್ಚರ್​, ಜೇಮ್ಸ್​ ಆ್ಯಂಡರ್ಸನ್​, ದಕ್ಷಿಣ ಆಫ್ರಿಕಾದ ಕಗಿಸೋ ರಬಾಡ ಮತ್ತು ಅಫ್ಘಾನಿಸ್ತಾನದ ಸ್ಪಿನ್ನರ್​ ರಶೀದ್​ ಖಾನ್ ಪ್ರಸ್ತುತ​ ಟಾಪ್​ 5 ಬೌಲರ್ಸ್ ಎಂದು ತಿಳಿಸಿದ್ದಾರೆ. ಆದರೆ ಈ ಪಟ್ಟಿಗೆ ಯಾವುದೇ ಶ್ರೇಯಾಂಕ ನೀಡಿಲ್ಲ.

ಲಾರಾ ಇದರ ಜೊತೆಗೆ ತಮ್ಮ ಕಾಲದಲ್ಲಿ ವಿರುದ್ಧ ಆಡಿರುವ ಟಾಪ್ 5 ​ ಬ್ಯಾಟ್ಸ್​ಮನ್​ ಮತ್ತು ಬೌಲರ್​ಗಳನ್ನು ಹೆಸರಿಸಿದ್ದಾರೆ. ಇದರಲ್ಲಿ ಸಚಿನ್ ತೆಂಡೂಲ್ಕರ್​, ರಿಕಿ ಪಾಂಟಿಂಗ್, ಜಾಕ್​ ಕಾಲೀಸ್​, ಕುಮಾರ್ ಸಂಗಾಕ್ಕರ, ರಾಹುಲ್​ ದ್ರಾವಿಡ್​ ಹಾಗೂ ಬೌಲರ್​ಗಳ ವಿಭಾಗದಲ್ಲಿ ವಾಸೀಂ ಅಕ್ರಮ್, ಶೇನ್ ವಾರ್ನ್​, ವಾಕರ್ ಯೂನಿಸ್​, ಮುತ್ತಯ್ಯ ಮುರಳಿಧರನ್​ ಹಾಗೂ ಗ್ಲೇನ್​ ಮೆಕ್​ಗ್ರಾತ್​ ತಾವೆದುರಿಸಿದ ಉತ್ತಮ ಬೌಲರ್​ಗಳೆಂದು ತಿಳಿಸಿದ್ದಾರೆ.

ಲಾರಾ ಇದೇ ಸಂದರ್ಭದಲ್ಲಿ ವೆಸ್ಟ್​ ಇಂಡೀಸ್​ ತಂಡದ ಸಾರ್ವಕಾಲಿಕ 5 ಆಟಗಾರರನ್ನು ಹೆಸರಿಸಿದ್ದು, ಅದರಲ್ಲಿ ಜಾರ್ಜ್​ ಹೆಡ್ಲಿ, ಎವೆರ್​ಟನ್ ವೀಕ್ಸ್​, ಗ್ಯಾರಿ ಸೋಬರ್ಸ್​​, ವಿವಿಯನ್ ರಿಚರ್ಡ್ಸ್​ ಹಾಗೂ ಮಾಲ್ಕಮ್​ ಮಾರ್ಷಲ್​ ಇದ್ದಾರೆ.

ಕರ್ಟ್ನಿ ವಾಲ್ಸ್​, ಕರ್ಟ್ಲೀ ಆ್ಯಂಬ್ರೋಸ್, ಶಿವನರಾಯಣ್ ಚಂದ್ರಪಾಲ್, ಕಾರ್ಲ್​ ಹೂಪರ್ ಹಾಗೂ ಕ್ರಿಸ್ ಗೇಲ್​ ತಮ್ಮ ಕಾಲದ ವಿಂಡೀಸ್​ನ ಶ್ರೇಷ್ಠ ಆಟಗಾರರೆಂದು ಹೇಳಿದ್ದಾರೆ.

ಇದನ್ನೂ ಓದಿ: ರವೀಂದ್ರ ಜಡೇಜಾಗೆ ಚಹಾಲ್​ ಸರಿಸಮನಾದ ಆಟಗಾರನೇ?: ಆಸೀಸ್​ ತಂಡದ ಹೆನ್ರಿಕ್ಸ್ ಪ್ರಶ್ನೆ​

ABOUT THE AUTHOR

...view details