ಕರ್ನಾಟಕ

karnataka

ETV Bharat / sports

ಐಸಿಸಿಯ 'ಸ್ಪಿರಿಟ್ ಆಫ್ ಕ್ರಿಕೆಟ್' ಪ್ರಶಸ್ತಿ ಪಡೆದ ವಿ​ರಾಟ್​ ಕೊಹ್ಲಿ

ವಿಶ್ವಕಪ್​ ವೇಳೆ ಆಸ್ಟ್ರೇಲಿಯಾ ತಂಡದ ಸ್ಟಿವ್​ ಸ್ಮಿತ್​ ಅವರನ್ನು ಚೀಟರ್​ ಎಂದು ಹೀಯಾಳಿಸುವುದನ್ನು ನಿಲ್ಲಿಸಿದ್ದ ಕೊಹ್ಲಿ, ನಮ್ಮನ್ನು ಚಪ್ಪಾಳೆ ಮೂಲಕ ಹುರಿದುಂಬಿಸಿ ಎಂದು ಕೈಸನ್ನೆ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಈ ಕ್ಷಣವನ್ನು ನೆನೆಪಿಸಿರುವ ಐಸಿಸಿ ಕೊಹ್ಲಿಗೆ ಐಸಿಸಿ ವರ್ಷದ ಕ್ರೀಡಾಸ್ಫೂರ್ತಿ(ಸ್ಪಿರಿಟ್​ ಆಫ್​ ಕ್ರಿಕೆಟ್​) ಮೆರೆದ ಕ್ರಿಕೆಟರ್​ ಪ್ರಶಸ್ತಿಗೆ ಆಯ್ಕೆ ಮಾಡಿದೆ.

2019 Spirit of Cricket Award
2019 Spirit of Cricket Award

By

Published : Jan 15, 2020, 2:42 PM IST

ಮುಂಬೈ:ವಿಶ್ವಕಪ್​ ವೇಳೆ ಆಸ್ಟ್ರೇಲಿಯಾ ತಂಡದ ಸ್ಟಿವ್​ ಸ್ಮಿತ್​ ಅವರನ್ನು ಚೀಟರ್​ ಎಂದು ಹೀಯಾಳಿಸುವುದನ್ನು ನಿಲ್ಲಿಸಿ, ನಮ್ಮನ್ನು ಚೆಪ್ಪಾಳೆ ಮೂಲಕ ಹುರಿದುಂಬಿಸಿ ಎಂದು ಕೈಸನ್ನೆ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಈ ಕ್ಷಣವನ್ನು ನೆನೆಪಿಸಿರುವ ಐಸಿಸಿ ಕೊಹ್ಲಿಗೆ ಐಸಿಸಿ ವರ್ಷದ ಕ್ರೀಡಾಸ್ಫೂರ್ತಿ(ಸ್ಪಿರಿಟ್​ ಆಫ್​ ಕ್ರಿಕೆಟ್​) ಮೆರೆದ ಕ್ರಿಕೆಟರ್​ ಪ್ರಶಸ್ತಿಗೆ ಆಯ್ಕೆ ಮಾಡಿದೆ.

2019 ಜೂನ್​ 9 ರಂದು ನಡೆದಿದ್ದ ಆ ಪಂದ್ಯದಲ್ಲಿ ಚೆಂಡು ವಿರೂಪ ಪ್ರಕರಣದಿಂದ ಒಂದು ವರ್ಷ ನಿಷೇಧ ಅನುಭವಿಸಿ ವಿಶ್ವಕಪ್​ನಲ್ಲಿ ಕಮ್​​ಬ್ಯಾಕ್ ಮಾಡಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್​​​ಗೆ ಅಭಿಮಾನಿಗಳು ಬೆಂಬಿಡದೆ ಕಾಡುತ್ತಿದ್ದಾರೆ. ಪ್ರತಿ ಪಂದ್ಯದಲ್ಲಿ ಇವರಿಬ್ಬರು ಕಣಕ್ಕಿಳಿಯುವಾಗ ಇಂಗ್ಲೆಂಡ್​ನಲ್ಲಿ ಅಭಿಮಾನಿಗಳು ಮೊಸಗಾರ, ಚೀಟರ್ ಎಂದು ಕರೆದು ಹೀಯಾಳಿಸುತ್ತಿದ್ದರು.

ಅದೇ ರೀತಿ ಭಾರತದ ವಿರುದ್ಧದ ಪಂದ್ಯದಲ್ಲೂ ಅಭಿಮಾನಿಗಳು ಹೀಗೆ ವರ್ತಿಸಿದ್ದರಿಂದ ಕೋಪಗೊಂಡ ಕೊಹ್ಲಿ, ಚೀಟರ್ ಎಂದು ಹೇಳುವುದನ್ನು ನಿಲ್ಲಿಸಿ, ನಮ್ಮನ್ನು ಪ್ರೋತ್ಸಾಹಿಸಿ ಎಂದು ಕೈ ಸನ್ನೆ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಕೊಹ್ಲಿ ಅವರ ಈ ಕ್ರೀಡಾ ಸ್ಫೂರ್ತಿ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ಅಲ್ಲದೆ ಸ್ಟೀವ್ ಸ್ಮಿತ್ ಅವರು ಕೊಹ್ಲಿಗೆ ಹಸ್ತಲಾಘವ ಮಾಡುವ ಮೂಲಕ ಧನ್ಯವಾದ ಅರ್ಪಿಸಿದರು.


ಐಸಿಸಿಯ ಇತರೆ ಪ್ರಶಸ್ತಿ ಪಡೆದವರು

  • ವರ್ಷದ ಅತ್ಯುತ್ತಮ ಕ್ರಿಕೆಟಿಗನಿಗೆ ನೀಡುವ ಗ್ಯಾರಿ ಸೋಬರ್ಸ್​ ಪ್ರಶಸ್ತಿ- ಬೆನ್​ ಸ್ಟೋಕ್ಸ್​
  • ಐಸಿಸಿ ವರ್ಷದ ಅತ್ಯುತ್ತಮ ಟೆಸ್ಟ್​ ಕ್ರಿಕೆಟರ್​- ಪ್ಯಾಟ್​ ಕಮ್ಮಿನ್ಸ್​
  • ಐಸಿಸಿ ವರ್ಷದ ಅತ್ಯುತ್ತಮ ಏಕದಿನ ಕ್ರಿಕೆಟರ್​- ರೋಹಿತ್​ ಶರ್ಮಾ
  • ಐಸಿಸಿ ವರ್ಷದ ಅತ್ಯುತ್ತಮ ಟಿ20 ಪ್ರದರ್ಶನ- ದೀಪಕ್​ ಚಹಾರ್(​ 7ರನ್​ಗೆ 6 ವಿಕೆಟ್​ ಪಡೆದಿರುವುದು)
  • ಐಸಿಸಿ ವರ್ಷದ ಉದಯೋನ್ಮುಖ ಕ್ರಿಕೆಟಿಗ- ಮಾರ್ನಸ್​ ಲಾಬುಶೇನ್​
  • ಐಸಿಸಿ ವರ್ಷದ ಅಸೋಸಿಯೇಟ್​ ಕ್ರಿಕೆಟರ್​- ಕೈಲ್​ ಕೊಯೆಟ್ಜರ್​(ಸ್ಕಾಟ್ಲೆಂಡ್​)
  • ಐಸಿಸಿ ವರ್ಷದ ಕ್ರೀಡಾ ಸ್ಫೂರ್ತಿ ಕ್ಷಣ: ಸ್ಮಿತ್​ ವಿರುದ್ಧ ಅಭಿಮಾನಿಗಳು ಹಿಯ್ಯಾಳಿಸಿದ್ದನ್ನು ಖಂಡಿಸಿ, ಫೀಲ್ಡಿಂಗ್​ ಚೆಪ್ಪಾಳೆ ತಟ್ಟಲು ತಿಳಿಸಿದ ಕ್ಷಣ
  • ಐಸಿಸಿ ವರ್ಷದ ಅಂಪೈರ್( ಡೇವಿಡ್​ ಶೇಫರ್ಡ್ ಪ್ರಶಸ್ತಿ)- ರಿಚರ್ಡ್ ಇಲ್ಲಿಂಗ್​ವರ್ತ್​​

ABOUT THE AUTHOR

...view details