ಕರ್ನಾಟಕ

karnataka

ETV Bharat / sports

ಕೊಹ್ಲಿ ಮೈದಾನದಲ್ಲಿ ಮಾತ್ರ ವ್ಯಾಘ್ರ, ಆದ್ರೆ ಹೊರಗೆ ಮೃದು ಸ್ವಭಾವದವರು: ಆ್ಯಡಂ ಜಂಪಾ - ಆಸ್ಟ್ರೇಲಿಯಾ ಲೆಗ್​ ಸ್ಪಿನ್ನರ್ ಜಂಪಾ

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೊಹ್ಲಿಗೆ ಬದ್ಧ ಎದುರಾಳಿಯಾಗಿರುವ ಜಂಪಾ ಈ ವರ್ಷದ ಐಪಿಎಲ್​ನಲ್ಲಿ ಕೊಹ್ಲಿ ನಾಯಕತ್ವದಲ್ಲಿ ಆಡಿದ್ದಾರೆ. ಕೊಹ್ಲಿಯನ್ನ ಆಕ್ರಮಣಕಾರಿ ಆಟಗಾರನಾಗಿ ಮಾತ್ರ ಕಂಡಿದ್ದ ಅವರು ಈ ವರ್ಷ ಕೊಹ್ಲಿಯನ್ನು ತುಂಬಾ ಹತ್ತಿರದಿಂದ ಕಂಡಿದ್ದು, ಅವರ ಗುಣವನ್ನು ಶ್ಲಾಘಿಸಿದ್ದಾರೆ.

ಆ್ಯಡಂ ಜಂಪಾ
ಆ್ಯಡಂ ಜಂಪಾ

By

Published : Nov 12, 2020, 6:58 PM IST

ದುಬೈ: ಭಾರತ ಕ್ರಿಕೆಟ್​​ ತಂಡದ ನಾಯಕ ಮೈದಾನದಲ್ಲಿ ಮಾತ್ರ ಸ್ಪರ್ಧಾತ್ಮಕ ವ್ಯಾಘ್ರನಂತೆ ಕಾಣುತ್ತಾರೆ. ಆದರೆ ಮೈದಾನ ಹೊರಗೆ ಅವರ ವ್ಯಕ್ತಿತ್ವ ತುಂಬಾ ಭಿನ್ನವಾಗಿರುತ್ತದೆ ಎಂದು ಆಸ್ಟ್ರೇಲಿಯಾ ಲೆಗ್​ ಸ್ಪಿನ್ನರ್​ ಆ್ಯಡಂ ಜಂಪಾ ಹೇಳಿದ್ದಾರೆ.

ಆಸ್ಟ್ರೇಲಿಯಾದ ವೇಗಿ ಕೇನ್ ರಿಚರ್ಡ್ಸನ್​ ಟೂರ್ನಿಯಿಂದ ಹಿಂದೆ ಸರಿದ ಕಾರಣ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಅವಕಾಶ ಜಂಪಾಗೆ ಸಿಕ್ಕಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೊಹ್ಲಿಗೆ ಬದ್ಧ ಎದುರಾಳಿಯಾಗಿರುವ ಜಂಪಾ ಈ ವರ್ಷದ ಐಪಿಎಲ್​ನಲ್ಲಿ ಕೊಹ್ಲಿ ನಾಯಕತ್ವದಲ್ಲಿ ಆಡಿದ್ದಾರೆ. ಕೊಹ್ಲಿಯನ್ನ ಆಕ್ರಮಣಕಾರಿ ಆಟಗಾರನಾಗಿ ಮಾತ್ರ ಕಂಡಿದ್ದ ಅವರು ಈ ವರ್ಷ ಕೊಹ್ಲಿಯನ್ನು ತುಂಬಾ ಹತ್ತಿರದಿಂದ ಕಂಡಿದ್ದು, ಅವರ ಗುಣವನ್ನು ಶ್ಲಾಘಿಸಿದ್ದಾರೆ.

ಅವರು(ಕೊಹ್ಲಿ) ಮೈದಾನದಲ್ಲಿ ಇರುವುದಕಕ್ಕಿಂದ ಹೊರಗೆ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಿದ್ದಾರೆ. ಅವರ ಆಕ್ರಮಣಶೀಲತೆ ಮತ್ತು ಮೈದಾನದಲ್ಲಿ ಎಷ್ಟು ಸ್ಪರ್ಧಾತ್ಮರಾಗಿರುತ್ತಾರೆಂದು ನೀವು ನೋಡಿರುತ್ತೀರಿ. ಆದರೆ ಅವರು ನಿಜವಾಗಿಯೂ ಮೈದಾನದಿಂದ ಹೊರಗೆ ಬಹಳ ಕೂಲ್​ ಆಗಿರುವ ವ್ಯಕ್ತಿಗಳಲ್ಲಿ ಒಬ್ಬರು ಎಂದು ಜಂಪಾ ಆರ್​ಸಿಬಿ ಕ್ಯಾಪ್ಟನ್​ರನ್ನು ಹೊಗಳಿದ್ದಾರೆ.

ನಿಸ್ಸಂಶಯವಾಗಿ ನೀವು ಅವರ ವಿರುದ್ಧ ಆಡಿದಾಗ ಅವರು ಮೈದಾನದಲ್ಲಿ ಹೇಗಿರುತ್ತಾರೆಂದು ತಿಳಿದಿರುತ್ತೀರಿ. ಆದರೆ ಕ್ರಿಕೆಟ್​ ಮೈದಾನದ ಹೊರಗೆ ಅಂತಹ ವ್ಯಕ್ತಿ ಜೊತೆ ಸಮಯ ಕಳಯಲು ಸಾಧ್ಯವಾದಾಗ ಮಾತ್ರ ಆತ ಎಂತಹ ಮನುಷ್ಯ ಎಂದು ನೋಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಅವರು ಮೈದಾನದಲ್ಲಿ ಸ್ಪರ್ಧಾತ್ಮಕ ಕ್ರೀಡಾಪಟುವೆಂಬುದು ತಿಳಿದಿದ್ದೆ. ಆದರೆ ಈ ಪಯಣದಲ್ಲಿ ನಾನು ಮೊದಲ ಬಾರಿಗೆ ಅವರ ಜೊತೆ ಆಡಿರುವುದರಿಂದ ಮೈದಾನದಲ್ಲಿ ಮತ್ತು ಮೈದಾನದ ಹೊರೆಗೆ ಅವರ ಎರಡು ವಿಭಿನ್ನ ಮುಖಗಳನ್ನು ಕಂಡಿದ್ದೇನೆ. ಕೊಹ್ಲಿ ಮೈದಾನದ ಹೊರೆಗೆ ತುಂಬಾ ಸುಂದರ ವ್ಯಕ್ತಿ ಮತ್ತು ಕೂಲ್​ ಗಾಯ್. ಅವರು ಸದಾ ನಗುತ್ತಲೇ ಇರುತ್ತಾರೆ. ಜೋಕ್ಸ್​ಗಳಿಗೂ ಬಿದ್ದು ಬಿದ್ದು ನಗುತ್ತಾರೆ​ ಎಂದು ಆಸೀಸ್ ಸ್ಪಿನ್ನರ್ ಹೇಳಿದ್ದಾರೆ.

ಜಂಪಾ ಈ ವರ್ಷದ ಐಪಿಎಲ್​ನಲ್ಲಿ ಆರ್​ಸಿಬಿ ಪರ ಕೇವಲ 3 ಪಂದ್ಯಗಳಲ್ಲಿ ಆಡಿದ್ದು, 2 ವಿಕೆಟ್​ ಮಾತ್ರ ಪಡೆದಿದ್ದಾರೆ. ಅವರು ಎಲಿಮಿನೇಟರ್​ ಪಂದ್ಯದಲ್ಲಿ 4 ಓವರ್​ಗಳಲ್ಲಿ ಕೇವಲ 12 ರನ್​ ನೀಡಿ 1 ವಿಕೆಟ್ ಪಡೆದಿದ್ದರು.

ABOUT THE AUTHOR

...view details